Log In | Join Now
Home arrow Sahitya Suddi arrow Sahitya suddi arrow Hampanage Jaina Sahitya Prashasti Pradana
Hampanage Jaina Sahitya Prashasti Pradana Print
Written by jayashree   
ಬೆಂಗಳೂರು: ರಾಜ್ಯದ ಪ್ರಥಮ ಆಚಾರ್ಯ ಶ್ರೀ ಮಹಾಪ್ರಜ್ಞಾ ಜೈನ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ಪ್ರೊ| ಹಂಪ ನಾಗರಾಜಯ್ಯ ಅವರಿಗೆ ಭಾನುವಾರ ಪ್ರಧಾನ ಮಾಡಲಾಯಿತು. ಕರ್ನಾಟಕ ಜೈನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಮ್ಮಟ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಮತ್ತು ಸಮಾಜ ಕಲ್ಯಾಣ ಸಚಿವ ಡಿ. ಸುಧಾಕರ್ ಪ್ರಶಸ್ತಿ ಪ್ರಧಾನ  ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅರವಿಂದ ಲಿಂಬಾವಳಿ, ಜೈನ ಧರ್ಮ ಅಹಿಂಸಾ ಧರ್ಮವನ್ನು ಪಾಲಿಸಿಕೊಂಡು ಬರುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾಂಸಾಹಾರಿಯಾಗಿದ್ದ ತಾವು ಜೈನ ಸಮುದಾಯದ ಸ್ನೇಹಿತರ ಸಹವಾಸದಿಂದ ಸಸ್ಯಾಹಾರಿಯಾಗಿ ಬದಲಾದ ಬಗ್ಗೆ ವಿವರಿಸಿ, ಇದಕ್ಕೆ ಜೈನ ಸಮುದಾಯದ ಅಹಿಂಸಾ ತತ್ವ ಪ್ರತಿಪಾದನೆಯೇ ಕಾರಣವಾಯಿತು ಎಂದರು. ಸಚಿವ ಡಿ. ಸುಧಾಕರ್ ಮಾತನಾಡಿ, ಹಂಪ ನಾಗರಾಜಯ್ಯ ಅವರನ್ನು ನವಯುಗದ ಪಂಪ ಎಂದು ಬಣ್ಣಿಸಿದರಲ್ಲದೆ, ಅಹಿಂಸೆ ಮತ್ತು ತ್ಯಾಗವೆಂಬ ಜೈನ ಧರ್ಮದ ಸಿದ್ಧಾಂತ ಮಾನಸಿಕ ನೆಮ್ಮದಿ ತಂದು ಕೊಡುತ್ತದೆ ಎಂದು ಹೇಳಿದರು. ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾರಾಜೇಂದ್ರ ಶರಣರು ಹಾಗೂ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಮೂಡಬಿದರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಮಹಾಸ್ವಾಮಿ ಸಾದ್ವಿ ಸ್ವರ್ಣರೇಖಾಜಿ, ಡಾ| ನಿರ್ವಾಣ ಪ್ರಜ್ಞಾಜಿ, ಪ್ರೊ| ಕಮಲಾ ಹಂಪನಾ ಭಾಗವಹಿಸಿದ್ದರು.


ಸಂಗ್ರಹ: http://www.kannadaprabha.com

 

Comments (0) >>
Write comment

busy