|
Hasanada Bahukige Aadhyatma Jnana Agatya |
|
|
Written by jayashree
|
|
ಹುನಗುಂದ: ವ್ಯಸನಗಳಿಂದ ಮುಕ್ತರಾಗಿ ಹಸನಾದ ಬದುಕು ಸಾಗಿಸಲು ಆಧ್ಯಾತ್ಮ ಅರಿವು - ಜ್ಞಾನ ಸಂಪಾದನೆ ಮುಖ್ಯ ಎಂದು ಹಡಗಲಿ - ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಅವರು ಈಚೆಗೆ ತಾಲೂಕಿನ ಸುಕ್ಷೇತ್ರ ಕೂಡಲಸಂಗಮದಲ್ಲಿ ಅಭಿರುದ್ಧಿ ಮಂಡಳಿ ಶ್ರಾವಣ ಮಾಸದ ಅಂಗವಾಗಿ ಪ್ರಾರಂಭಿಸಿದ ಪ್ರಭುಲಿಂಗ ಲೀಲೆ ಪುರಾಣ ಪ್ರವಚನ ಪ್ರಾರಂಬೋತ್ಸವ ಉದ್ಘಾಟಿಸಿ ಮಾತನಾಡಿದರು.
ಬಿಲ್‍ಕೆರೂರಿನ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಚೇರಮನ್ ಜಿ.ಜಿ. ಪಾಟೀಲ, ಶೇಖರಗೌಡ ಗೌಡರ್, ಆಯುಕ್ತರಾದ ಪಿ.ಎಸ್. ಚಿನಿವಾರ, ಪುರಾಣ ಪ್ರವಚನಕಾರ ಮಹಾಂತೇಶ ಶಾಸ್ತ್ರಿ ಕಲ್ಲೂರ, ವಿಠಲ ಹೂಗಾರ ಅನೇಕರು ಇದ್ದರು.
ಚಾಮರಸ ಕವಿರಚಿತ ಪ್ರಭುಲಿಂಗಲೀಲೆ ಪುರಾಣವನ್ನು ಕಲ್ಲೂರಿನ ಮಹಾಂತೇಶ ಶಾಸ್ತ್ರಿ ಪ್ರಾರಂಭಿಸಿದರು.
ಸಂಗ್ರಹ:http://www.kannadaprabha.com
|