Log In | Join Now
Home arrow Sahitya Suddi arrow Sahitya suddi arrow Belgoviyali kannada vijnana Sammelana
Belgoviyali kannada vijnana Sammelana Print
Written by jayashree   
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ವಿಜ್ಞಾನ ಭಾರತೀಯ ಅಂಗಸಂಸ್ಥೆಯಾದ ಸ್ವದೇಶಿ ವಿಜ್ಞಾನ ಆಂದೋಲನ ಆಶ್ರಯದಲ್ಲಿ ಸೆಪ್ಟಂಬರ್ ೧೫ರಿಂದ ೩ ದಿನಗಳ ಕನ್ನಡ ವಿಜ್ಞಾನ ಸಮೇಳನ ಬೆಳಗಾವಿಯಲ್ಲಿ ನಡೆಯಲಿದೆ.

ವಿಟಿಯು ಆವರಣದಲ್ಲಿ ನಡೆಯುವ ಸಮ್ಮೇಳನದಲ್ಲಿ ೨೫೦ ಪ್ರತಿನಿಧಿಗಳು ಹಾಗೂ ವಿಟಿಯು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು  ಭಾಗವಹಿಸಲಿದ್ದಾರೆ. ಇದೇ ವೇಳೆ ಡಾ. ಭೀಮಸೇನ್ ಜೋಶಿ, ಡಾ. ವೀರೇಂದ್ರ ಹೆಗಡೆ ಸೇರಿ ನಾಲ್ವರು ಗಣ್ಯರಿಗೆ ’ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ’ ನೀಡಲಾಗುವುದು ಎಂದು ಕುಲಪತಿ ಡಾ. ಎಚ್. ಪಿ. ಖಿಂಚಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದು ೪ನೇ ಕನ್ನಡ ವಿಜ್ಞಾನ ಸಮ್ಮೇಳನವಾಗಿದ್ದು, ’ಭಾರತೀಯ ಪರಂಪರೆಯ ಯಂತ್ರ ವಿಜ್ಞಾನ ಮತ್ತು ತಂತ್ರಜ್ಞಾನಗಳು (ಹರಪ್ಪದಿಂದ ಹಂಪಿ ಹಾಗೂ ಶ್ರೀಹರಿಕೋಟಾದವರೆಗೆ ) ಸಮ್ಮೇಳನದ ಪ್ರಮುಖ ವಿಷಯವಾಗಿದೆ.


ಕರ್ನಾಟಕದ ಸಮಗ್ರ ಬೆಳವಣಿಗೆಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಅಂಗವಾಗಿ ಜಿಲ್ಲೆಯ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಲಾಗುವುದು ಎಂದು ಖಿಂಚಾ ತಿಳಿಸಿದರು. ಕುಲಸಚಿವ ಡಾ. ಕೆ.ವಿ.ಎ. ಬಾಲಾಜಿ ಇದ್ದರು.

 


ಸಂಗ್ರಹ: http://www.kannadaprabha.com

Comments (0) >>
Write comment

busy