Log In | Join Now
Home arrow Sahitya Suddi arrow Sahitya suddi arrow Veerashaivaru Vachana sahitya Rakshisali
Veerashaivaru Vachana sahitya Rakshisali Print
Written by jayashree   

.ಮುಂದಿನ ಪೀಳಿಗೆಗೆ ಹಿಂದಿನ ಶರಣರ ವಚನಗಳ ಕುರಿತು ಅರಿವು ಬರಬೇಕಾದರೆ ಎಲ್ಲ ವೀರಶೈವ ಮಠಗಳು ಮತ್ತು ಮಠಾಧೀಶರು ವಚನ ಸಾಹಿತ್ಯ ರಕ್ಷಣೆಗೆ ಮುಂದಾಗಬೇಕು ಎಂದು ಶಿವಮೊಗ್ಗದ ಹಿರಿಯ ಬರಹಗಾರ ಜಯದೇವಪ್ಪ ಜಯನಕೇರಿ ನುಡಿದರು.

ಅವರು ಸೋಮವಾರ ಇಳಕಲ್ ವಿಜಯ ಮಹಾಂತೇಶ್ವರ ಮಠದಲ್ಲಿಯ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ನಡೆದ ಲಿಂಗವಂತ ಧರ್ಮಗ್ರಂಥ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.


ಸರಳ ಭಾಷೆಯ ವಚನ ಸಾಹಿತ್ಯದ ಅವಶ್ಯಕತೆ ಇದೆ. ನಾವು ರಕ್ಷಿಸಿದ ವಚನ ಸಾಹಿತ್ಯ ಗ್ರಂಥಗಳು ನಮಗೆ ದಾರಿ ದೀಪವಾಗುವದರಲ್ಲಿ ಸಂದೇಹವಿಲ್ಲ ಎಂದರು. ಸಾನ್ನಿಧ್ಯವನ್ನು ವಿಜಯ ಮಹಾಂತ ಶ್ರೀ, ಗುರು ಮಾಹಾಂತ ಶ್ರೀ ಶಿರೂರಿನ ಡಾ. ಬಸವರಾಜ ಸ್ವಾಮೀಜಿ ಹಾಗೂ ಚನ್ನಬಸವ ದೇವರು ಮುಂತಾದವರು ವಹಿಸಿದ್ದರು.


ಗ್ರಂಥಗಲ ಆಯ್ಕೆಯಲ್ಲಿ ಪ್ರಥಮ ಸ್ಥಾನ ಪಡೆದ ವಚನ ಸಂಪದ ಗ್ರಂಥದ ಲೇಖಕ ಶಿವಮೊಗ್ಗದ ಜಯದೇವಪ್ಪ ಜಯನಕೇರಿ ಹಾಗೂ ದ್ವಿತೀಯ ಸ್ಥಾನ ಪಡೆದ ವಚನಾಮೃತ ಗ್ರಂಥದ ಬರಹಗಾರ ಚಿಕ್ಕ ಬಾದವಾಡಗಿಯ ಎನ್. ಬಿ. ಹಾದಿಮನಿ ಅವರಿಗೆ ಶ್ರೀಮಠವು ವಚನ ಕಾರುಣ್ಯ ಪ್ರಶಸ್ತಿ ನೀಡಿತು. ನಗರಸಭೆ ಉಪಾಧ್ಯಕ್ಷ ಅರವಿಂದ ಮಂಗಳೂರ, ಲಿಂಗವಂತ ಧರ್ಮಗ್ರಂಥ ಬಹುಮಾನ ಸಮಿತಿ ಅಧ್ಯಕ್ಷ ವಿ.ವಿ. ಅಲೆಗಾಂವಿ, ಕಾರ್ಯದರ್ಶಿ ಡಾ. ಶಂಭು ಬಳಿಗಾರ ಇತರರು ಇದ್ದರು.


ಸಂಗ್ರಹ:http;//www.kannadaprabha.com

Comments (0) >>
Write comment

busy