Log In | Join Now
Home arrow Sahitya Suddi arrow Sahitya suddi arrow Sahitya Parishat Gadduge yaara Palige
Sahitya Parishat Gadduge yaara Palige Print
Written by jayashree   
ಬೆಂಗಳೂರು: ಭವ್ಯ ಹಿನ್ನೆಲೆ ಇರುವ, ಸಾಂಸ್ಕೃತಿಕ ಮಹತ್ವವುಳ್ಳ, ಹೆಸರಾಂತ ಸಾಹಿತಿಗಳು ಅಧ್ಯಕ್ಷರಾಗಿದ್ದ, ಕನ್ನಡ ನಾಡು - ನುಡಿ ಕಟ್ಟುವ ಉಜ್ವಲ ಕೈಂಕರ್ಯದಲ್ಲಿ ಮುಂದಾಳತ್ವ ವಹಿಸಬೇಕಾದ ಕನ್ನಡ ಸಾಹಿತ್ಯ ಪರಿಷತ್ತಿನ ೨೩ ನೇ ಅಧ್ಯಕ್ಷಗಿರಿಗೆ ತೀರ್ವ ಪೈಪೋಟಿ ನಡೆದಿದ್ದು ವೇದಿಕೆ ಸಜ್ಜಾಗಿದೆ. ಪರಿಷತ್ತಿನ ಅಧ್ಯಕ್ಷ ಸ್ಥಾನದ ಗೌರವ ಯಾರ ಕೊರಳಿಗೆ? ಎಂಬ ಪ್ರಶ್ನೆಗೆ ಆಗಸ್ಟ್ ೨೪ ರಂದು ಭಾನುವಾರ ನಡೆಯುವ ಚುನಾವಣೆ ಉತ್ತರ ನೀಡಲಿದೆ. ೨೬ ರಂದು ಫಲಿತಾಂಶ ಹೊರಬೀಳಲಿದೆ.

ಚುನಾವನೆಗೆ ಅಖಾಡ ಸಜ್ಜಾಗಿದೆ. ’ಸಾರಸ್ವತ ಲೋಕದ ಜಟ್ಟಿಗಳು’ ವಿವಿಧ ಪಟ್ಟುಗಳನ್ನು ಹಾಕಿ ಚುನಾವಣಾ ಕುರುಕ್ಷೇತ್ರಕ್ಕಿಳಿದು ಸಜ್ಜಾಗಿದ್ದಾರೆ. ಅಧ್ಯಕ್ಷ ಗಾದಿಗೇರಲು ಅಭ್ಯರ್ಥಿಗಳು ಹರಸಾಹಸ ನಡೆಸುತ್ತಿದ್ದು, ಈಗಾಗಲೇ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಮತದಾರರ ಓಲೈಕೆ ಕಾರ್ಯ ಮುಗಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಲ್ಲೂರು ಪ್ರಸಾದ್, ವೀರಣ್ಣ ಹಾಗೂ ವಿದ್ಯಾಶಂಕರ್ ಅವರು ಮುಂಚೂಣಿಯಲ್ಲಿರುವ ಅಭ್ಯರ್ಥಿಗಳು. ತಮ್ಮ ಸ್ಥಳೀಯ ಪ್ರಭಾವವನ್ನು ಬಳಸಿ ಮತದಾರರನ್ನು ಸೆಳೆಯುವಲ್ಲಿ ಇವರೆಲ್ಲಾ ಪ್ರಯತ್ನ ನಡೆಸಿದ್ದಾರೆ. ಈ ಮೂವರನ್ನು ಹೊರತುಪಡಿಸಿದಂತೆ  ಮ.ಚಿ. ಕೃಷ್ಣಾ, ಜಿ. ವಿ. ಪ್ರಭಾಕರ್ ರಾವ್, ಲಕ್ಷ್ಮಣರಾವ್ ಗೋಗಿ, ಸೋಸಲೆ ಜವರಯ್ಯ ಕಣದಲ್ಲಿರುವ ಇತರ ಅಭ್ಯರ್ಥಿಗಳು.

 


ಸಂಗ್ರಹ: http;//www.kannadaprabha.com

Comments (0) >>
Write comment

busy