Log In | Join Now
Home arrow Sahitya Suddi arrow Sahitya suddi arrow Gokakarinda Sahityakke Hosatana : Kelagina Mani
Gokakarinda Sahityakke Hosatana : Kelagina Mani Print
Written by jayashree   
ಸವಣೂರು: ನೆಲ-ಮುಗಿಲುಗಳ ಒಂದು ಮಾಡಿದ್ದ ಆಶಯದ ಸಾಹಿತ್ಯ ’ದ್ಯಾವಾ ಪೃಥ್ವಿ ’ ಕೃತಿಯಲ್ಲಿ ಕಾಣಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ  ಪ್ರಶಸ್ತಿ ವಿಜೇತ ಡಾ. ಶಿವಾನಂದ ಕೆಳಗಿನಮನಿ ಹೇಳಿದರು.

ಪಟ್ಟಣದ ದೊಡ್ಡ ಹುಣಸೇಮರದ ಚನ್ನಬಸವೇಶ್ವರ ಮಂಗಲದ ಭವನದಲ್ಲಿ ಡಾ. ವಿ. ಕೃ ಗೋಕಾಕ ಜನ್ಮಶತಮಾನೋತ್ಸವ ಸಮಿತಿ ಚನ್ನಬಸವೇಶ್ವರ ಶಿಕ್ಷಕರ ತರಬೇತಿ ಸಂಸ್ಥೆ, ವರದಾ ಯುವಕ ಸಂಘ, ಸ್ಫೂರ್ತಿ ಯುವಕ ಸಂಘ, ಎಚ್‌ಬಿಎಸ್ ಶಿಕ್ಷಣ ಸಂಸ್ಥೆ, ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಡಾ. ವಿ.ಕೃ ಗೋಕಾಕ ಜನ್ಮಶತಮಾನೋತ್ಸವ ಪ್ರಯುಕ್ತ ಜರುಗಿದ ಗೋಕಾಕರ ಸಾಹಿತ್ಯ ಚಿಂತನಗೋಷ್ಠಿ ಕಾರ್ಯಕ್ರಮದ ಉಪನ್ಯಾಸಕರಾಗಿ ಅವರು ಮಾತನಾಡಿದರು. ತಮ್ಮದೇ ಆದ ಹೊಸ ವಿಚಾರಗಳನ್ನು ಬಿತ್ತುವ ಮೂಲಕ ಗೋಕಾಕರು ಸಾಹಿತ್ಯಕ್ಕೆ ಹೊಸತನ ನೀಡಿದ್ದಾರೆ ಎಂದು ಕೆಳಗಿನಮನಿ, ಗೋಕಾಕರು ಬೇರೆ ಯಾವುದೇ ಪ್ರಭಾವಗಳಿಗೆ ಒಳಗಾಗದೇ ವಿಶಿಷ್ಟ ಕಾವ್ಯ ಶೈಲಿ ರಚಿಸಿದ ಕವಿ ಎಂದರು. ಬಸವರಾಜ ಡೋಣೂರ, ಕನ್ನಡ ಭಾಷೆಗೆ ವಿಶಿಷ್ಟ ಸ್ಥಾನಮಾನ ದೊರಕಿಸಿಕೊಡವಲ್ಲಿ ಅವರ ವರದಿಯೇ ಮುಖ್ಯವಾಗಿದೆ ಎಂದರು.


ಮುಖ್ಯ ಅತಿಥಿಗಳಾದ ಆರ್. ಎಸ್. ಮಿಟ್ಟಿಮನಿ ಸಹ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದರು.

 


ಸಂಗ್ರಹ: http://www.kannadaprabha.com

Comments (0) >>
Write comment

busy