Sahitya Suddi
Sahitya suddi
Gopikonmada Bidugade | Gopikonmada Bidugade |
|
| Written by jayashree | |
|
ಭಗವಾನ್ ಮಹಾವೀರ ಜೈನ್ ಕಾಲೇಜು ಸಮಾವೇಶ ಸಭಾಂಗಣದಲ್ಲಿ ಲೇಖಕ ಪ್ರೊ. ಕೆ.ಇ. ರಾಧಾಕೃಷ್ಣ ಅವರ ಸಂಸ್ಕೃತದಿಂದ ಕನ್ನಡಕ್ಕೆ ರೂಪಾಂತರಿಸಿದ ’ಗೋಪಿಕೋನ್ಮಾದ (ಖಂಡಕಾವ್ಯ) ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೇಮ, ಕಾಮದ ಮುಂದಿನ ಹಂತವೇ ಭಕ್ತಿ. ಮನುಷ್ಯನಲ್ಲಿ ಉನ್ಮತ ಸ್ಥಿತಿ ಸ್ವಾಭಾವಿಕ. ದೇವರು ಮತ್ತು ಭಕ್ತ ಇದ್ದಾಗ ಮಾತ್ರ ಭಕ್ತಿ ಮೂಡಲು ಸಾಧ್ಯ. ಹೀಗೆ ಹಲವು ವಿಚಾರಗಳು ಕೃತಿಯಲ್ಲಿ ಕಾವ್ಯವಾಗಿವೆ ಎಂದ ಅವರು, ಸಂಸ್ಕೃತದ ವಿಚಾರಗಳು ಗೋಪಿಕೋನ್ಮಾದ ಕೃತಿ ಮೂಲಕ ಕನ್ನಡಕ್ಕೆ ಬಂದಿರುವುದು ಉತ್ತಮ ವಿಚಾರ ಎಂದು ಸಿದ್ಧಲಿಂಗಯ್ಯ ತಿಳಿಸಿದರು. ಸಾಹಿತಿ ಪ್ರೊ ಸಾ.ಶಿ. ಮರುಳಯ್ಯ ಮಾತನಾಡಿ, ಕೃಷ್ಣನ ಬಗ್ಗೆ ಇದುವರೆಗೂ ೫೪ ಕೃತಿಗಳು ಬಂದಿವೆ. ಪ್ರತಿಯೊಂದು ಕೃಷ್ಣನ ಕುರಿತು ಹೊಸ ವಿಚಾರ ತಿಳಿಸುತ್ತವೆ. ಈ ನಿಟ್ಟೀನಲ್ಲಿ ಗೋಪಿಕೋನ್ಮಾದ ಕನ್ನಡಕ್ಕೆ ಬಂದಿರುವುದು ಉತ್ತಮ ಎಂದರು. ಹಂಪಿ ಕನ್ನಡ ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಮೂಲ ಕೃತಿಯ ಆಶಯದ ರೂಪಾಂತರಗೊಂಡ ಬಳಿಕವು ಹಾಗೇ ಉಳಿದಿದೆ. ಪ್ರೇಮ ಭಕ್ತಿಯಾಗಿದೆಯೋ, ಭಕ್ತಿ ಪ್ರೇಮವಾಗಿದೆಯೋ ಎಂಬ ವಿಚಾರ ಜನರಿಗೆ ತಿಳಿಯಲು ಕೃತಿ ಸಹಾಯಕ ಎಂದರು. ನಾಡೋಜ ಪ್ರೊ. ಜಿ.ವೆಂಕಟಸುಬ್ಬಯ್ಯ ಕೃತಿಯ ಲೇಖಕ ಪ್ರೊ. ಕೆ.ಇ. ರಾಧಕೃಷ್ಣ, ವಸಂತ ಪ್ರಕಾಶನ ಮುರಳಿ ಹಾಜರಿದ್ದರು.
|