Log In | Join Now
Home arrow Sahitya Suddi arrow Sahitya suddi arrow Sharanu Sharanarthi Kruti Bidugade
Sharanu Sharanarthi Kruti Bidugade Print
Written by jayashree   
ಸವದತ್ತಿ: ವಿಶ್ವ ಮಾನವ ಬಸವಣ್ಣನವರ ಜೀವನವನ್ನಾಧರಿಸಿ ಸವದತ್ತಿಯ ಲೇಖಕ ಮಹಾದೇವ ಆರಿಬೆಂಚಿ ಬರೆದ ’ಶರಣ ಶರಣಾರ್ಥಿ’  ನಾಟಕ ಕೃತಿ ಬಿಡುಗಡೆಯನ್ನು ನಾಟಕ ಅಕಾಡೆಮಿ ಮಾಜಿ ಸದಸ್ಯ ರವಿ ಕೋಟಾರಗಸ್ತಿ ಭಾನುವಾರ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಸಮಾನತೆ ಹಾಗೂ ಕಮ್ಯುನಿಷ್ಟ ತತ್ವಗಳನ್ನಿ ಜಗತ್ತಿಗೆ ಮೊದಲು ತಿಳಿಸಿದ ಬಸವಣ್ಣನವರ ಮೇಲಿನ ’ಶರಣು ಶರಣಾರ್ಥಿ’ ಅಪ್ರತಿಮ ಕೃತಿಯಾಗಿದೆ ಎಂದರು.

ಅಧ್ಯಕ್ಷತೆಯನ್ನು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೋಹನ ಏಣಗಿ, ಬಸವರಾಜ ಕಾರದಗಿ, ಆನಂದ ಚೋಪ್ರಾ, ಪ್ರೊ. ಎಚ್.ಕೆ. ಗುರವ, ಎಂ.ಎಂ. ಹಿರಲಿಂಗಣ್ಣವರ, ಪುಂಡಲೀಕ ಬಾಳೋಜಿ, ಮಹಾದೇವರಾದ ಘೇವಡೆ, ದಿಲೀಪ ಜಂಬಗಿ, ಧರೆಪ್ಪ ತುರಾಯಿ, ಶಂಕಗೌಡ ಪಾಟೀಲ, ಸುಧೀರ ದೊಡಮನಿ, ಸದಾಶಿವ ಮಿರಜಕರ, ಬಾಳಪ್ಪ ಮಡ್ಲಿ, ಝಕೀರ ನದಾಫ ಮುಂತಾದವರು ಉಪಸ್ಥಿತರಿದ್ದರು. ಸಾನಿಧ್ಯವನ್ನು ಇನಾಂಹೊಂಗಲದ ಸಿದ್ಧಲಿಂಗ ಸ್ವಾಮೀಜಿ ವಹಿಸಿದ್ದರು. ಡಾ. ಎಂ.ಸಿ. ಹೂಗಾರ ಕೃತಿ ಪರಿಚಯಿಸಿದರು. ಸೀಮಾ ಆರಿಬೆಂಚಿ ನಾಟ್ಯ ಮಾಡಿ ರಂಜಿಸಿದರು. ಸವದತ್ತಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಲೇಖಕ ಮಹಾದೇವ ಆರಿಬೆಂಚಿ ಅವರನ್ನು ಸನ್ಮಾನಿಸಲಾಯಿತು. ಎಚ್.ಕೆ. ಗುರವ ಇದ್ದರು.

 


ಸಂಗ್ರಹ: http://www.kannadaprabha.com

Comments (0) >>
Write comment

busy