Log In | Join Now
Home arrow Sahitya Suddi arrow Sahitya suddi arrow February 22-23 randu Jilla Sahitya Sammelana
February 22-23 randu Jilla Sahitya Sammelana Print
Written by jayashree   
ಚಿನಕುರಳಿಯಲ್ಲಿ ಫೆಬ್ರವರಿ ೨೨-೨೩ರಂದು ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಹಿಂದೆ ನಡೆದ ಸಮ್ಮೇಳನದ ಚರ್ಚಾ ವಿಷಯಗಳು ಮತ್ತೆ ಪುನಾರಾವರ್ತನೆ ಆಗದಿರಲಿ ಎಂದು ಸಾಹಿತಿ ಕ್ಯಾತನಹಳ್ಳಿ ರಾಮಣ್ಣ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಚಾರಿತ್ರಿಕ, ಸಾಮಾಜಿಕ, ಸಾಹಿತ್ಯ ಪ್ರಕಾರಗಳ ಗೋಷ್ಠಿ ಹೊರತು ಪಡಿಸಿ ಇತ್ತೀಚಿನ ಸಮಕಾಲೀನ ಸಾಹಿತ್ಯ ಸಂದರ್ಭಗಳು ಮತ್ತುಅ ಸಾಹಿತ್ಯ ಬೆಳವಣೆಗೆ ಬಗ್ಗೆ ಚರ್ಚೆ ಹಾಗೂ ವಿಮರ್ಶೆ ನಡೆಯಲಿದೆ ಎಂದು ಹೇಳಿದರು.


ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ಸಾಹಿತ್ಯ ಚರಿತ್ರೆ, ನಾಡು ನುಡಿಯ ಬಗ್ಗೆ ಗ್ರಾಮಾಂತರ ಪ್ರದೇಶದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಕನ್ನಡ ಸಾಹಿತ್ಯದ ಕಂಪು ಮನೆ ಮನೆಗೆ ತಲುಪಿಸಿದಂತಾಗುತ್ತದೆ. ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರು ಶ್ರಮಿಸುವಂತೆ ಕರೆನೀಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ವಿ. ಜಯರಾಂ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಜಯ ವಿದ್ಯಾಸಂಸ್ಥೆ ಪ.ಪೂ. ಕಾಲೇಜು ನಿವೃತ್ತ ಪ್ರಾಂಶುಪಾಲ ಸುರೇಶ್ ಮಡಿಯಾಳ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಪ್ರೊ.ಬಿ. ಜಯಪ್ರಕಾಶ್‍ಗೌಡ, ಡಿ.ಪಿ. ಸ್ವಾಮಿ, ಪ್ರೊ.ಬಿ ನಾರಾಯಣಗೌಡ, ಡಾ,ಬೋರೇಗೌಡ ಚಿಕ್ಕಮರಳಿ, ಎಂ. ರಮೇಶ್, ಚಂದ್ರಶೇಖರ್, ಎಚ್. ಪಾರ್ವತಿ, ಶೈಲಜಾ ಗೋವಿಂದರಾಜ್ ಉಪಸ್ಥಿತರಿದ್ದರು.

 

ಸಂಗ್ರಹ:http://www.Kannadaprabha.com
Comments (0) >>
Write comment

busy