Log In | Join Now
Home arrow Sahitya Suddi arrow Sahitya suddi arrow Halli Hakki Hadu Haikortge Vishwanath
Halli Hakki Hadu Haikortge Vishwanath Print
Written by jayashree   
ಬೆಂಗಳೂರು: ’ಹಳ್ಳಿ ಹಕ್ಕಿಯ ಹಾಡು’ ಪುಸ್ತಕದಲ್ಲಿ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಚಮ್ಮಾರ ಮತ್ತು ಮಾದಿಗ ಜನಾಂಗದ ಅವಹೇಳನ ಮಾಡಿದ್ದಾರೆ ಎಂದು ಮೈಸೂರಿನಲ್ಲಿ ಹೂಡಿರುವ ಮೊಕದ್ದಮೆಗಳನ್ನು ವಜಾಗೊಳಿಸುವಂತೆ ಕೋರಿ ಎಚ್. ವಿಶ್ವನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಹಳ್ಳಿ ಹಕ್ಕಿಯ ಹಾಡು ಪುಸ್ತಕದಲ್ಲಿ ಚಮ್ಮಾರ ಮತ್ತು ಮಾದಿಗ ಜನಾಂಗವನ್ನು ಅವಹೇಳನ ಮಾಡಲಾಗಿದೆ ಎಂದು ಹೇಳಿ ಮೈಸೂರಿನ ಟಿ. ನಾಗರಾಜ್ ಎಂಬುವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ವಿಶ್ವನಾಥ್ ಅವರನ್ನು ಬಂಧಿಸುವಂತೆ ಕೋರಿದ್ದರೆ, ಜಟ್ಟಿಹುಂಡಿ ಮಾದಯ್ಯ ಎಂಬುವರು ಕೆ.ಆರ್. ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.


ಇದನ್ನು ಪ್ರಶ್ನಿಸಿ ವಿಶ್ವನಾಥ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ಬುಧವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.

 


ಸಂಗ್ರಹ: http://www.kannadaprabha.com

Comments (0) >>
Write comment

busy