|
Katarnalli Vishva Kannada Sammelana |
|
|
Written by jayashree
|
|
ಬೆಂಗಳೂರು: ಕತಾರ್‌ನ ದೋಹಾದಲ್ಲಿರುವ ಗಲ್ಫ್ ಸಿನಿಮಾ ಸಭಾಂಗಣದಲ್ಲಿ ನವಂಬರ್ ೧೪ ಮತ್ತು ೧೫ ರಂದು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದೆ.
ಖತಾರ್‌ನಲ್ಲಿ ಇರುವ ಕರ್ನಾಟಕ ಸಂಘ ಮತ್ತು ಮಂಗಳೂರು ಹೃದಯವಾಹಿನಿ ಪತ್ರಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಕವಿಗೋಷ್ಠಿ, ಹಾಸ್ಯಗೋಷ್ಠಿ, ಮಾಧ್ಯಮಗೋಷ್ಠಿಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಯಕ್ಷಗಾನ ಪ್ರದರ್ಶನ ಇರುತ್ತದೆ ಎಂದು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷ ಮಂಜುನಾಥ್ ಸಾಗರ ಮಂಗಳ ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದೆ ೪ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಕ್ರಮವಾಗಿ ಅಬುಧಾಬಿ (೨೦೦೪), ಸಿಂಗಪೂರ್ (೨೦೦೫), ಬಹರೇನ್ (೨೦೦೬) ಮತ್ತು ಕುವೈತ್‌ನಲ್ಲಿ (೨೦೦೭) ನಡೆದಿತ್ತು. ದೋಹದಲ್ಲಿ ಸಮ್ಮೇಳನ ಸಭಾಂಗಣದ ಹೊರವಲಯದಲ್ಲಿ ವಸ್ತು ಪ್ರದರ್ಶನ, ಪುಸ್ತಕ ಮೇಳ ನಡೆಯಲಿದೆ. ವಸ್ತು ಪ್ರದರ್ಶನ ವೈದ್ಯಕೀಯ ಸೇವೆ ಹಾಗೂ ವಸತಿ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಿದೆ. ಬೇಡಿಕೆಗೆ ಅನುಗುಣವಾಗಿ ಮಳಿಗೆ ನಿರ್ಮಿಸಲಾಗುವುದು ಹಾಗೂ ಸಂಸ್ಥೆಗಳು ತಮ್ಮ ಯೋಜನೆಗಳ ಪ್ರದರ್ಶನ ಮತ್ತು ವಿಶ್ಲೇಷಣೆ ಮಾಡುವುದಕ್ಕೆ ಅವಕಾಶವಿದೆ ಎಂದವರು ವಿವರಿಸಿದರು.
ಕರ್ನಾಟಕ ಹಾಗೂ ದೇಶದ ಇತರೆ ಭಾಗಗಳಿಂದ ೧೦೦ಕ್ಕೂ ಹೆಚ್ಚು ಸದಸ್ಯರ ಸಾಂಸ್ಕೃತಿಕ ನಿಯೋಗ ಸಮ್ಮೇಳನದಲ್ಲಿ ಭಾಗವಾಹಿಸಲಿದೆ. ಜತೆಗೆ ಬೇರೆ ಬೇರೆ ದೇಶಗಳ್ ಆನಿವಾಸಿ ಕನ್ನಡಿಗರು ಪಾಲ್ಗೊಳ್ಳುವರು. ಗಲ್ಫ್ ದೇಶದಲ್ಲಿ ಇರುವ ಕನ್ನಡ ಸಂಘಗಳ ಸಾಂಸ್ಕೃತಿಕ ತಂಡಗಳು ಪ್ರದರ್ಶನ ನೀಡಲಿವೆ ಎಂದರು. ಹೆಚ್ಚಿನ ವಿವರಗಳಿಗೆ ಮೊಬೈಲ್ ೯೪೪೮೬೩೬೫೨೨ ಸಂಪರ್ಕಿಸಬಹುದು.
ಸಂಗ್ರಹ: http://www.kannadaprabha.com
|