Sahitya Suddi
Sahitya suddi
Vachanagalalli Badukina Sarthakate : Mahesh | Vachanagalalli Badukina Sarthakate : Mahesh |
|
| Written by jayashree | |
|
ಸ್ಥಳೀಯ ವೀರಶೈವ ಸಮಾಜದ ವತಿಯಿಂದ ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ಹೇಳಿದರು. ಸಾನಿಧ್ಯ ವಹಿಸಿದ್ದ ಸೋಮವಾರಪೇಟೆ ವಿರಕ್ತ ಮಠದ ವಿಶ್ವೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣರ ಧಾರ್ಮಿಕ ತತ್ವಗಳು ಹಾಗೂ ವಿಚಾರಧಾರೆಗಳನ್ನು ಎಲ್ಲರೂ ಪಾಲಿಸಬೇಕಾಗಿದೆ ಎಂದು ಕರೆ ನೀಡಿದರು. ಸೋಮವಾರಪೇಟೆ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎ.ಎಸ್. ಮಲ್ಲೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ಸ್ಥಳೀಯ ಘಟಕಾಧ್ಯಕ್ಷ ಎಂ.ಬಿ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ತೊರೆನೂರು ಮಠದ ಚರಮುರ್ತಿ ಮಹಾಂತ ಸ್ವಾಮಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಎಸ್.ಪಿ. ಮಹಾದೇವಪ್ಪ, ಸಮಾಜದ ಮುಖಂಡರಾದ ಕೆ.ಸಿ.ನಂಜುಂಡಸ್ವಾಮಿ, ಎಚ್. ಪಿ. ಸಂಗಮೇಶ್ ಹಾಜರಿದ್ದರು. ನಿರ್ದೇಶಕರಾದ ಎಚ್.ವಿ. ಶಿವಪ್ಪ ವಂದಿಸಿದರು. ಡಿ.ಬಿ. ಮಂಜುನಾಥ್ ನಿರೂಪಿಸಿದರು.
|