|
Neeru Aranya Malinya Kruti Bidugade |
|
|
Written by jayashree
|
|
ಬೆಳಗಾವಿ : ಪಂಚ ಮಹಾಭೂತಗಳ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಭವಿಷ್ಯದ ಉಳಿವಿಗಾಗಿ ಇದನ್ನು ಪಾಲಿಸಲೇಬೇಕಾದ ಅಗತ್ಯವಿದೆ ಎಂದು ಸಾಹಿತಿ ಜಿನದತ್ತ ದೇಸಾಯಿ ಪ್ರತಿಪಾದಿಸಿದರು.
ಬೆಳಗಾವಿಯ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿ ನೀಲಗಂಗಾ ಚರಂತಿಮಠ ಅವರ "ನೀರು’ ’ಅರಣ್ಯ’ ಮತ್ತು ’ಮಾಲಿನ್ಯ’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನಮ್ಮ ಸುತ್ತಮುತ್ತಲಿನ ವಾತಾವರಣ ಆಹ್ಲಾದಕರವಾಗಿರಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕೆಂದು ದೇಸಾಯಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಗಳು, ಶುದ್ಧ ಪರಿಸರ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ಕಳು ಚಿಕ್ಕಂದಿನಿಂದಲೇ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು ಎಂದರು. ಲೇಖಕಿ ನೀಲಗಂಗಾ ಚರಂತಿಮಠ ಮತ್ತು ಮುಖ್ಯ ಅತಿಥಿ ಸದಾನಂದ ಕಾಕಡೆ ಮಾತನಾಡಿದರು. ಸರಳಾ ಹೆರೇಕರ, ಶೈಲಜಾ, ಹೊಸಮಠ, ಕಲ್ಪನಾ ಪಾಟೀಲ ಉಪಸ್ಥಿತರಿದ್ದರು. ಅಮೃತ ಚರಂತಿಮಠ ಸ್ವಾಗತಿಸಿದರು. ಡಾ. ಅಶ್ವಿನಿ ನಿರೂಪಿಸಿದರು. ದತ್ತಾತ್ರಯ ಭಟ್ಟ ವಂದಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಹಣ್ಣು ಹಂಪಲ ಮತ್ತು ಪುಸ್ತಕ ವಿತರಣೆ ಮಾಡಲಾಯಿತು.
ಸಂಗ್ರಹ:http://www.kannadaprabha.com
|