Log In | Join Now
Home arrow Sahitya Suddi arrow Sahitya suddi arrow Kannada Naadu Nudi Sanskrutige Aadyate
Kannada Naadu Nudi Sanskrutige Aadyate Print
Written by jayashree   
ಚಿಕ್ಕಮಗಳೂರು: ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಗೆ ಮೊದಲ ಆದ್ಯತೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಲಕ್ಷ್ಮೀ ಶಾಮರಾವ್ ಹೇಳಿದ್ದಾರೆ.

ಜಿಲ್ಲೆಯ ಪ್ರತಿ ತಾಲೂಕಲ್ಲೂ ಪರಿಷತ್ ವತಿಯಿಂದ ನಡೆಯುವ ಕನ್ನಡ ಕಾರ್ಯಕ್ರಮಗಳ ಮಾಹಿತಿ ಕೇಂದ್ರ ನಿರ್ಮಾಣ ತಮ್ಮ ಉದ್ದೇಶವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕಾವ್ಯ, ಕಥೆ, ವಚನ, ಚುಟುಕು, ಹಾಸ್ಯ ಕಮ್ಮಟ ಹಾಗೂ ಗೋಷ್ಠಿಗಳ ಆಯೋಜನೆ, ಸಾಹಿತ್ಯ ಕುರಿತ ವಿಚಾರ ಸಂಕಿರಣ, ಸಹಕಾರ ತತ್ವದಡಿಯಲ್ಲಿ ಪುಸ್ತಕಗಳ ಪುಕಟಣೆ ಹಾಗೂ ಕನ್ನಡ ಭವನಗಳ ನಿರ್ಮಾಣ ಮಾಡುವುದಾಗಿ ಹೇಳಿದರು.


ಜಿಲ್ಲಾಸಾಹಿತಿಗಳ ಕೃತಿಯ ಕುರಿತಾದ ವಿಚಾರ ಸಂಕಿರಣ ಹಾಗು ಕೃತಿಗಳ ಮಾರಾಟ ಮತ್ತು ವಸ್ತು ಪ್ರದರ್ಶನ. ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಸಾಹಿತ್ಯ ಸಮ್ಮೇಳನ ಆಯೋಜನೆ, ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ದತ್ತಿ ನಿಧಿ ಸಂಗ್ರಹಣೆ, ಪರಿಷತ್ ಕಚೇರಿಯಲ್ಲಿ ಓದುಗರಿಗೆ ಪುಸ್ತಕ ಪತ್ರಿಕೆಗಳ ವ್ಯವಸ್ಥೆ ಹಾಗೂ ಮಾಹಿತಿ ರವಾನೆ. ಲಲಿತ ಕಲೆಗಳ ಪ್ರದರ್ಶನ ಹಾಗೂ ಹೊಸ ಪ್ರತಿಭೆಗಳನ್ನು ಉತ್ತೇಜಿಸುವುದು ಹಾಗು ಇಡೀ ಜಿಲ್ಲೆಯಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸುವುದು ತಮ್ಮ ಆಶಯ ಎಂದರು.

 

ನಿವೃತ್ತ ಉಪನ್ಯಾಸಕ ಪ್ರೊ.ಟಿ.ಎಂ. ಈಶ್ವರಪ್ಪ, ಶಾಮರಾವ್, ಸುವರ್ಣ ಕೇಶವಮೂರ್ತಿ, ಶಾರದಾ ಸುರೇಶ್,  ರಮಾ ರಾಮಚಂದ್ರ ಸೂರ್ಯ ಗೋವಿಂದ್ ಹಾಗೂ ಭಾಗ್ಯ ಮಲ್ಲಿಕಾರ್ಜುನ ಇದ್ದರು.

 


ಸಂಗ್ರಹ:http://www.kannadaprabha.com

Comments (0) >>
Write comment

busy