Log In | Join Now
Home arrow Sahitya Suddi arrow Sahitya suddi arrow Sahitya Parishattina Aarthika Svayattatege Aadyate
Sahitya Parishattina Aarthika Svayattatege Aadyate Print
Written by jayashree   

ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ಸ್ವಾಯತ್ತತೆ ಮತ್ತು ಬದ್ಧತೆಯನ್ನು ತರುವುದು ನನ್ನ ಆದ್ಯತೆ ಎಂದು ಪರಿಷತ್ತಿನ ಕೇಂದ್ರ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.


ಆಗಷ್ಟ್ ೨೪ ರಂದು ನಡೆಯಲಿರುವ ಪರಿಷತ್ತಿನ ಚುನಾವಣಾ ಪ್ರಚಾರಾರ್ಥವಾಗಿ ಮಂಗಳವಾರ ಬೆಳಗಾವಿಗೆ ಆಗಮಿಸಿದ್ದ ಅವರು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಆರ್ಥಿಕ ಕೊರತೆಯ ಕಾರಣ ಪರಿಷತ್ತಿನಿಂದ ಹೆಚ್ಚಿನ ಕಾರ್ಯಗಳು ಸಾಧ್ಯವಾಗುತ್ತಿಲ್ಲ. ನಾನು ಅಧ್ಯಕ್ಷ ನಾದರೆ ಪರಿಷತ್ತಿನ ಆಡಳಿತದಲ್ಲ್ ಪಾರದರ್ಶಕತೆ ತರುತ್ತೇನೆ ಮತ್ತು ಶಾಶ್ವತ ಆರ್ಥಿಕ ಸ್ಥಾಯಿ ನಿಧಿ ಸ್ಥಾಪಿಸುತ್ತೇನೆ ಎಂದು  ಅವರು ಹೇಳಿದರು. ಪರಿಷತ್ತು ಜನಸಾಮಾನ್ಯರ ಸ್ವತ್ತಾಗಬೇಕು. ಸಾಹಿತ್ಯ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆಗೊಳಿಸಲು ಆದ್ಯತೆ ನೀಡಬೇಕು.


ಇದರ ಜೊತೆಗೆ ಕನ್ನಡ ನಾಡು -ನುಡಿ, ನೆಲ-ಜಲ ಸಂರಕ್ಷಣೆ ಹಿನ್ನೆಲೆಯಲ್ಲಿ ಬಂದಿರುವ ಆಯೋಗಗಳ ಶಿಫಾರಸ್ಸು ಅನುಷ್ಠಾನ, ಅಗತ್ಯವಿರುವ ಕಡೆ ಹೋರಾಟ, ಐಟಿ-ಬಿಟಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಕ್ಕಾಗಿ ಒತ್ತಾಯ, ಸರ್ಕರದ ಜೊತೆ ಸೌಹಾರ್ದಯುತ ಸಂಬಂಧ, ಶಾಸ್ತ್ರಿಯ ಭಾಷೆ ಸ್ಥಾನಮಾನಕ್ಕೆ ಹಕ್ಕೋತ್ತಾಯ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದೇನೆ ಎಂದು ಪ್ರಸಾದ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮೋಹನ ಪಾಟೀಲ, ಕೊಪ್ಪಳದ ಶೇಖರಗೌಡ ಪಾಟೀಲ, ಪ್ರೊ.ಎನ್. ಚಂದ್ರಪ್ಪ, ಪ್ರಮೋದ ತುರವಿಹಾಳ, ರಾಜೀವ ಟೋಪಣ್ಣವರ ಮೊದಲಾದವರು ಉಪಸ್ಥಿತರಿದ್ದರು.

 


ಸಂಗ್ರಹ:http://www.kannadaprabha.com

Comments (0) >>
Write comment

busy