|
29 randu Kala Sahitya Vedike Varshikotsava |
|
|
Written by jayashree
|
|
ಇಲ್ಲಿಗೆ ಸಮೀಪದ ಕರ್ವಾಲಿ ಮಂಗಳ ಕಲಾ ಸಾಹಿತ್ಯ ವೇದಿಕೆಯ ೭ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ೨೯ರಂದು ಕರ್ವಾಲು ಶಾಲೆಯ ವಠಾರದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ೯ ಗಂಟೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ಯಾವರ ವಲಯ ಮೇಲ್ವಿಚಾರಕ ವಿನಯಕುಮಾರ್ ಧ್ವಜಾರೋಹಣ ಮಾಡಲಿದ್ದಾರೆ. ಈ ಸಂದರ್ಭ ಯೋಜನೆಯ ಕೇಂದ್ರೀಯ ಒಕ್ಕೂಟದ ಅಧ್ಯಕ್ಷ ಸೋಮನಾಥ ಬಿ.ಕೆ. ಮತ್ತು ಯೋಜನೆಯ ಮಣಿಪುರ ಗ್ರಾಮದ ಸೇನಾ ನಿರತ ರಾಘವೇಂದ್ರ ಪಾಲ್ಗೊಳ್ಳುವರು.
ರಾತ್ರಿ ೮ ಗಂಟೆಗೆ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕುದಿ ವಿಷ್ಣುಮೂರ್ತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕುದಿ ವಸಂತ ಶೆಟ್ಟಿ ವಹಿಸಿಕೊಳ್ಳಲಿದ್ದಾರೆ.
ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಪ್ರವೋದ್ ಮಧ್ವರಾಜ್, ಉದ್ಯಮಿ ಮಹಿಮ್ ಕುಮಾರ್ ಹೆಗ್ಡೆ, ದ.ಕ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಡುಪಿ ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ, ತಾ.ಪಂ. ಸದಸ್ಯ ಉಮೇಶ್ ನಾಯ್ಕ್, ಚಿತ್ರನಟ ಹರೀಶ್ ರಾಯ್, ನಗರಸಭಾ ಸದಸ್ಯ ನಿತ್ಯಾನಂದ ಒಳಕಾಡು, ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಘವ ಶೆಟ್ಟಿಗಾರ್ ಭಾಗವಹಿಸಲಿದ್ದಾರೆ. ವೇದಿಕೆಯ ಸದಸ್ಯರಿಂದ ಎಂ.ಕೆ. ರವಿ ಕಲ್ಮಾಡಿ ನಿರ್ದೇಶನದಲ್ಲಿ ಕೆ. ಬಾಬು ಕೋಟ್ಯಾನ್ ಅವರ ತುಳು ಸಾಮಾಜಿಕ ನಾಟಕ ’ಅಪ್ಪೆನ ಕಣ್ಣೀರ್’ ಪ್ರದರ್ಶನಗೊಳ್ಳಲಿದೆ.
ಸಂಗ್ರಹ: http://www.kannadaprabha.com
|