Vedike
Odugara Vedike
Kannadakke Kuttu Bandide Banni kannadigarella Ondagona | Kannadakke Kuttu Bandide Banni kannadigarella Ondagona |
|
| Written by jayashree | |
|
ಇತ್ತ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡಕ್ಕೆ ಕೊಡಬೇಕಾದ ಪ್ರಾತಿನಿಧ್ಯಕ್ಕೆ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗಿದೆ. ಛೇ... ಕನ್ನಡಮ್ಮನನ್ನು ಹೀಗೆ ಅದೆಷ್ಟು ಗೋಳು ಹೊಯ್ಯುವುದು...? ಕನ್ನಡ ಕಲಿಯಲು ಕೊಡಲಿ ಪೆಟ್ಟು... ಕನ್ನಡ ನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗದೆ ಹೋರಾಟ ಮಾಡಬೇಕಾದ ವಿಪರ್ಯಾಸ! ನಮ್ಮ ತಾಯಿ ನುಡಿಯಲ್ಲಿ ಕಲಿಯಲು, ಮಾತಾಡಲು, ಯೋಚಿಸಲು ನಮಗೇ ಅಡ್ಡಿ. ಇಂಗ್ಲೀಷಗೆ ಪ್ರಧಾನ ಪಟ್ಟ ದೊರಕಿದರೆ ಇಡೀ ದೇಶವೇ ಆ ಭಾಷೆ ಕಲಿತ ’ಅಕ್ಷರಸ್ಥರು’, ಮತ್ತಿತರದು ’ಅನಕ್ಷರಸ್ಥರು’ ಎಂದು ಎರಡು ಅಸ್ವಾಭಾವಿಕ ಭಾಗವಾಗಿ ಒಡೆದು ಹೋಗುತ್ತದೆ. ಆಗ ಹಳ್ಳಿಗ, ನಿರಕ್ಷರಿ ಅಂತ ಒಂದು ಕಡೆ, ಶ್ರೀಮಂತ - ’ಅಲ್ಪಮಂದಿ’ ಇಂಗ್ಲೀಷ ಕಲಿಯಲಾಗದ ಬಹು ಮಂದಿಯ ಮೇಲೆ ದಬ್ಬಾಳಿಕೆ ನಡೆಸುತ್ತಾರೆಂಬುದು ಖಂಡಿತ.
ಕನ್ನಡದ ಬಗೆಗಿನ ಆ ಪ್ರೀತಿ-ಪ್ರೇಮ ಅಂಗಡಿಯ ಮುಂದೆ ಜಾಹೀರಾತಿಗಾಗಿ ಬಣ್ಣದ ಬಟ್ಟೆ ಉಡಿಸಿ ನಿಲ್ಲಿಸುವ ಬೊಂಬೆಯಂತಾಗಬಾರದು. ಸರ್ಕಾರ ಈ ಕೂಡಲೇ ಹೈಕೋರ್ಟಿನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ಪ್ರಾಜ್ಞರ-ಪಂಡಿತರ- ಭಾಷಾ ಪ್ರೇಮಿಗಳ- ಸಾಹಿತಿಗಳ ಸಲಹಾ ಮಂಡಳಿ ರಚಿಸಿ ಅದರ ಮಾರ್ಗದರ್ಶನ ಪಡೆಯಬೇಕು; ಜನಸಾಮಾನ್ಯರ ನೆರವೂ ಅತ್ಯವಶ್ಯ. ಎಲ್ಲರೂ ಕೈಗೂಡಿಸೋಣ - ಬನ್ನಿ.
|