Log In | Join Now
Home arrow Sahitya Suddi arrow Sahitya suddi arrow Daa.Papuge Sirigannada Rashtriya Ratna Prashasti
Daa.Papuge Sirigannada Rashtriya Ratna Prashasti Print
Written by jayashree   
ಅಗರದ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಜೀವಮಾನದ ಸಾಧನೆಗಾಗಿ ಡಾ. ಪಾಟೀಲ ಪುಟ್ಟಪ್ಪ ಅವರಿಗೆ ’ಸಿರಿಗನ್ನಡ ರಾಷ್ಟ್ರ್‍ಈಯ ರತ್ನ’ ಪ್ರಶಸ್ತಿ ಘೋಷಿಸಲಾಗಿದೆ.

ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿ ಮನು ಬಳಿಗಾರ, ಪತ್ರಕರ್ತರು ಹಾಗೂ ಸಾಹಿತಿಗಳಾದ ಡಾ. ಸರಜೂ ಕಾಟ್ಕರ್ ಅವರಿಗೆ ’ಸಿರಿಗನ್ನಡ ಸಾಹಿತ್ಯ ’ ಪ್ರಶಸ್ತಿ ನೀಡಲಾಗಿದೆ.


ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಾಗಿ ರಾಜ ಶ್ರೀ ಹಲಗೇಕರ, ಡಾ.ಭೀಮಶಿ ಜಾರಕಿಹೊಳಿ, ಡಾ. ರಾಜೇಶ ಪವಾರ, ಎಲ್.ಎಸ್.ಕೊಂಬಳಿ, ಮಲ್ಲಿಕಾರ್ಜುನ ಜಗಜಂಪಿ, ಲಕ್ಷ್ಮೀ ಹೆಬ್ಬಾಳಕರ, ಕೆ.ಎಚ್. ಓಬಳಪ್ಪ ಅವರಿಗೆ ’ವರ್ಷದ  ವ್ಯಕ್ತಿ’ ಪ್ರಶಸ್ತಿ ಪ್ರಕಟಿಸಲಾಗಿದೆ.


ನಗರದ ಜಿಎನ್‍ಎಂಸಿಯ ಜೀರಗೆ ಸಭಾಂಗಣದಲ್ಲಿ ಫೆಬ್ರವರಿ ೧೮ ರಂದು ಸಂಜೆ ೫ ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಶಶಿಧರ  ಘಿವಾರಿ, ಸಂಚಾಲಕ ರುದ್ರಣ್ಣ ಚಂದರಗಿ ಹಾಗೂ ಶಿ.ಗು. ಕುಸುಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಸಂಗ್ರಹ: http://www.kannadaprabha.com

Comments (0) >>
Write comment

busy