Log In | Join Now
Home arrow Sahitya Suddi arrow Sahitya suddi arrow Pashu Pakshigalu Sangeetakke Manasoluttave Sunanda
Pashu Pakshigalu Sangeetakke Manasoluttave Sunanda Print
Written by jayashree   
ತುಮಕೂರು: ಸಂಗೀತ ಎಂಬುದು ಎಲ್ಲರಿಗೂ ಆಹ್ಲಾದಕರವಾದ ಧ್ವನಿ ವಿಶೇಷ. ಪಶು - ಪಕ್ಷಿ ಮುಂತಾದುವುಗಳು ಕೂಡ ಸಂಗೀತದ ಆಕರ್ಷಣೆಗೊಳಗಾಗಿ ಮೈಮರೆತು ಬಿಡುತ್ತವೆ ಎಂದು ತುಮಕೂರು ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ತುಂಕೂರು ಸುನಂದ ಪ್ರತಿಪಾದಿಸಿದರು.

ಅವರು ತುಮಕೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಎಸ್‌ಎಸ್ ಪುರಂ ನಲ್ಲಿ ಏರ್ಪಡಿಸಿದ್ದ ಮುದ್ದೇನಹಳ್ಳಿ ನಂಜಯ್ಯನವರ ಶ್ರೀ ಶಿವಕುಮಾರ ಚರಿತ ಕೃತಿಯ ಗಮಕ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಡಿ. ಎನ್ ಯೋಗೀಶ್ ಮಾತನಾಡಿ, ಸಂಗೀತ ಮಾನವನಿಗೆ ನಿಸರ್ಗದಿಂದ ದೊರೆತ ಕೊಡುಗೆ, ಸಂಗೀತ ಮಾನವನ ಮೇಲು - ಕೀಳು, ಬಡವ - ಬಲ್ಲಿದ ಎಂಬ ಭಾವನೆಗಳನ್ನು ದೂರೀಕರಿಸಿ ಹೃದಯ ಸಂಸ್ಕಾರ, ಭಾವೈಕ್ಯತೆಯನ್ನುಂಟು ಮಾಡುವ ಅದ್ಭುತ ಕಲೆ ಎಂದರು.


ತುಮಕೂರು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾ ಮಲ್ಲಣ್ಣ ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ ಮತ್ತು ದೂರದರ್ಶನ ಗಮಕ ಕಲಾವಿದರಾದ ಲಕ್ಷ್ಮೀ ಜೈ ಪ್ರಕಾಶ್ ಶಿವಕುಮಾರ ಚರಿತೆಯ ಕೆಲವು ಆಯ್ದ ಪದ್ಯಗಳನ್ನು ವಾಚಿಸಿದರು. ಗಮಕಿ ವಿದ್ವಾನ್ ಎಂ. ಜಿ. ಸಿದ್ಧರಾಮಯ್ಯ ವ್ಯಾಖ್ಯಾನಿಸಿದರು. ಲೇಖಕಿಯರ ಸಂಘದ ಅಧ್ಯಕ್ಷೆ ಎಂ.ಸಿ. ಲಲಿತಾ ಹಾಜರಿದ್ದರು. ಆಶಾ, ಸಿಂಧು ಪ್ರಾರ್ಥಿಸಿ, ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿ, ಎಲೆ ರಾಂಪುರ ರುದ್ರಮೂರ್ತಿ ನಿರೂಪಿಸಿ ವಂದಿಸಿದರು. ಮಿಮಿಕ್ರಿ ಈಶ್ವರಯ್ಯ  ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.

 

 

ಸಂಗ್ರಹ: http://www.kannadaprabha.com

 

Comments (0) >>
Write comment

busy