Log In | Join Now
Home arrow Sahitya Suddi arrow Sahitya suddi arrow Beelagiyalli Vachanagayanotsava Upanyasa
Beelagiyalli Vachanagayanotsava Upanyasa Print
Written by jayashree   
ಬೀಳಗಿ : ಒಳ್ಳೆಯದನ್ನು ಕೇಳುವಾಗ ತಲೆದೂಗುವ ಜನ, ಸ್ವತಃ ಒಳ್ಳೆಯವರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ. ದಾಸರ ಹೇಳಿದರು. ಅವರು ಈಚೆಗೆ ಇಲ್ಲಿನ ತಾಲೂಕಿನ ಸರ್ಕಾರಿ ನೌಕರರ ಸಭಾಭವನದಲ್ಲಿ ನಡೆದ ಉಪನ್ಯಾಸ ಹಾಗೂ ವಚನಗಾಯನೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಂಧ ಕಲಾವಿದ ಸುಭಾಸ್ ಪಾಟೀಲ ಮಾತನಾಡಿ, ನಮಗೆ ಕಣ್ಣಿಲ್ಲ, ದೃಷ್ಠಿಯಿದೆ. ನಮ್ಮನ್ನು ಹಾಗೂ ನಮ್ಮಲ್ಲಿನ ಪ್ರತಿಭೆಯನ್ನು ಗೌರವಿಸಿ ಎಂದು ಕಣ್ಣಿರುವ ಶ್ರೀಮಂತರನ್ನು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದಾಗ ಸಭೆಯಲ್ಲಿದ್ದವರ ಕಣ್ಣಂಚಲ್ಲಿ ನೀರು ಜಿನುಗಿತು. ಡಾ. ಶ್ರೀ ರಾಮ ಇಟ್ಟಣ್ಣವರ  ಅಧ್ಯಕ್ಷತೆ ವಹಿಸಿದ್ದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಂಠಿ ಹನುಮಂತರಾಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ಧಪ್ಪ ಬೆಣ್ಣಿರೊಟ್ಟಿ, ನೂರಲಿ, ತಹಸೀಲ್ದಾರ ಇತರದು ಇದ್ದರು.


ಶರಣಚೇತನ ವೇದಿಕೆ ಅಧ್ಯಕ್ಷ ಗುರುರಾಜ ಲೂತಿ ಸ್ವಾಗತಿಸಿದರು. ರಾಜು ಕೊಪ್ಪ, ಸೋಮಲಿಂಗ ಬೇಡರ ನಿರೂಪಿಸಿದರು. ಬಿ.ಎಸ್. ಪಾಟೀಲ ವಂದಿಸಿದರು.


ಸಂಗ್ರಹ:http://www.kannadaprabha.com

Comments (0) >>
Write comment

busy