Log In | Join Now
Home arrow Sahitya Suddi arrow Sahitya suddi arrow Gokakara Hesarinalli sahitya Kendra Rachaneyagali
Gokakara Hesarinalli sahitya Kendra Rachaneyagali Print
Written by jayashree   
ಧಾರವಾಡ: ನವ್ಯಕಾವ್ಯದ ಹರಿಕಾರ ವಿ.ಕೃ ಗೋಕಾಕರು ಸಾಹಿತ್ಯಕ್ಕೆ ನಿರ್ಧಿಷ್ಟ ರೂಪ ನೀಡಿದವರು. ಇವರ ಹೆಸರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಹಿತ್ಯ ಕೇಂದ್ರ ರಚನೆಯಾಗಬೇಕಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ|ಕೆ. ರಾಘವೇಂದ್ರರಾವ್ ಹೇಳಿದರು. ಕವಿತೆ, ನಾಟಕ, ವಿಮರ್ಶೆ ಸೇರಿದಂತೆ ಕಾದಂಬರಿಗಳನ್ನು ರಚಿಸಿದ ಗೋಕಾಕರು ಸಾಹಿತಿ ಪುರುಷರು. ಸಾಹಿತಿಗಳು ಸಾಕಷ್ಟಿದ್ದಾರೆ. ಆದರೆ ಸಾಹಿತಿ ಪುರಷರು ವಿರಳ. ಬಿ.ಎಂ. ಶ್ರೀ ಹಾಗೂ. ದ.ರಾ. ಬೇಂದ್ರ ಅವರ ಮಟ್ಟಕ್ಕೆ ಗೋಕಾಕರು ನಿಲ್ಲುತ್ತಾರೆ ಎಂದರು.

ಪದ್ಮಶ್ರೀ ಡಾ| ವಿ.ಕೃ ಗೋಕಾಕ ಅವರ ಜನ್ಮಶತಮಾನೋತ್ಸವ ಅಂಗವಾಗಿ ಇಲ್ಲಿನ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಸೋಮವಾರ ಮಾತನಾಡಿ, ಗೋಕಾಕರ ಸಾಹಿತ್ಯದ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕು. ಗೋಕಾಕರ ಶತಮಾನೋತ್ಸವ ಆಚರಿಸುವ ಉದ್ದೇಶ, ಈ ವರ್ಷ್ಯಾಂತ್ಯವೆಲ್ಲಾ ಸಾಹಿತಿಗಳ ಬಗ್ಗೆ ಮೌಲ್ಯಮಾಪನ ಮಾಡುವದು. ತಂತ್ರಜ್ಞಾನದ ಪ್ರಗತಿಯ ಮೊಬೈಲ್ ಕಾಲದಲ್ಲಿ ಸಾಹಿತ್ಯ ಕಾಣೆಯಾಗುತ್ತಿದೆ ಎಂದರು.


ಗೌರವ ಇಲ್ಲ: ಸ್ವಾತಂತ್ರ್ಯಕ್ಕೆ ಮುಂಚೆ ಸಾಹಿತಿಗಳನ್ನು ದೇವರೆಂದು ಪೂಜಿಸುತ್ತಿದ್ದರು. ಆದರೆ ಪ್ರಸ್ತುತ ಸಾಹಿತಿಗಳಿಗೆ ಗೌರವ ಇಲ್ಲ. ಗೋಕಾಕರ ಶತಮಾನೋತ್ಸವ ಮಾಡಿದ್ದು ಈ ವರ್ಷವೆಲ್ಲಾ ಸಾಹಿತಿಗಳ ಬಗ್ಗೆ ಮೌಲ್ಯಮಾಪನ ಮಾಡಲಿಕ್ಕೆ. ಇವತ್ತಿನ ಸಮಾರಂಭದಿಂದಲೇ ಈ ಕಾರ್ಯಪ್ರಾರಂಭವಾಗಲಿ ಎಂದರು ಕೆ. ರಾಘವೇಂದ್ರರಾವ್.

 


ಸಂಗ್ರಹ:http://www.kannadaprabha.com

Comments (0) >>
Write comment

busy