Log In | Join Now
Home arrow Vedike arrow Odugara Vedike arrow Kannada Bhashe Jeevantike Iduttade
Kannada Bhashe Jeevantike Iduttade Print
Written by jayashree   
ಯಲ್ಲಾಪುರ: ಕನ್ನಡ ಭಾಷೆಯು ನಮ್ಮ ಜೀವಂತಿಕೆಯನ್ನು ಇಡಬಲ್ಲದು. ಒಂದು ಹಾರಕ್ಕೆ ಒಂದೊಂದು ಮಣಿ ಕೂರಿಸಿದಂತೆ ಕನ್ನಡದ ನಡುವೆ ಒಂದೊಂದು ಸಂಸ್ಕೃತ ಶಬ್ಧ ಅಲಂಕಾರ ಕೊಡುತ್ತದೆ.

ಕನ್ನಡ ಜನತೆಯ ಹತ್ತಿರ ಹೋಗಬೇಕಾದರೆ ಅದು ಸರಳವಾಗಿರಬೇಕು. ನಮ್ಮತನವನ್ನು ನಾವು ಮರೆಯಬಾರದು  ಎಂದು ಕವಿ. ಸಾಹಿತಿ ವನರಾಗ ಶರ್ಮಾ ಹೇಳಿದರು. ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ ಕಾರವಾರ ಇವರು ಸರ್ವೋದಯ ಪ್ರೌಢಶಾಲೆ ವಜ್ರಳ್ಳಿಯಲ್ಲಿ ನಡೆಸಿದ ಕನ್ನಡ ಭಾಷಾ ಕಲಿಕೆ ಉಪನ್ಯಾಸಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದರು. ವೈಟಿಎಸ್‌ಎಸ್‌ನ ಉಪನ್ಯಾಸಕರಾದ ಎಲ್.ಎಂ.ಹೆಗಡೆ, ’ಕನ್ನಡ ಭಾಷಾ ಅಭಿವೃದ್ಧಿ - ಮಾನವೀಕ ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಂತೆ’ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು. ಸಾಂಸ್ಕೃತಿಕ ಚಿಂತಕ ನಾರಾಯಣ ಗಾಂವ್ಕರ ಬಾಳಂತಪಾಲ ಕನ್ನಡ ಭಾಷೆ- ಪ್ರಾಚೀನತೆ ಮತ್ತು ಆಧುನಿಕತೆ’ ವಿಷಯ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿ.ವಿ. ಭಟ್ಟ ಬಾಸಲ ಮಾತನಾಡಿ, ಕಳೆದು ಹೋಗುತ್ತಿರುವ ಕನ್ನಡವನ್ನು ನಾವು ಬೆಳೆಸಬೇಕಿದೆ. ನಮ್ಮ ಜನರು ಅನೇಕರು ಬೆಂಗಳೂರಿನಲ್ಲಿ ಇದ್ದಾರೆ. ಊರಿಗೆ ಬಂದಾಗ ತಮಗೆ ಕನ್ನಡವೇ ಬಾರದ ಹಾಗೆ ವರ್ತಿಸುತ್ತಾರೆ. ಕನ್ನಡದ ಮೇಲಿನ ಅಭಿಮಾನವನ್ನು  ಆ ರೀತಿ ಇಟ್ಟುಕೊಳ್ಳಬಾರದೆಂದರು.


ಶಿಕ್ಷಕ ಗಣಪತಿ ಕಂಚಿಪಾಲ ಸ್ವಾಗತಿಸಿದರು. ಚೈತ್ರಾ ಸಂಗಡಿಗರು ಪ್ರಾರ್ಥನೆ ಶಿಕ್ಷಕ ಕೆ.ಎಂ. ಭಟ್ಟ ನಿರೂಪಿಸಿದರು. ಡಿ.ಜಿ. ಭಟ್ ದುಂಡಿ ವಂದಿಸಿದರು.

 

 


ಸಂಗ್ರಹ: http://www.kannadaprabha.com

Comments (0) >>
Write comment

busy