Log In | Join Now
Home arrow Sahitya Suddi arrow Sahitya suddi arrow Bisilooru Sahitya Samskruti Sanshodhane Hebbayake
Bisilooru Sahitya Samskruti Sanshodhane Hebbayake Print
Written by jayashree   
ಗುಲ್ಬರ್ಗ : ಜಿಲ್ಲೆಯ ಸಾಹಿತ್ಯ -ಸಂಸ್ಕೃತಿ ಸಂಶೋಧನೆಯ ಹೆಬ್ಬಯಕೆ ತಮ್ಮದಾಗಿದ್ದು, ಅದರಿಂದಲೇ ಮತ್ತೊಮ್ಮೆ ಕಸಾಪ ಚುನಾವಣೆಗೆ ಇಳಿದಿದ್ದಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಾಕಾಂಕ್ಷಿ ವೀರಭದ್ರ ಸಿಂಪಿ ಹೇಳಿದ್ದಾರೆ.

ನಗರದ ಕನ್ನಡ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಸಾಪ ಅಧ್ಯಕ್ಷರಾಗಿ ಲಭ್ಯವಿರುವ ೩ ವರ್ಷಗಳಲ್ಲಿ ಅನೇಕ ಸಾಧನೆ ಮಾಡಿರುವೆ ಎಂದ ಅವರು ತಮ್ಮನ್ನು ಸಾಹಿತಿಗಳು, ಸಾಹಿತ್ಯಾಸಕ್ತರು ಪುನರಾಯ್ಕೆ ಮಾಡಿದಲ್ಲಿ ಬರುವ ದಿನಗಳಲ್ಲಿ ಜಿಲ್ಲೆಯ ಗತ ಸಾಹಿತ್ಯ- ಸಾಂಸ್ಕೃತಿಕ ಇತಿಹಾಸದ ಮೇಲೆ ಹೊಸ ಬೆಳಕು ಮೂಡಿಸುವ ಕೆಲಸಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.


ಜಿಲ್ಲೆಯಲ್ಲಿರುವ ದಾಸ, ವಚನ, ತತ್ವ ಪದ ಸಾಹಿತ್ಯ, ಕಾಲಜ್ಞಾನ ಸಾಹಿತ್ಯ ಹೀಗೆ ಅನೇಕ ಸಾಹಿತ್ಯ ಪ್ರಕಾರಗಳ ಅಧ್ಯಯನಕ್ಕೆ ಯೋಜನೆ ರೂಪಿಸುವ ಹೆಬ್ಬಯಕೆ ನನ್ನದು ಎಂದರು.


ತಮ್ಮ ಅವಧಿಯಲ್ಲಿ ಪರಿಷತ್ತಿಗೆ ೫ ಲಕ್ಷ ರು.ವಿವಿಧ ನಮೂನೆಯ ಪರಿಕರಗಳನ್ನು ಕ್ರೂಢೀಕರಿಸಿದ್ದಾಗಿ ಹೇಳಿದ ಅವರು, ನೈಸ್ ಕಂಪನಿ ಅಶೋಕ ಖೇಣಿ ಅವರು ನೀಡಿರುವ ವಾಹನದಿಂದ ಸಂಚಾರ ಮಾಡಿ ಹೆಚ್ಚಿನ ಕಾರ್ಯ ಮಾಡಲು ಅನುಕೂಲವಾಗಿರುವುದಾಗಿ ನುಡಿದರು.

 


ಸಂಗ್ರಹ:http://www.kannadaprabha.com

Comments (0) >>
Write comment

busy