Sahitya Suddi
Sahitya suddi
6 randu Dr. Dejagow 91ne Janma Dinacharane | 6 randu Dr. Dejagow 91ne Janma Dinacharane |
|
| Written by jayashree | |
|
ಸಮಾರಂಭದ ಸಾನಿಧ್ಯವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮ ಉದ್ಘಾಟಿಸುವರು ’ಧರಗೆ ದೊಡ್ಡವರು’ ಸಂಸ್ಥಾನ ಆಡಳಿತಾಧಿಕಾರಿ ಬಿ.ಎಲ್. ಪ್ರಭುದೇವರಾಜೇ ಅರಸ್ ನೆನಪಿನ ಕಾಣಿಕೆ ನೀಡುವರು. ಹಂಪಿ ಕನ್ನಡ ವಿವಿ ಕುಲಪತಿ ಡಾ. ಎ. ಮುರಗಪ್ಪ ಅವರು ಕೃತಿಗಳನ್ನು ಬಿಡುಗಡೆಗೊಳಿಸುವರು. ಅನುವಾದ ಅಕಾಡೆಮಿ ಅಧ್ಯಕ್ಷ ಡಾ. ಪ್ರಧಾನ್ ಗುರುದತ್ ಅಭಿನಂದನಾ ಭಾಷಣ ಮಾಡುವರು ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಎಂ. ಎನ್. ವೆಂಕಟೇಶ್ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್. ಎ. ರಾಮದಾಸ್, ಶಾಸಕ ಎಚ್.ಎಸ್. ಶಂಕರಲಿಂಗೇಗೌಡ, ತೋಂಟದಾರ್ಯ, ಜಯ ಕರ್ನಾಟಕ ರಾಜ್ಯಾಧ್ಯಕ್ಷ ರಮೇಶ ಗೌಡ, ಮಾಜಿ ಮೇಯರ್ ವಾಸು ಅತಿಥಿಗಳಾಗಿ ಭಾಗವಹಿಸುವರು. ೭೫ ವರ್ಷ ದಾಟಿ ಸಾಧನೆ ಮಾಡಿರುವ ಎಂ. ಶ್ರೀನಿವಾಸ ಜೋಯಿಸ್, ಡಾ. ಎಚ್ಚೆಸ್ಕೆ, ಕೆ.ಎಫ್. ಶಿವನಂಜಯ್ಯ, ಡಾ. ನಂಜರಾಜಯ್ಯ, ಡಾ. ಎಂ. ಅಕಬರ ಅಲಿ, ಕೃಷ್ಣವಟ್ಟಂ, ಪಿ.ಎಂ. ಚಿಕ್ಕಬೋರಯ್ಯ, ಗೌರಿ ಕುಪ್ಪಸ್ವಾಮಿ ಮತ್ತು ಎಚ್.ಎಸ್. ಮಹಾಲಕ್ಷ್ಮಿ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
|