Log In | Join Now
Home arrow Vedike arrow Odugara Vedike arrow Shastriya Bhashe Horatakke Rutusu
Shastriya Bhashe Horatakke Rutusu Print
Written by jayashree   

ಬೆಂಗಳೂರು: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎನ್ನುವ ಹೋರಾಟ ದಿನೇದಿನೇ ಬೃಹತ್ ರೂಪ ಪಡೆಯುತ್ತಿದೆ. ಕನ್ನಡಪರ ಕಾರ್ಯಕರ್ತರ ಆಕ್ರೋಶಕ್ಕೆ ಮಂಗಳವಾರ ಕೇಂದ್ರ ಸರ್ಕಾರದ ಕಚೇರಿಗಳು ಗುರಿಯಾಗಿವೆ.


ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಂಗಳವಾರ ಮುಂಜಾನೆ  ಕೋರಮಂಗಲದ ಕೇಂದ್ರಿಯ ಸದನಕ್ಕೆ ಮುತ್ತಿಗೆ ಹಾಕಿ ಹಿಂದಿ ಭಾಷೆಯಲ್ಲಿದ್ದ ನಾಮಫಲಕಗಳನ್ನು ಜಖಂಗೊಳಿಸಿದರು. ಅಲ್ಲದೆ, ಮುಂಭಾಗದ ಪ್ರವೇಶದ್ವಾರಕ್ಕೆ ಬೀಗ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಪೊಲೀಸರು ಕಣ್ಣು ತಪ್ಪಿಸಿ ಕೇಂದ್ರೀಯ ಸದನದ ಆವರಣ ಪ್ರವೇಶಿಸಲು ಯತ್ನಿಸಿದರು. ಅಲ್ಲದೆ, ಹಿಂದಿ ಭಾಷೆಯಲ್ಲಿದ್ದ ನಾಮಫಲಕವನ್ನು ಕಿತ್ತು ಹಾಕಿ ಕನ್ನಡಪರ ಘೋಷಣೆಗಳನ್ನು ಕೂಗಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣ ಗೌಡ, ತಮಿಳುನಾಡಿನ ಪ್ರತಿನಿಧಿಗಳಾಗಿ ಕೇಂದ್ರ ಸರ್ಕಾರ ವರ್ತಿಸುವುದು ಸರಿಯಲ್ಲ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡುವ ತನಕ ಕೇಂದ್ರ ಸರ್ಕಾರದ ಕಚೇರಿಗಳ ಮೇಲೆ ದಾಳಿ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು. ಇದೇ ವೇಳೆಯಲ್ಲಿ ಕಾರ್ಯ ಕರ್ತರು ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದರು.


ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ನಾರಾಯಣಗೌಡ ಸೇರಿದಂತೆ ನೂರ್‍ಆರು ಕಾರ್ಯಕರ್ತರನ್ನು ಬಂಧಿಸಿ ಆಡುಗೋಡಿ ಸಿಎಆರ್ ಪರೇಡ್ ಮೈದಾನದಲ್ಲಿರಿಸಿ ಮಧ್ಯಾಹ್ನ ಬಿಡುಗಡೆ ಮಾಡಿದರು.

 


ಸಂಗ್ರಹ:http://www.kannadaprabha.com

 

Comments (2) >>
...
written by ಮಂಜುನಾಥ ಗೌಡ, August 19, 2008

ಕನ್ನಡಕ್ಕೆ ಇನ್ನು ಶಾಸ್ತ್ರೀಯ ಭಾಷ ಸ್ಥಾನಮಾನಗಳು ಇನ್ನು ದೊರಕ್ಕಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ....
೧) ನಮ್ಮ ಆಡಳಿತ ಭಾಷ ಸಂಪೂರ್ಣ ಕನ್ನಡ ಆಗದೆ ಇರುವುದು.
೨) ನಮ್ಮ ರಾಜಕೀಯ ವ್ಯವಸ್ಥೆ ಕೇವಲ ಆಡಳಿತಕ್ಕೋಸ್ಕರ ಅನ್ನೋದನ್ನು ಬಿಟ್ಟರೆ ಬೇರ ಯಾವ ಕನ್ನಡ ಹೋರಾಟಕ್ಕೂ ಇದು ಲಯಕ್ಕಲ್ಲ ಅನ್ನುವ ವಿಷಯ.....
೩) ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ-ಮಾನ ಕೊಡಬೇಕೋ-ಬೇಡವೋ ಎನ್ನುವುದಕ್ಕೆ ಕೇಂದ್ರ ಸರ್ಕಾರ ಒಂದು ಸಮಿತಿ ರಚಿಸಿತ್ತು ಅದರಲ್ಲ ಒಬ್ಬನು ಸಹ ಕನ್ನಡದವನು ಇಲ್ಲದಿರುವುದು.
೪) ಕನ್ನಡ ಪರ ಸಂಗಟನೆಗಳಿಗೆ ಒಳ್ಳೆಯ ಚಳುವಳಿಗಾರ, ಲೇಖಕ, ಕವಿ ಅಥವಾ ಒಬ್ಬ ಕನ್ನಡ ಪ್ರಾದ್ಯಪಕನನ್ನು ನೇಮಿಸಬೇಕು ಅದು ಬಿಟ್ಟು ಸಿನೆಮ ತಾರೆಯರನ್ನು ನೇಮಿಸಿದರೆ ಅವರು ಕನ್ನಡ ಚಲನ ಚಿತ್ರಗಳ ಬಗ್ಗೆ ತಲೆ ಕೆದಿಕೊಲ್ಲುವವರೇ ವಿನಃ ಕನ್ನಡದ ಬಗ್ಗೆ ಅಲ್ಲ...
೫) ಒಂದು ಸುಸಜ್ಜಿತವಾದ ನ್ಯಾಯ ವ್ಯವಸ್ಥೆ ನಮಗೆ ಬೇಕು.

...
written by bhuvan raju, September 28, 2008

odugare...nammadu ithihasa iruva bashe, yeke namage e sarakara namma bashege innu shastriya sthana kotilla...dayavittu yella kannada bashabimanigalu ondagi koodi ee ondu oratavannu nadesona...jai karnataka maathe

Write comment

busy