Log In | Join Now
Home arrow Sahitya Suddi arrow Sahitya suddi arrow Dasa Sahitya Koduge Apara
Dasa Sahitya Koduge Apara Print
Written by jayashree   
ಬಳ್ಳಾರಿ: ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ದಾಸ ಸಾಹಿತ್ಯದ ಕೊಡುಗೆ ಅಪಾರ ಎಂದು ಕನ್ನಡ ಉಪನ್ಯಾಸಕಿ ಜಯಲಕ್ಷ್ಮಿ ತಿಳಿಸಿದ್ದಾರೆ.

ಸಿರಿಗೇರಿ ಅನ್ನಪೂರ್ಣ ಪ್ರಕಾಶನ  ಸಂಸ್ಥೆಯು ನಗರದ ವಾರ್ಡ್ಲಾ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ’ಕಾಲೇಜಿಗೊಂದು ಕನ್ನಡ ದೀಪ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜರ ಆಸ್ಥಾನದಲ್ಲಿ ಚರ್ಚೆಗೊಳಗಾಗುತ್ತಿದ್ದ ಮತ್ತು ಗುರುಮನೆಗಳಿಗೆ ಸೀಮಿತವಾಗಿದ್ದ ಸಾಹಿತ್ಯವನ್ನು ಜನಮಾನಸ ಭಾವನೆಗಳಿಗೆ ನಿಲುಕವಂತೆ ಮಾಡಿದ ಕೀರ್ತಿ ದಾಸ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದರು.


ದಾಸರ ಕೊಡುಗೆ ದಾಸ ಸಾಹಿತ್ಯಕ್ಕೆ ಸೀಮಿತವಾಗದೇ ಸಂಗೀತ ಪ್ರಕಾರದಲ್ಲೊಂದಾದ ಕರ್ನಾಟಕ ಸಂಗೀತವನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟ ಕೀರ್ತಿ ಪುರಂದರ ದಾಸರಿಗೆ ಸಲ್ಲುತ್ತದೆ ಎಂದಗು ತಿಳಿಸಿದರು.


ವಾರ್ಡ್ಲಾ ಕಾಲೇಜಿನ ಪ್ರಾಂಶುಪಾಲ ಜಿ.ಬಿ. ಅಮರನಾಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಿ ಸಾಹಿತ್ಯ ಪ್ರಜ್ಞೆ ಮೂಡಿಸುವಲ್ಲಿ ಕಾಲೇಜಿನ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿವೆ ಎಂದು ತಿಳಿಸಿದರು.


ರಾಜುಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಲೋಕೇಶ್, ಮಹಮದ್ ರಫೀಕ್ ಉಪಸ್ಥಿತರಿದ್ದರು. ಇಂದಿರಾ, ಲಕ್ಷ್ಮಿ ಪ್ರಾರ್ಥಿಸಿದರು.


ಸಿರಿಗೇರಿ ಅನ್ನ ಪೂರ್ಣ ಪ್ರಕಾಶನದ ಸಿರಿಗೇರಿ ಎರ್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ, ಯುವ ಸಾಹಿತಿ ಸಿದ್ಧರಾಮಿ ಕಲ್ಮಠ ಕಾರ್ಯಕ್ರಮ ನಿರೂಪಿಸಿದರು.

 


ಸಂಗ್ರಹ: http://www.kannadaprabha.com

Comments (0) >>
Write comment

busy