Log In | Join Now
Home arrow Sahitya Suddi arrow Sahitya suddi arrow Delhiyalli Govinda pai Janma Dinotsava
Delhiyalli Govinda pai Janma Dinotsava Print
Written by jayashree   
ನವದೆಹಲಿ: ರಾಷ್ಟ್ರಕವಿ ಗೋವಿಂದಪೈ ಅವರ ೧೨೬ನೇ ಜನ್ಮದಿನೋತ್ಸವವನ್ನು ದಿಲ್ಲಿಯಲ್ಲಿ ದೆಹಲಿ ಕನ್ನಡಿಗ ಪತ್ರಿಕೆ ಆಶ್ರಯದಲ್ಲಿ ಕನ್ನಡ ಸಾಹಿತಿಗಳು, ಕಲಾವಿದರು, ಪ್ರಾಧ್ಯಾಪಕರು, ಬುದ್ಧಿಜೀವಿಗಳು, ಕನ್ನಡ ಕಾರ್ಯಕರ್ತರು ಜೂನ್ ೮ರಂದು ಅದ್ಧೂರಿಯಿಂದ ಆಚರಿಸಿದರು,

ಕಾರ್ಯಕ್ರಮ ಉದ್ಘಾಟಿಸಿದ ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಬಾ. ಸಾಮಗ ಮಾತನಾಡಿ ಕನ್ನಡದಲ್ಲಿ ಹೊಸ ಬಗೆಯ ಕಾವ್ಯ ಪ್ರಯೋಗ ಮಾಡಿದ ಪೈ ಅವರ ಗೋಲ್ಲೊಜಾ, ವೈಶಾಖ ಎಂಬ ಖಂಡ ಕಾವ್ಯಳು ಮತ್ತು ಹೆಬ್ಬೆರಳು ಎಂಬ ಕಾವ್ಯ ಸಂಚಿಕೆ ಕನ್ನಡ ಕಾವ್ಯ ಲೋಕದಲ್ಲಿ ಕ್ರಾಂತಿ ಉಂಟು ಮಾಡಿದೆ. ಕನ್ನಡ, ಸಂಸ್ಕೃತ, ಮಲೆಯಾಳಂ, ತಮಿಳು, ಜರ್ಮನ್, ಗ್ರೀಕ, ಲ್ಯಾಟಿನ, ಬಂಗಾಳಿ ಮುಂತಾದ ೨೯ ಭಾಷೆಗಳನ್ನು ಬಲ್ಲ ಪೈ ಬೇರೆ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆಅ ಅನುವಾದಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ೧೯೪೯ ರಲ್ಲಿ ಮದ್ರಾಸ್ ಸರ್ಕಾರದಿಂದ ರಾಷ್ಟ್ರ ಪ್ರಶಸ್ತಿ ಪಡೆದ ಅವರು ಮುಂಬೈನಲ್ಲಿ ನಡೆದ ೩೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು ಎಂದ ಬಾಸಾಮಗ ಕರ್ನಾಟಕ ಸರ್ಕಾರ ಪೈ ಸಾಹಿತ್ಯೋತ್ಸವವನ್ನು ದಿಲ್ಲಿಯಲ್ಲಿ ಏರ್ಪಡಿಸಿ ಪೈ ಸ್ಮಾರಕ ಕೇಂದ್ರವನ್ನು ದಿಲ್ಲಿಯಲ್ಲಿ ಸ್ಥಾಪಿಸಲು ಒತ್ತಾಯಿಸಿದರು. ದೆಹಲಿ ಕನ್ನಡಿಗ ಪತ್ರಿಕೆ ಪೈ ಸ್ಮಾರಕ ಕನ್ನಡದ ಶ್ರೇಷ್ಠ ಕವಿಯೊಬ್ಬರಿಗೆ ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿದರು. ಕಾರ್ಪೋರೇಷನ್ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಕೆ.ಆರ್. ನಾಯಕ್ ಅವರು ತನು ಕನ್ನಡ, ನುಡಿ ಕನ್ನಡ, ಮನೆ ಕನ್ನಡವೆಮ್ಮದು ಎಂಬ ವಿಚಾರವನ್ನು ತಾಯೆ ಬಾರಾ ಮೊಗವ ತೋರಾ ಎಂಬ ತಮ್ಮ ಕವಿತೆಯಲ್ಲಿ ಮೂಡಿಸಿದ ಪೈ ಅವರು ನವ್ಯದಲ್ಲಿಯಂತೆ ಗದ್ಯದಲ್ಲೂ ಸಿದ್ಧಹಸ್ತರಾಗಿದ್ದು ಕನ್ನಡ ಸಾಹಿತ್ಯದ ಮುಖ್ಯ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿದರು ಎಂದರು.


ಅಧ್ಯಕ್ಷತೆ ವಹಿಸಿದ್ದ ದೆಹಲಿ ವಿವಿ ಪ್ರಾಧ್ಯಾಪಕಿ, ಲೇಖಕಿ ಡಾ. ಜಂಬೋಲ್ಕರ್ ಪೈ ಗಳ ಕುರಿತು ಮಾತನಾಡಿದರು.
ಇದೇ ಸಂದರ್ಭಗಳಲ್ಲಿ ಪೈಗಳ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.


ಸಂಗ್ರಹ: http://www.kannadaprabha.com

Comments (0) >>
Write comment

busy