Log In | Join Now
Home arrow Sahitya Suddi arrow Sahitya suddi arrow Byari Kannada sahitya Akademigalige Onde Sthanamanaveke kum Vi
Byari Kannada sahitya Akademigalige Onde Sthanamanaveke kum Vi Print
Written by jayashree   
ಶಿವಮೊಗ್ಗ : ರಾಜ್ಯದಲ್ಲಿ ಈಗ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಯಾವ ಸ್ಥಾನವಿದೆಯೋ ಅದೇ  ಸ್ಥಾನಮಾನವನ್ನು ಕನ್ನಡ ಸಾಹಿತ್ಯ ಅಕಾಡೆಮಿಗೂ ನೀಡುವುದು ಎಷ್ಟು ಸರಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ  ಪ್ರಶಸ್ತಿ ಪುರಸ್ಕೃತ ಸಾಹಿತಿ ಕು. ವೀರಭದ್ರಪ್ಪ ಪ್ರಶ್ನಿಸಿದರು.

ಶಿವಮೊಗ್ಗದಲ್ಲಿ ಭಾನುವಾರ ಕನ್ನಡಪ್ರಭ ದೊಂದಿಗೆ ಮಾತನಾಡಿ, ಬ್ಯಾರಿ ಭಾಷೆ ಮಾತಾಡೋರು ರಾಜ್ಯದಲ್ಲಿ ೩ ಲಕ್ಷ ಇರಬಹುದು. ಅವರ ಅಕಾಡೆಮಿಗೂ ಅಷ್ಟೇ ಅನುದಾನ ಕೊಡುತ್ತೆ. ೭ಕೋಟಿ ಕನ್ನಡಿಗರ ಪ್ರತಿನಿಧಿಯಾದ ಕನ್ನಡ ಅಕಾಡೆಮಿಗೂ ಅದೇ ಅನುದಾನ ಕೊಡುತ್ತೆ ಎಂದು ಸರ್ಕಾರದ ನೀತಿಗೆ ಅಸಮಾಧಾನ ವ್ಯಕ್ತಪಡಿಸಿದರು. ಹೀಗಿರುವಾಗ ಕನ್ನಡ ವಾತಾವರಣ ನಿರ್ಮಿಸಲು ಸರ್ಕಾರ ಹೆಚ್ಚು ಇಚ್ಚಾಶಕ್ತಿ ಪ್ರದರ್ಶಿಸಬೇಕಾಗುತ್ತದೆ ಎಂದರು


ಕನ್ನಡದಲ್ಲಿ ಹೆಚ್ಚು ವ್ಯವಹರಿಸುವಂತ ವಾತಾವರಣವನ್ನು ಸರ್ಕಾರವೇ ನಿರ್ಮಿಸಬೇಕು. ಮಕ್ಕಳಿಗೆ  ಕನ್ನಡವೂ ಬೇಕು, ಇಂಗ್ಲೀಷನ್ನು ಕಲಿಸಬೇಕು ಎಂದ ಅವರು, ಸ್ವತಃ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿರುವಂತೆ ಯಾವುದೇ ಒಂದು ಕಾಯ್ದೆಯಿಂದ ಭಾಷೆ ಬೆಳೆಯುವಂತಾಗಬಾರದು ಎಂದರು.

 


ಸ್ಪಷ್ಟವಾಗಿ ಕನ್ನಡದಲ್ಲಿ ಐದು ವಾಕ್ಯ ಹೇಳುವಂತಹ ರಾಜಕಾರಣಿಗಳೂ ಅಪರೂಪ. ಎಷ್ಟೋ ರಾಜಕಾರಣಿಗಳಿಗೆ ಸರಿಯಾಗಿ ಕನ್ನಡ ಮಾತಾಡಲು ಬರುವುದಿಲ್ಲ. ಇಚ್ಚಾಶಕ್ತಿ ಇದ್ದರೆ ಕನ್ನಡ ವಾತಾವರಣ ನಿರ್ಮಾಣ ಅಸಾಧ್ಯವೇನಲ್ಲ.

 


ಸಂಗ್ರಹ: http://www.kannadaprabha.com

Comments (0) >>
Write comment

busy