Log In | Join Now
Home arrow Sahitya Suddi arrow Sahitya suddi arrow Gulmohar Bidugade
Gulmohar Bidugade Print
Written by jayashree   
ಚಿತ್ರರಂಗಕ್ಕೆ ಹೊಂದಿಕೊಳ್ಳುವಂತೆ ಸರಳ ಹಾಗೂ ಅರ್ಥಪೂರ್ಣವಾಗಿ ಕವನಗಳನ್ನು ರಚಿಸುವ ಸಾಮರ್ಥ್ಯ ಬಹುತೇಕ ಕವಿಗಲಲ್ಲಿ ಇಲ್ಲ. ಹೀಗಾಗಿ  ಹೆಚ್ಚಿನ ಸಂಖ್ಯೆಯಲ್ಲಿ ಅವರು ಚಿತ್ರರಂಗದಲ್ಲಿ ತೊಡಗಲು ಸಾಧ್ಯವಾಗಿಲ್ಲ ಎಂದು ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಇಲ್ಲಿ ಹೇಳಿದರು.

ರಘುಲೀಲಾ ಸಂಗೀತಶಾಲೆಯು ಕೃಷ್ಣ ಮೂರ್ತಿ ಪುರಂನ ಶಾರದಾವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಗುಲ್‌ಮೊಹರ್ ಧ್ವನಿಸುರಳಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಗುಲ್ ‍ಮೊಹರ್ ಗೆ ಕವನಗಳನ್ನು ಬರೆದಿರುವ ಕವಿ ಜಯಪ್ಪ ಹೊನ್ನಾಳಿ ಮಾತನಾಡಿ, ಜೀವನದ ಅನುಭವಗಳು ಕಾವ್ಯಗಳಾಗಿ ರೂಪುಗೊಂಡಿವೆ. ದೈಹಿಕ ಶಿಕ್ಷಕನಾಗಿದ್ದುಕೊಂಡು ಕವಿಯಾಗಲು ಅನುಭವಗಳು ಕಾರಣವಾಗಿವೆ ಎಂದರು.


ಎಲ್ಲವೂ ನಿನ್ನದು ಎಂದರೆ: ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಒಬ್ಬ ಕಲಾವಿದ ಮತ್ತೊಬ್ಬ ಕಲಾವಿದನನ್ನು ಹೊಗಳುವುದು ಅಪರೂಪ. ಆದರೆ, ಹಂಸಲೇಖ ಅವರು ಜಯಪ್ಪ ಹೊನ್ನಾಳಿ ಅವರನ್ನು ಹೊಗಳಿದ್ದಾರೆ ಎಂದರೆ, ಕವನಗಳು ಅಷ್ಟು ಮಹತ್ವದ್ದಾಗಿವೆ ಎಂದು ಅರ್ಥ ಎಂದರು. ಜೀವನದಲ್ಲಿ ನಾವು ಅನ್ನುವುದನ್ನು ಬಿಟ್ಟು ನೀವು, ನಿಮ್ಮದು ಎನ್ನಬೇಕು. ಆಗ ಜಗತ್ತು ವಿಶಾಲವಾಗಿರುತ್ತದೆ ಎಂದರು.

 


ಸಂಗ್ರಹ: http://www.kannadaprabha.com

Comments (0) >>
Write comment

busy