|
Gramina Mattadavarige Sahityika Catuvatike |
|
|
Written by jayashree
|
|
ಸಿಂಧನೂರು: ಕನ್ನಡ ಸಾಹಿತ್ಯ ಪರಿಷತ್ತನ್ನು ವಿಕೇಂದ್ರಿಕರಣಗೊಳಿಸಿ ಗ್ರಾಮೀಣ ಮಟ್ಟದವರೆಗೆ ಸಾಹಿತ್ಯಿಕ ಚಟುವಟಿಕೆಗಳನ್ನು ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುವುದಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಲ್ಲೂರು ಪ್ರಸಾದ ಭರವಸೆ ನೀಡಿದರು.
ಪ್ರವಾಸಿ ಮಂದಿರದಲ್ಲಿ ಚುನಾವಣಾ ಪ್ರಚಾರಾರ್ಥ ಏರ್ಪಡಿಸಿದ್ದ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡ ಮತ್ತು ಸಾಹಿತಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಆರ್ಥಿಕ ಮುಗ್ಗಟ್ಟಿನಲ್ಲಿರುವುದರಿಂದ ಕಾಯಂ ಆರ್ಥಿಕ ಸ್ವಾವಲಂಭನೆ, ಜಿಲ್ಲೆ, ತಾಲೂಕು ಮತ್ತು ಹೋಬಳೀ ಹಂತಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಪ್ರಥಮ ಆಧ್ಯತೆ ನೀಡುತ್ತೇನೆ. ಕನ್ನಡ ನಾಡೂ, ನುಡಿ, ನೆಲ- ಜಲ ಸಂರಕ್ಷಣೆ ಹಿನ್ನೆಲೆಯಲ್ಲಿ ಬಂದಿರುವ ಆಯೋಗಗಳ ಶಿಫಾರಸ್ಸುಗಳ ಅನುಷ್ಠಾನ, ಅಗತ್ಯವಿರುವ ಕಡೆ ಹೋರಾಟ ಮಾಡುವುದಾಗಿ ತಿಳಿಸಿದರು.
ಕನ್ನಡ ನಾಡಿನಾದ್ಯಂತ ಸ್ಥಾಪನೆಯಾಗುತ್ತಿರುವ ಐಟಿ ಬಿಟಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ, ಉದಯನ್ಮೋಖ ಬರಹಗಾರರಿಗೆ ಆದ್ಯತೆ, ಆಡಳಿತದಲ್ಲಿ ಪಾರದರ್ಶಕತೆಯ ಜೊತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಲು ಜಿಲ್ಲಾಧ್ಯಕ್ಷರು ಸಹಕಾರದೊಂದಿಗೆ ಪ್ರಯತ್ನಿಸುವುದಾಗಿ ಹೇಳಿದರು.
ಕನ್ನಡಪರ ಸರ್ಕಾರಿ ಸಂಸ್ಥೆಯಾದ ಆಕಾಡೆಮಿ, ಕರ್ನಾಟಕ ರಕ್ಷಣಾ ವೇದಿಕೆ ಮತ್ತಿತರ ಕನ್ನಡಪರ ಸಂಸ್ಥೆಗಳೊಡನೆ ನಿಕಟ ಸಂಪರ್ಕವಿಟ್ಟೂಕೊಂಡು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹೊರನಾಡ ಕನ್ನಡಿಗರು ಸೇರಿದಂತೆ ಸಮಸ್ತ ಕನ್ನಡಿಗರ ಹಿತಕ್ಕೆ ಧಕ್ಕೆ ಬರದಂತೆ ಪ್ರಾಮಾಣಿಕವಾಗಿ ದುಡಿಯುತೇನೆ ಎಂದರು.
ಸಂಗ್ರಹ:http://www.kannadaprabha.com
|