Log In | Join Now
Home arrow Sahitya Suddi arrow Sahitya suddi arrow Rajyamattada Hanigavana Spardheya Phalitansha Prakata
Rajyamattada Hanigavana Spardheya Phalitansha Prakata Print
Written by jayashree   
ರಬಕವಿ; ಖ್ಯಾತ ಕಾದಂಬರಿಕಾರ ದು.ನಿಂ. ಬೆಳಗಲಿ ಅವರ ೮ನೇ ಪುಣ್ಯ ಸ್ಮರಣಾರ್ಥವಾಗಿ ಏರ್ಪಡಿಸಿರುವ ದು.ನಿಂ. ಬೆಳಗಲಿ ಸಾಹಿತ್ಯ ಪ್ರಶಸ್ತಿಗಾಗಿ ನಡೆದ ರಾಜ್ಯಮಟ್ಟದ ಅಪ್ರಕಟಿತ ಹನಿಗವನಗಳ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ರಾಣಿಬೆನ್ನೂರು ತಾಲೂಕಿನ ತುಮ್ಮನಕಟ್ಟಿಯ ಶಿಕ್ಷಕ ಎಚ್. ಆರ್. ವೆಂಕಣ್ಣನವರ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ತೀರ್ಥಹಳ್ಳೀ ತಾಲೂಕಿನ ಆಲೂರು - ಹೋಸ್ಕೋಪ್ಪದ ಶ್ರೀಧರಿ ದ್ವಿತಿಯ ಮತ್ತು ಬಾದಾಮಿ ತಾಲೂಕಿನ ಸುರೇಶ ಎಂ. ಅರಳೀಮಠ ತೃತೀಯ ಸ್ಥಾನ ಪಡೆದಿದ್ದಾರೆ.


ಮಂಡ್ಯದ ರೋಷನ್ ಛೋಪ್ರಾ, ತೇರದಾಳದ ಅಣ್ಣಾಜಿ ಕುಲಕರ್ಣಿ, ಜಮಖಂಡಿಯ ಉದಯಕುಮಾರ್ ದಾನಿ, ಬಿಜಾಪುರದ ಕಂಚಾಣಿ ಶರಣಪ್ಪ, ಸಿಂದಗಿಯ ಭಾರತಿ ಪಾಟೀಲ, ಬಿಜಾಪುರದ ಜಂಬುನಾಥ ಕಂಚ್ಯಾಣಿ, ತಂಬ್ರಹಳ್ಳಿಯ ಹೆಚ್. ಕೃಷ್ಣಮೂರ್ತಿ ಅವರ ಹನಿಗವನಗಳು ಮೆಚ್ಚುಗೆಗೆ ಪಾತ್ರವಾಗಿವೆ.


ಆ.೩೧ ರಂದು ಜರುಗಲಿರುವ ದು.ನಿಂ ಬೆಳಗಲಿ ಅವರ ೮ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ವಿಜೇತರಿಗೆ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಕಾದಂಬರಿಕಾರ ಕುಂ.ವೀರಭದ್ರಪ್ಪ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಪ್ರತಿಷ್ಠಾನದ ಸಂಚಾಲಕ ಮಧುಕೇಶ್ವರ ಬೆಳಗಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 


ಸಂಗ್ರಹ:http://www.kannadaprabha.com

Comments (0) >>
Write comment

busy