Log In | Join Now
Home arrow Sahitya Suddi arrow Sahitya suddi arrow Nadoja Dr. Kayyara Kimjanna rai 94
Nadoja Dr. Kayyara Kimjanna rai 94 Print
Written by jayashree   
ಕಾಸರಗೋಡು: ಕನ್ನಡದ ಮೇರು ಕವಿ, ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಅವರು ೯೩ ಸಂವತ್ಸರ ಪೂರೈಸಿ ೯೪ಕ್ಕೆ ಕಾಲಿರಿಸಿದ ಶುಭ ಸಂದರ್ಭಕ್ಕೆ ಇದೇ ಜೂ. ೨ ರಂದು ಕಾಸರಗೋಡಿನ ಪೆರಡಾಲದ ಕವಿ ನಿವಾಸ  ’ಕವಿತಾ ಕುಟೀರ’ ಸಾಕ್ಷಿಯಾಯಿತು.

ಕವಿತಾ ಕುಟೀರದ ಮನೆಯಂಗಳದಲ್ಲಿ ಸದ್ದುಗದ್ದಲವಿಲ್ಲದೆ, ಡಾ. ಕಯ್ಯಾರ ಅವರು ತಮ್ಮ ೯೪ ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಜಿನುಗುತ್ತಿದ್ದ ಮಳೆಯ ಮಧ್ಯೆ ಕಯ್ಯಾರ ಅಭಿಮಾನಿ ಬಳಗ ಹಿರಿಯ ಚೇತನಕ್ಕೆ ಶುಭ ಹಾರೈಸಲು ಸಾಹಿತ್ಯಾಭಿಮಾನಿಗಳು, ಬಂಧುಗಳು ನೂರಾರು ಸಂಖ್ಯೆಯಲ್ಲಿ  ಕವಿತಾ ಕುಟೀರಕ್ಕಾಗಮಿಸಿದ್ದರು.


ಕಾಸರಗೋಡಿನ ಕರಾವಳೀ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮು ಕಾಸರಗೋಡು ಅವರ ನೇತೃತ್ವದ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ -೯೪ ಅಭಿನಂದನ ಸಮಿತಿ, ಕಾಸರಗೋಡು ಕಾರ್ಯಕ್ರಮ ಆಯೋಚಿಸಿತ್ತು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಜಾನಪದ ವಿದ್ವಾಂಸ ಡಾ. ಪಿ. ವೆಂಕಟರಾಜ ಪುಣಿಂಚಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರ್ತತ್ವ ಶಕ್ತಿಯುಳ್ಳ ಧೀಮಂತ ಕವಿ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಅವರು ಕಾಸರಗೋಡಿನ ಹೆಸರನ್ನು ದೇಶದ ಭೂಪಟದಲ್ಲಿ ಗುರ್ತಿಸುವಂತೆ ಮಾಡಿದ್ದಾರೆಂದರು.


ಕಾಸರಗೋಡು ಶಾಸಕ ಸಿ.ಟಿ. ಅಹಮ್ಮದಾಲಿ ಅವರು ಕಯ್ಯಾರ ಅವರನ್ನು ಶಾಲು ಹೊದೆಸಿ ಫಲ ತಾಂಬೂಲ ಸ್ಮರಣಿಕೆಯನ್ನಿತ್ತು ಅಭಿನಂದಿಸಿದರು.

 

 

ಸಂಗ್ರಹ: http://www.kannadaprabha.com

 

Comments (0) >>
Write comment

busy