Log In | Join Now
Home arrow Sahitya Suddi arrow Sahitya suddi arrow Ballariyalli Akhila Bharata Sahitya Sammelana Nadesuve
Ballariyalli Akhila Bharata Sahitya Sammelana Nadesuve Print
Written by jayashree   
ಹೊಸಪೇಟೆ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸುವ ಮೂಲಕ ಜಿಲ್ಲೆಯಲ್ಲಿ ಸಾಹಿತ್ಮಿಕ ಚಟುವಟಿಕೆ ಹಮ್ಮಿಕೊಳ್ಳುವುದಾಗಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ನಿಷ್ಠಿ ರುದ್ರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಉಪನ್ಯಾಸಕ ಡಾ. ಕೆ. ರೇವಣಸಿದ್ದಪ್ಪ ಅವರ ನಿವಾಸದಲ್ಲಿ ಮಂಗಳವಾರ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಸಾಪಕ್ಕೆ ಸರ್ಕಾರದಿಂದ ಹೆಚ್ಚಿನ ಆರ್ಥಿಕ ಅನುದಾನವಿಲ್ಲದೆ ಸಾಕಷ್ಟು ಸಂಕಷ್ಟದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ ಎಂದು ಹೇಳಿದರು.


ಕಳೆದ ಬಾರಿ ಕಸಾಪ ಅಧ್ಯಕ್ಷ ರಾಗಿದ್ದಾಗ ೧೨ ಲಕ್ಷ ರು. ದತ್ತಿನಿಧಿ ಸಂಗ್ರಹಿಸಿದ್ದೇವೆ. ಈ ಮೂಲಕ ಅನೇಕ ಸಾಹಿತ್ಯಿಕ ಕಾರ್ಯಕ್ರಮ ನಡೆಸಿದ್ದೇವೆ. ಮುಂದೆಯೂ ಅವಕಾಶ ಒದಗಿಸಿಕೊಟ್ಟರೆ ಉತ್ತಮ ಕಾರ್ಯ ಮಾಡುವುದಾಗಿ ಅವರು ತಿಳೀಸಿದರು.


ಕಳೆದ ಬಾರಿಯೇ ಬಳ್ಳಾರಿ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವ ಉದ್ದೇಶವಿತ್ತು. ಆದರೆ, ಕೇವಲ ಬಾರಿಯೇ ಬಳ್ಳಾರಿ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವ ಉದ್ದೇಶವಿತ್ತು. ಆದರೆ, ಕೇವಲ ೨ ಮತಗಳ ಅಂತರದಿಂದ ಅವಕಾಶ ತಪ್ಪಿತು. ಈ ಬಾರಿ ಇಲ್ಲೇ ನಡೆಸುವ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡುವುದಾಗಿ ಹೇಳಿದರು. ಬಳ್ಳಾರಿಯಲ್ಲಿ ೫೮ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದ ಮೇಲೆ ಮತ್ತೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ಈ ಬಾರಿ ತಮ್ಮನ್ನು ಗೆಲ್ಲಿಸುವ ಮೂಲಕ ಬಳ್ಳಾರಿಯಲ್ಲಿ ಸಮ್ಮೇಳನ ನಡೆಸಲು ಪ್ರಯತ್ನಿಸುವುದಕ್ಕೆ ಮತ್ತೊಮ್ಮೆ ಅವಕಾಶ ಕೊಡುವಂತೆ ಮತದಾರರಲ್ಲಿ ವಿನತಿಸಿದರು.

 


ಸಂಗ್ರಹ:http://www.kannadaprabha.com

 

Comments (0) >>
Write comment

busy