|
Railway Di Grup Hudde kannadigarige Nidalu Manavi |
|
|
Written by jayashree
|
|
ಕೇಂದ್ರ ಸರ್ಕಾರವು ರೇಲ್ವೆ ಇಲಾಖೆಯ ಡಿ-ಗ್ರೂಪ್ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ನೈಋತ್ಯ ರೇಲ್ವೇ ಮಜ್ದೂರ್ ಸಂಘ ಒತ್ತಾಯಿಸಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ಎಂ ಎಂ ಡಿಕ್ರುಸ್ ಶುಕ್ರವಾರ ನಗರಕ್ಕೆ ಭೇಟಿ ನೀಡಿ ರೈಲ್ವೇ ನೌಕರರ ಸಮಸ್ಯೆಗಳು ಹಾಗೂ ಸಂಘಕ್ಕೆ ವಿಭಾಗೀಯ ಕಾರ್ಯದರ್ಶಿ ಹಾಗೂ ಖಜಾಂಚಿಗಳನ್ನು ನೇಮಕ ಮಾಡುವ ಸಲುವಾಗಿ ಸಭೆ ನಡೆಸಿದರು. ಆ ನಂತರ ಸಂಘದ ವತಿಯಿಂದ ಈ ಮನವಿಯನ್ನು ಮಾಡಲಾಯಿತು.
ಡಿ-ಗ್ರೂಪ್ ಹುದ್ದೆಗಳನ್ನು ಕನ್ನಡಿಗರಿಗೆ ನೀಡಬೇಕು, ೬ ನೇ ವೇತನ ಆಯೋಗವನ್ನು ಶೀಘ್ರವೇ ಜಾರಿಗೊಳಿಸಬೇಕು. ಈಗ ಇರುವ ೬೬೦೦ ರುಪಾಯಿಗಳ ಮೂಲ ವೇತನವನ್ನು ಪರಿಷ್ಕರಿಸಿ, ಅದನ್ನು ೧೧ ಸಾವಿರ ರು.ಗಳಿಗೆ ಏರಿಸಬೇಕು. ಈಗ ಕೇಂದ್ರದ ವಿತ್ತ ಸಚಿವರಿಂದ ೨೦೦೭ - ೦೮ ರ ಅವಧಿಯ ಬಾಕಿ ಬೋನಸ್ ಹಣವನ್ನು ೨೫೦೦ ರು. ಗಳಿಂದ ೩೦೦೦ ಸಾವಿರ ರುಪಾಯಿಗಳಿಗೆ ಏರಿಸುವಂತೆ ಅನುಮತಿ ಸಿಕ್ಕಿದೆ. ರೈಲ್ವೇ ನೌಕರರ ಸ್ಥಿತಿಗತಿಗಳನ್ನು ಸುಧಾರಿಸಲು ಜು. ೧೧ ನ್ನು ’ಅಖಿಲ ಭಾರತ ಬೇಡಿಕಾ ದಿನ’ ಎಂದು ದೆಹಲಿಯಲ್ಲಿ ನಡೆದ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಡಿಕ್ರುಸ್ ತಿಳಿಸಿದರು.
ಸಂಗ್ರಹ:http://www.kannadaprabha.com
|