Log In | Join Now
Home arrow Sahitya Suddi arrow Sahitya suddi arrow Nale pustaka Bidugade
Nale pustaka Bidugade Print
Written by jayashree   
ಹೊಸಪೇಟೆ : ಇಲ್ಲಿನ ವಿಕಾಸ ಯುವಕ ಮಂಡಳಿಯಿಂದ ’ನೆನಪಿನಂಗಳದಲ್ಲಿ ತುಕಾರಾಂ ಮೇಷ್ಟು’ ಪುಸ್ತಕ ಬಿಡುಗಡೆ ಸಮಾರಂಭ ನಗರದ ಮಲ್ಲಿಗೆ ಹೊಟೇಲ್ ಸಭಾಂಗಣದಲ್ಲಿ ಜು. ೬ರಂದು ಸಂಜೆ ೬ ಗಂಟೆಗೆ ನಡೆಯಲಿದೆ.

ಶಾಸಕ ಬಿ.ಎಸ್. ಆನಂದ್ ಸಿಂಗ್ ಅವರು ಪುಸ್ತಕ ಬಿಡುಗಡೆಗೊಳಿಸುವರು. ಸಾಹಿತಿ ಇಟಗಿ ಈರಣ್ಣ ಪುಸ್ತಕ ಕುರಿತು ಮಾತನಾಡುವರು.

 

ತಹಸೀಲ್ದಾರ್ ಡಾ|ಪ್ರಜ್ಞಾ ಅಮ್ಮೆಂಬಳ್, ಸರ್ವೋದಯ ಟ್ರಸ್ಟನ ಅಧ್ಯಕ್ಷ ಸೌಹಾರ್ದ ಸಹಕಾರಿ ನಿಗಮದ ಅಧ್ಯಕ್ಷ ಕೆ. ಸೋಮಶೇಖರ್, ವಿಕಾಸ ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಹಿರೇಮಠ್ ಭಾಗವಹಿಸುವರು.


ವಿಕಾಸ ಯುವಕ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಜಿ. ಮೂರಮಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಮಂಡಳಿ ಕಾರ್ಯದರ್ಶಿ ಲಕ್ಷ್ಮಣ ಹಾಗೂ ಉಪಾಧ್ಯಕ್ಷ ರಮೇಶ್ ತಿಳಿಸಿದ್ದಾರೆ.

 


ಸಂಗ್ರಹ: http://www.kannadaprabha.com

Comments (0) >>
Write comment

busy