Sahitya Suddi
Sahitya suddi
Kannadigara Badukige Spandisuva Vedikeyagi Kasapa | Kannadigara Badukige Spandisuva Vedikeyagi Kasapa |
|
| Written by jayashree | |
|
ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್‌ನ್ನು ಕನ್ನಡಿಗರ ಬದುಕಿಗೆ ಸ್ಪಂದಿಸುವ ವೇದಿಕೆಯಾಗಿ ರೂಪಿಸುವ ಆಶಯದಿಂದ ತಾವು ಕೇಂದ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದಾಗಿ ಡಾ. ನಲ್ಲೂರು ಪ್ರಸಾದ್ ಹೇಳಿದ್ದಾರೆ.
ಕಸಾಪ ಕಾರ್ಯಚಟುವಟಿಕೆ ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ಸೀಮಿತ ಆಗಬಾರದು. ವೇದಿಕೆಯಲ್ಲಿ ಭಾಷಣ, ಘೋಷಣೆಯಿಂದ ಕನ್ನಡಿಗರ ಅಭಿವೃದ್ಧಿ ಅಸಾಧ್ಯ ಕಸಾಪ ಕನ್ನಡಿಗರ ಬದುಕಿಗೆ ಸ್ಪಂದಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬುದು ತಮ್ಮ ಆಶಯ ಎಂದರು. ಕನ್ನಡದಲ್ಲಿ ಅನೇಕ ಪ್ರತಿಭಾವಂತ ಯುವ ಲೇಖಕರಿದ್ದಾರೆ. ಕಥೆ, ಕಾವ್ಯ, ಕಾದಂಬರಿ ಬರೆಯುವವರ ಜೊತೆ ವೈಜ್ಞಾನಿಕ, ಸಾಮಾಜಿಕ, ಆರ್ಥಿಕ ಚಿಂತನೆ ಲೇಖನ ಬರೆಯುವ ಯುವ ಜನಾಂಗಕ್ಕೆ ಸೂಕ್ತ ಅವಕಾಶ ಕಲ್ಪಿಸುವ ಮೂಲಕ ಕಸಾಪದತ್ತ ಯುವ ಜನಾಂಗವನ್ನು ಆಕರ್ಷಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ನಾಡಿನ ನೆಲ, ಜಲ ಬಳಸಿಕೊಂಡು ಬೃಹದಾಕಾರವಾಗಿ ಬೆಳೆಯುತ್ತಿರುವ ಐಟಿಬಿಟಿ ಉದ್ಯಮದಲ್ಲಿ ಪ್ರತಿಭಾವಂತ ಕನ್ನಡದ ಮಕ್ಕಳಿಗೆ ಅವಕಾಶ ಕಲ್ಪಿಸುವಂತಹ ಅವಶ್ಯಕತೆ ಇದೆ. ಪ್ರತಿಭೆ ಇದ್ದರೂ, ಕನ್ನಡಿಗರಿಗೆ ಸೂಕ್ತ ಅವಕಾಶ ದೊರೆಯದ ಅನೇಕ ನಿದರ್ಶನವಿದ್ದು, ಕನ್ನಡಿಗರಿಗೆ ಸೂಕ್ತ ಅವಕಾಶಕ್ಕಾಗಿ ಕಸಾಪ ಅಧ್ಯಕ್ಷನಾಗಿ ಚಿಂತನೆ ನಡೆಸುವುದಾಗಿ ಅವರು ತಿಳಿಸಿದರು. ಹರಿಕೃಷ್ಣ ಪುನರೂರು ಆರ್ಥಿಕ ಚಿಂತನೆ ಹಾಗೂ ಇತರೆ ಅಧ್ಯಕ್ಷರ ಸಾಹಿತ್ಯಕ ಚಿಂತನೆಯ ಆಧಾರದಲ್ಲಿ ಪ್ರಾಮಾಣಿಕ, ಪಾರದರ್ಶಿಕತ್ವದ ಆಡಳಿತ ತರಲಾಗುವುದು ಎಂದು ತಿಳಿಸಿದರು. ಪ್ರೊ. ಶೇಖರಗೌಡ ಮಾಲಿ ಪಾಟೀಲ್, ಸತೀಶ್ ಗೌಡ ಇದ್ದರು.
|