Log In | Join Now
Home arrow Sahitya Suddi arrow Sahitya suddi arrow Dharavadadalli Subrav Kulkarni Kruti Bidugade
Dharavadadalli Subrav Kulkarni Kruti Bidugade Print
Written by jayashree   

ಗುಲ್ಬರ್ಗ : ಇಂದಿನ ಆಧುನಿಕ ದಿನಗಳಲ್ಲಿ ಕನ್ನಡ ಸಾಹಿತ್ಯಕ್ಕೆ ವಿಭಿನ್ನ ಕ್ಷೇತ್ರದವರ ಆಗಮನದಿಂದ ಸಾಹಿತ್ಯ ಸಮೃದ್ಧಿಯಾಗುತ್ತಿದೆ. ಮರಾಠಿ ಸಾಹಿತ್ಯದಲ್ಲಿ ಕೆಳಸ್ತರದವರು ಸಹ ತಮ್ಮ ಅನುಭವವನ್ನು ಕಟ್ಟಿಕೊಂಡಿದ್ದಾರೆ,ಅದು ಕನ್ನಡ ಸಾಹಿತ್ಯಕ್ಕೆ ಮಾದರಿಯಾಗಿದೆ ಎಂದು ಪತ್ರಕರ್ತ ಹಾಗೂ ಸಾಹಿತಿ ಡಾ. ಸರಜೂ ಕಾಟಕರ್ ಅಭಿಪ್ರಾಯಪಟ್ಟರು.


ಕರ್ನಾಟಕ ವಿದ್ಯಾವರ್ಧಕ ಸಂಘದ ಧಾರವಾಡದ ಸಾಹಿತ್ಯ ಮಂಟಪದಲ್ಲಿ ಆಯೋಜಿಸಿದ್ದ ಗುಲ್ಬರ್ಗದ ಸುಬ್ರಾವ ಕುಲಕರ್ಣಿಯವರ ’ಮಲಪ್ರಭೆ’ ಕಥಾಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಲಪ್ರಭೆಯಲ್ಲಿ ಕಥೆಗಾರರು ಏಕಾಂತದಿಂದ ಲೋಕಾಂತದೆಡೆಗೆ ಪಯಣಿಸಿದ್ದಾರೆ. ಕಥೆಗಳಲ್ಲಿ ಸರಳ ನಿರೂಪಣೆ, ದೇಶಿಯ ಪ್ರಜ್ಞೆಯಿಂದ ಜೀವನ್ಮುಖಿ ಉತ್ಸಾಹವಿದೆ. ಭಾಷೆಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಓದುಗರಿಗೆ ಮುದ ನೀಡುತ್ತದೆ ಎಂದರು.


ಡಾ. ಸ್ವಾಮಿರಾವ ಕುಲಕರ್ಣಿ ಮಾತನಾಡಿ, ಪ್ರಾದೇಶಿಕ ವೈವಿಧ್ಯತೆ ಮೇಲೆ ಮನಸ್ಸು ಕಟ್ಟಲಾಗುವುದಿಲ್ಲ, ಅದನ್ನು ಸಾಹಿತ್ಯದ ಮೂಲಕ ಮಾತ್ರ ಕಟ್ಟಲು ಸಾಧ್ಯ ಎಂದರು.


ಕಥೆಗಾರ ಡಾ. ಬಾಳಾಸಾಹೇಬಾ ಲೋಕಾಪೂರ ಕೃತಿ ಪರಿಚಯಿಸಿದರು. ಜಿ.ಆರ್. ಘಳಗಿ, ಗಣೇಶ್ ಜೋಶಿ, ಸುಬ್ರಾವ ಕುಲಕರ್ಣಿಯವರನ್ನು ಸನ್ಮಾನಿಸಿದರು. ಕೃತಿಕಾರರು ತಮ್ಮ ಅನುಭವ ಹಂಚಿಕೊಂಡರು.


ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಮಂಟಪದ ಸಂಚಾಲಕ ಮೋಹನ ನಾಗಮ್ಮನವರ ಸ್ವಾಗತಿಸಿದರು. ವೆಂಕಟೇಶ ಕಳಸಾಪುರ ವಂದಿಸಿದರು. ವೀಣಾ ಕುಲಕರ್ಣಿ ಕಾರ್ಯ ಕ್ರಮ ನಿರೂಪಿಸಿದರು. ಉಮಾ ಜೋಶಿ ಬೇಂದ್ರೆ ಗೀತೆ ಹಾಡಿದಾರು. ಪ್ರತಿಮಾ, ವರ್ಷಾ, ವೈಷ್ಣವಿ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯ ಕ್ರಮದಲ್ಲಿ ಡಾ. ಶಿವಾನಂದ ಕೆಳಗಿನಮನಿ, ಡಾ. ಆರ್. ಜಿ.ಜೋಶಿ, ಡಾ. ಹಾಜವಗೋಳ, ಬಸುಬೇವಿನಗಿಡದ ಮುಂತಾದವರು ಉಪಸ್ಥಿತರಿದ್ದರು.

 


ಸಂಗ್ರಹ:http://www.kannadaprabha.com

Comments (0) >>
Write comment

busy