Log In | Join Now
Home arrow Sahitya Suddi arrow Sahitya suddi arrow Aaluru Venkatarayaru (july 13 1880
Aaluru Venkatarayaru (july 13 1880 Print
Written by jayashree   

ಆಲೂರು ವೆಂಕಟರಾಯರು ಕ್ರಿ.ಶ. ೧೮೮೦ನೆಯ ಜುಲೈ ೧೩ ಆಷಾಢ ಶುದ್ಧ ಪಂಚಮಿಯ ದಿನ ವಿಜಾಪುರದಲ್ಲಿ ಜನ್ಮ ತಾಳಿದರು.

 

ವೆಂಕಟರಾಯರ ತಂದೆ ಭೀಮರಾವ್ ಆಲೂರ, ತಾಯಿ ಭೀಮರಾವ್ ಆಲೂರ, ತಾಯಿ ಭಾಗೀರಥಿ ಬಾಯಿ ಇವರ ಹಿರಿಯಮಗ ವೆಂಕಟರಾಯರು. ಇವರ ಹೆಸರು ವೆಂಕಟೇಶನೆಂದು. ಧಾರವಾಡ ಜಿಲ್ಲೆಯ ಹೊಳೆಆಲೂರ ಗ್ರಾಮವು ಇವರ ವಂಶದವರಿಗೆ ಜಹಗೀರಿಯಾಗಿ ದೊರೆತ್ತಿತ್ತು. ಆದುದರಿಂದ ಇವರ ಮನೆತನಕ್ಕೆ ’ಆಲೂರ ಮನೆತನ’ ಎಂಬ ಹೆಸರು ಬಂದಿತ್ತು.


ಅದರಿಂದ ವೆಂಕಟರಾಯರು ಆಲೂರು ವೆಂಕಟರಾಯರು ಎಂದೇ ಪ್ರಸಿದ್ದರಾದರು.

 

ಮನೆಯಲ್ಲಿಯೇ ಸಂಸ್ಕೃತವನ್ನು ಕನ್ನಡವನ್ನೂ ಕಲಿತರು. ಏಳನೆ ವಯಸ್ಸಿನಲ್ಲಿ ಶಾಲೆಗೆ ಸೇರಿದರು. ಇವರ ತಂದೆಯವರಿಗೆ ಊರಿಂದೂರಿಗೆ ವರ್ಗವಾಗುತ್ತಿದ್ದುದರಿಂದ ಇವರ ವಿದ್ಯಾಭ್ಯಾಸ ಗದಗು, ಹಾನಗಲ್ಲಿ ನಡೆಯಿತು.

 

ಹೈಸ್ಕೂಲಿಗೆ ಧಾರವಾಡದ ಶಾಲೆ ಸೇರಿದರು. ಹೈಸ್ಕೂಲಿನಲ್ಲಿ ಮರಾಠಿ ಮತ್ತು ಇಂಗ್ಲೀಷ ಭಾಷೆಗಳೂ ಪ್ರಮುಖವಾದ ಮುಂದಿನ ವರ್ಷ ಆಲೂರರು ಪುಣೆಯ ಫರ್ಗೂಸನ್ ಕಾಲೇಜ್  ಸೇರಿದರು. ಅಲ್ಲಿ ಆಲೂರರ ಸಹಪಾಠಿಗಳೂ ಮುಂದೆ ಬಹುಪ್ರಸಿದ್ದರಾದ ವೀರಸಾವರ್ಕರ್, ಸೇನಾಪತಿ ಬಾಪೆಟ್ ಮುಂತಾದವರು. ಆಲೂರರು ನಾಲ್ಕು ವರ್ಷಗಳ ಕಾಲ ವಿಧ್ಯಾಭ್ಯಾಸ ನಡೆಸಿ ಬಿ ಎ ಎಲ್ ಎಲ್ ಬಿ ಪದವಿಯನ್ನು ಪಡೆದರು.

 

ಆಲೂರು ವೆಂಕಟರಾಯರು ’ಕೇಸರಿ’ ಪತ್ರಿಕೆಯನ್ನು ಮರಾಠಿಯಲ್ಲಿ ನಡೆಸುತ್ತಿದ ಲೋಕಮಾನ್ಯ ಬಾಲಗಂಗಾಧರ ತಿಲಕರನ್ನು ೧೯೦೨ರಲ್ಲಿ ಭೇಟಿಯಾದರು. ಅಂದಿನ ಪರಿಚಯದಿಂದಾಗಿ ಬಾಲಗಂಗಾಧರ ತಿಲಕರು ಜೀವಿಸಿದಷ್ಟೂ ಕಾಲವೂ ಇವರಿಬ್ಬರ ಸ್ನೇಹ ಮುಂದುವರೆಯಿತು. ಅಷ್ಟೇ ಅಲ್ಲ ತಿಲಕರು ಕಾಂಗ್ರೆಸ್ಸಿನ ಸೂರತ್ ಅಧಿವೇಶನದಲ್ಲಿ ಆಲೂರರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು. ಈ ಸ್ನೇಹದ ಗುರುತಾಗಿ ತಿಲಕರು  ಮರಾಠಿಯಲ್ಲಿ ಬರೆದ ಗೀತಾರಹಸ್ಯವನ್ನು  ಆಲೂರು ಕನ್ನಡಕ್ಕೆ ಅನುವಾದ ಮಾಡಿದರು.

 

ಬಿ.ಎ.ಎಲ್.ಎಲ್.ಬಿ.. ಪರೀಕ್ಷೆ ಮುಗಿಸಿದ ಆಲೂರರು ಧಾರವಾಡಕ್ಕೆ ಬಂದು ವಕೀಲಿ ವೃತ್ತಿಯನ್ನು ಆರಂಭಿಸಿದರು. ಆದರೆ ಅವರು ವಕೀಲಿ ವೃತ್ತಿಯನ್ನು ಹೆಚ್ಚುಕಾಲ ನಡೆಸಲಿಲ್ಲ. ಆಲೂರರು ವಕೀಲಿ ವೃತ್ತಿಯನ್ನು  ಬಿಟ್ಟ ಮೇಲೆ ಚಳುವಳಿಯನ್ನು ಪ್ರಾರಂಭಿಸಿದರು. ವಿದೇಶಿ ಬಟ್ಟೆಗಳ ಬದಲು ಸ್ವದೇಶಿ ಬಟ್ಟೆಯನ್ನು ಧರಿಸಲು ಪ್ರೇರಿಸಿದರು. ರಾಷ್ಟ್ರೀಯ ಶಿಕ್ಷಣ ಶಾಲೆಯನ್ನು ತೆರೆದರು. ಇದರಲ್ಲಿ ಭಾರತೀಯತ್ವವನ್ನೂ, ಸ್ವದೇಶಾಭಿಮಾನವನ್ನೂ ಭೋದಿಸಿದರು. ಕರ್ನಾಟಕಾಂತರ್ಗತ ಭಾರತಮಾತೆಗೆ ನಮಸ್ಕಾರ ಎಂಬ ಮಂತ್ರವನ್ನು ಘೋಷಿಸಿ ಕನ್ನಡದ ಶ್ರೇಯೋಭಿವೃದ್ಧಿಗೆ ದುಡಿದರು. ಕರ್ನಾಟಕದ ನವನಿರ್ಮಾಣ ಕಾರ್ಯದಲ್ಲಿ ಅಗ್ರಗಣ್ಯರಾದರು. ಕರ್ನಾಟಕ ತಿಲಕರಾದರು. ಕನ್ನಡ ಕುಲಪುರೋಹಿತರೆಂದು ಗೌರವಿಸಲ್ಪಟ್ಟರು.

 

ಸ್ವದೇಶಿ ಚಳವಳಿಯ ಕಾರಣದಿಂದ ಊರಿಂದ ಊರಿಗೆ ತಿರುಗುತ್ತಿದ್ದ ಆಲೂರರು ಆನೆಗೊಂದಿ, ಹಂಪಿಗಳನ್ನು ನೋಡಿದರು. ಅಂದಿನಿಂದ ಅವರು ಕರ್ಣಾಣಕತ್ವದ ತಪಸ್ಸನ್ನು ಕೈಗೊಂಡರು. ೧೯೦೭ರಲ್ಲಿ ’ವಾಗ್ಭೂಷಣ’ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ವಿಜಯನಗರದ ಸಾಮ್ರಾಜ್ಯ ಸ್ಥಾಪನೆಗೆ ಶ್ರಮಿಸಿದ ಶ್ರೀವಿದ್ಯಾರಣ್ಯರನ್ನು ಕುರಿತು ಶ್ರೀ ವಿದ್ಯಾರಣ್ಯ ಚರಿತ್ರೆ ಎಂಬ ಸಣ್ಣ ಪುಸ್ತಕವನ್ನು ಪ್ರಕಟಿಸಿದರು. ನರಗುಂದ ರಾಮರಾಯರೊಡನೆ ಸೇರಿ ’ಕನ್ನಡಿಗರ     ಭ್ರಮನಿರಸನ’ ಎಂಬ ನಾಟಕವನ್ನು ರಚಿಸಿದರು. ’ಕರ್ನಾಟಕ ಗತವೈಭವ’ ಎಂಬ ಗ್ರಂಥವನ್ನು ಬರೆದು ಪ್ರಕಟಿಸಿದರು. ಈ ಎಲ್ಲ ಗ್ರಂಥಗಳೂ ಕನ್ನಡಿಗರನ್ನು ಎಚ್ಚರಿಸಿತು. ’ಕರ್ನಾಟಕ ಗತವೈಭವ’ ಅವರು ಇಂಗ್ಲೀಷ್‌ನಲ್ಲಿ ಮಾಡಿದ ಭಾಷಣವನ್ನು ಆಧರಿಸಿ ಕನ್ನಡದಲ್ಲಿ ರಚಿತವಾಯಿತು.


ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿ ಇವರು ಶ್ರಮಿಸಿದರು. ಮತ್ತು ಕೆಲವು ವರ್ಷಗಳು ಧಾರವಾಡದಿಂದಲೇ ಅದರ ಕಾರ್ಯಕಲಾಪಗಳಲ್ಲಿ ಭಾಗವಹಿಸುತ್ತಿದ್ದರು. ೧೯೨೨-೨೩ ರಲ್ಲಿ ಜಯಕರ್ನಾಟಕ ಪತ್ರಿಕೆಯನ್ನು ಆರಂಭಿಸಿ ಕೆಲವು ವರ್ಷ ನಡೆಸಿಕೊಂಡು ಬಂದರು. ’ಕರ್ಮವೀರ’ ಪತ್ರಿಕೆಯ ಸಂಪಾದಕರನ್ನು ಆಗಿಂದಾಗ್ಗೆ ಸರ್ಕಾರ ಬಂಧಿಸುತ್ತಿತ್ತು. ಇಂತಹ ಸಮಯಗಳಲ್ಲೆಲ್ಲಾ ಆಲೂರರು ಕರ್ಮವೀರ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದರು.


೧೯೩೬ರಲ್ಲಿ ವಿಜಯನಗರ ಸ್ಥಾಪನೆಯಾದ ೬೦೦ ನೇ ವರ್ಷದ ನೆನಪಿಗಾಗಿ ಒಂದು ಸಮಾರಂಭವನ್ನು ಏರ್ಪಡಿಸಿದರು. ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸಲು ಇವರು ಕೈಕೊಂಡ ಇನ್ನೊಂದು ಕಾರ್ಯಕ್ರಮವಿದು.


ಇವರ ಅನೇಕ ಕೃತಿಗಳಲ್ಲಿ ಮೇಲೆ ಹೇಳಿದ ಪುಸ್ತಕಗಳಲ್ಲದೆ; ಕರ್ನಾಟಕ ವೀರರತ್ನಗಳು, ಕರ್ನಾಟಕತ್ವದ ಸೂತ್ರಗಳು ಕರ್ನಾತಕತ್ವದ ವಿಕಾಸ, ಶಿಕ್ಷಣ ಮೀಮಾಂಸೆ, ಗೀತಾಪರಿಮಳ, ಗೀತಾ ಪ್ರಕಾಸ, ಗೀತಾ ಭಾವಪ್ರದೀಪ, ನನ್ನ ಜೀವನಸ್ಮೃತಿಗಳು ಮತ್ತು ಮಧ್ವಸಿದ್ಧಾಂತವನ್ನು ಕುರಿತು ಕೆಲವು ಪುಸ್ತಕಗಳನ್ನು ರಚಿಸಿದ್ದಾರೆ.


೧೯೩೦ರಲ್ಲಿ ಮೈಸೂರಿನಲ್ಲಿ ಜರುಗಿದ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೬೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇವರಿಗೆ ಸನ್ಮಾನ ನೀಡಿ ಗೌರವಿಸಿತು. ಬೆಂಗಳೂರು ನಗರದಲ್ಲಿ ಇವರಿಗೆ ಪೌರಸನ್ಮಾನವನ್ನು ಮಾಡಲಾಯಿತು.

 

      ಇವರು ದಿನಾಂಕ ೨೫-೨-೧೯೬೪ ರಂದು ದೈವಾಧೀನರಾದರು.

ಸಂಗ್ರಹ: http: habba mattu dinacharane

Comments (0) >>
Write comment

busy