|
Chitradurgadalli Sadhyakke Sahitya Sammelana Beda |
|
|
Written by jayashree
|
|
ಚಿತ್ರದುರ್ಗ : ನಗರದಲ್ಲಿ ಮೂಲ ಸೌಕರ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು ಸದ್ಯಕ್ಕೆ ಬೇಡ ಎಂದು ಶಾಸಕ ಎಸ್. ಕೆ. ಬಸವರಾಜನ್ ಅಭಿಪ್ರಾಯಪಟ್ಟರು.
ಸಮ್ಮೇಳನ ೨ - ೩ ವರ್ಷ ಮುಂದೆ ಹೋದರೆ ಒಳ್ಳೆಯದು. ಈಗ ನಗರ ಹಾಳೂರಿನಂತೆದೆ. ಸಾಹಿತಿಗಳು ಬಹಳಷ್ಟು ನಿರೀಕ್ಷೆ ಇಟ್ಟು ಕೊಂಡಿದ್ದಾರೆ. ಅವರ ನಿರೀಕ್ಷೆಗಳು ಹುಸಿಯಾಗಬಹುದು. ಒಳ್ಳಾರಿಯವರು ಸಮ್ಮೇಳನ ನಡೆಸಲು ಮುಂದೆ ಬಂದರೆ ಬಿಟ್ಟು ಕೊಡುವುದು ಒಳ್ಳೆಯದು ಎಂದು ಅವರು ಶುಕ್ರವಾರ ಪತ್ರಿಕಗೋಷ್ಠಿಯಲ್ಲಿ ತಿಳಿಸಿದರು.
ಒತ್ತಾಯಪೂರ್ವಕವಾಗಿ ಸಮ್ಮೇಳನ ನಡೆದರೆ ನಿರಾಸಕ್ತಿಯಿಂದ ಮಾಡಬೇಕಾಗುತ್ತದೆ. ಇನ್ನೂ ೨-೩ ವರ್ಷಗಳಲ್ಲಿ ಸ್ವಲ್ಪ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಆಗ ಬೇಕಾದರೆ ಸಮ್ಮೇಳನ ನಡೆಸಬಹುದು. ಬಳ್ಳಾರಿ ಕಸಾಪ ಘಟಕ ಸಮ್ಮೇಳನ ಆಯೋಜಿಸಲು ಸ್ಪರ್ಧೆ ಮಾಡಿತ್ತು. ಅದಕ್ಕೆ ಅವರಿಗೆ ನೀಡುವುದು ಉಚಿತ ಎಂದರು.
ನಗರದಲ್ಲಿ ಸಮರ್ಪಕ ವಸತಿ ವ್ಯವಸ್ಥೆ ಇಲ್ಲ. ನೀರಿನ ಸೌಲಭ್ಯ ಇಲ್ಲ. ಸಾಕಷ್ಟು ಅವ್ಯವಸ್ಥೆಗಳಿಂದ ಕೂಡಿದೆ. ಸಮ್ಮೇಳನ ಆಯೋಜಿಸಲು ಮುಂದೆ ಅವಕಾಶಗಳು ಬಂದೇ ಬರುತ್ತವೆ. ನಮ್ಮ ಊರಲ್ಲಿ ನಡೆಯುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು. ಒಟ್ಟಿನಲ್ಲಿ ಇಲ್ಲಿ ಸಮ್ಮೇಳನ ಮಾಡುವುದು ಕಷ್ಟ. ಮುಂದಕ್ಕೆ ಹಾಕುವುದು ಒಳ್ಳೆಯದು ಎಂದರು.
ಸಂಗ್ರಹ: http://www.kannadaprabha.com
|