Log In | Join Now
Home arrow Sahitya Suddi arrow Sahitya suddi arrow Buddhivikasa, Aatmoddarakke Dasa Sahitya Puraka
Buddhivikasa, Aatmoddarakke Dasa Sahitya Puraka Print
Written by jayashree   
ಚಿಕ್ಕಮಗಳೂರು: ಮನರಂಜನೆ, ಬುದ್ಧಿವಿಕಾಸ ಹಾಗೂ ಆತ್ಮೋದ್ಧಾರಕ್ಕೆ ದಾಸ ಸಾಹಿತ್ಯ ಪೂರಕ ಎಂದು ಗಾಯಕ ಪುತ್ತೂರು ನರಸಿಂಹನಾಯಕ ಹೇಳಿದ್ದಾರೆ. ನಗರದ ರಾಮಮಂದಿರದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ದಾಸವಾಣಿ ಕಾರ್ಯಗಾರ ಉದ್ಘಾಟಿಸಿ  ಅವರು ಮಾತನಾಡುತ್ತಿದ್ದರು.

ಜೀವನಕ್ಕೆ ಬೇಕಾದ ಎಲ್ಲಾ ವಿಷಯಗಳನ್ನು ಒಳಗೊಂಡ ದಾಸ ಸಾಹಿತ್ಯಕ್ಕೆ ಕಾವ್ಯಗುಣ ಇದೆ.೬೦೦ ರಿಂದ ೭೦೦ ವರ್ಷಗಳ ಇತಿಹಾಸ ಹೊಂದಿರುವ ದಾಸ ಸಾಹಿತ್ಯವನ್ನು ಬಳಸದ ಕವಿ ಇಲ್ಲ. ಮನುಷ್ಯನಿಗೆ ದಾಸ ಸಾಹಿತ್ಯ ಆತ್ಮಧಿಶಕ್ತಿಯನ್ನು ಒದಗಿಸುತ್ತದೆ ಎಂಬುದು ತಮ್ಮ ಅನುಭವ ಎಂದು ಹೇಳಿದರು.


ಕರ್ನಾತಕ ಇತಿಹಾಸದಲ್ಲಿ ೬೮೦ ಕ್ಕೂ ಹೆಚ್ಚು ಸಂತವರ್‍ಏಣ್ಯರು ಲಕ್ಷಾಂತರ ಹಾಡುಗಳನ್ನು ರಚಿಸಿದ್ದಾರೆ. ಇದರಲ್ಲಿ ೭೦ ಹಾಡುಗಳು ನಮ್ಮಲ್ಲಿವೆ.

ದಾಸ ಸಾಹಿತ್ಯದ ಶಕ್ತಿ ಅಪಾರ ಎಂದರು. ಅಮೇರಿಕಾ ಮತ್ತು ಗಾಲ್ಫ ದೇಶಗಳಲ್ಲೂ ಇದರ ಪ್ರಭಾವ ಇದೆ ಎಂದು ಅವರು ತಿಳಿಸಿದರು. ಸುಗಮ ಸಂಗೀತ ಗಂಗಾ ಕಾರ್ಯದರ್ಶಿ ಮಂಜುನಾಥ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಆರ್. ಶ್ರೀನಿವಾಸ್‌ರಾವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಶುರಾಮಶೋಷಿ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಪ್ರಕಾಶ್, ಬಿ.ವಿ. ಸತ್ಯನಾರಾಯಣ ಕಾಮತ್ ಮುಖ್ಯ ಅತಿಥಿಗಳಾಗಿದ್ದರು.

ರತ್ನಾ ಭಾಸ್ಕರ್ ಸ್ವಾಗತಿಸಿದರು. ಲಲಿತಾ ಗುರುಸಿದ್ದಪ್ಪ ವಂದಿಸಿದರು.

 


ಸಂಗ್ರಹ: http://www.kannadaprabha.com

Comments (0) >>
Write comment

busy