Log In | Join Now
Home arrow Sahitya Suddi arrow Sahitya suddi arrow 21 randu Karkala Taloolu Kannada Sahitya Sammelana
21 randu Karkala Taloolu Kannada Sahitya Sammelana Print
Written by jayashree   
ಕಾರ್ಕಳ ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುನಿಯಾಲು ಸರ್ಕಾರಿ ಪ.ಪೂ.ಕಾಲೇಜು ಆವರಣದ ಡಾ|ಯು.ಕೃಷ್ಣ ವೇದಿಕೆಯಲ್ಲಿ ೨೧ ರಂದು ನಡೆಯಲಿದೆ.

ಗ್ರಾಮೀಣ ಪ್ರದೇಶದಲ್ಲಿ ಏರ್ಪಡಿಸಿರುವ ಸಾಹಿತ್ಯ ಸಮ್ಮೇಳನದ ಸಿದ್ಧತೆ ಭರದಿಂದ ನಡೆಯುತ್ತಿದೆ ಎಂದು ಸಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ದಿವಾಕರ ವೈಶೆಟ್ಟಿ, ಕಾರ್ಯಾಧ್ಯಕ್ಷ ದಿನೇಶ ಪೈ, ತಾಲೂಕು ಕಸಾಪ ಅಧ್ಯಕ್ಷ ಅಂಬಾತನಯ ಮುದ್ರಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಕನ್ನಡ-ತುಳು ಉಭಯ ಭಾಷಾ ಸಂಶೋಧಕ, ಚಿಂತಕ ಡಾ| ಕಬ್ಬಿನಾಲೆ ವಸಂತ ಭಾರದ್ವಾಜ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದ ಕನ್ನಡ ಭುವನೇಶ್ವರಿಯ ಮೆರವಣಿಗೆ ಬೆಳಿಗ್ಗೆ ೯ ಕ್ಕೆ ಮುನಿಯಾಲು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಿಂದ ಹೊರಡುವುದು. ೯.೩೦ಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಬಾತನಯ ಮುದ್ರಾಡಿ ಪರಿಷತ್ ಧ್ವಜಾರೋಹಣ ನೆರವೇರಿಸುವರು.


ಉದ್ಘಾಟನೆ : ಜಾನಪದ ಸಂಶೋಧಕ, ವಿಧ್ವಾಂಸ ಮಲಲಿ ವಸಂತ ಕುಮಾರ್ ಉದ್ಘಾಟಿಸುವರು. ೧೧.೩೦ ರಿಂದ ’ಕನ್ನಡ ಸಾಹಿತ್ಯಕ್ಕೆ ಕಾರ್ಕಳ ತಾಲೂಕಿನ ಜೈನ ಸಾಹಿತಿಗಳ ಕೊಡುಗೆ’ ಕುರಿತು ನ್ಯಾಯವಾದಿ ಎಂ.ಕೆ.ವಿಜಯಕುಮಾರ್ ಶಿಖರೋಪನ್ಯಾಸ ನೀಡುವರು.


ಗೋಷ್ಠಿಗಳು: ಮೊದಲನೇ ಗೋಷ್ಠಿ ’ಸಾಹಿತ್ಯ ಚಿಂತನ’ ೧೨ ಗಂಟೆಗೆ  ಆರಂಭವಾಗುವುದು. ’ಮಾಧ್ಯಮ ಮತ್ತು ಸಾಹಿತ್ಯ’ ಕುರಿತು ಕಾರ್ಕಳ ಎಸ್‍ವಿಟಿ ಪ.ಪೂ.ಕಾಲೇಜು ಪ್ರಾಂಶುಪಾಲೆ ಶ್ಯಾಮಲಾ ಗೋಪಿನಾಥ್ ಉಪನ್ಯಾಸ ನೀಡುವರು.


ಅಪರಾಹ್ನ ೨ಕ್ಕೆ ’ಕವಿತಾ ವಿಹಾರ’ ಜ್ಯೋತಿ ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.


ಕವಿಗಳಾದ ಉಮೇಶ ಗೌತಮ ನಾಯಕ್, ನೆಂಪು ನರಸಿಂಹ ಭಟ್, ರೇಖಾ ಕುಂದಾರು, ಕೆ.ಮನೋಹರ ಶೆಟ್ಟಿ, ಅನುರಾಧ ತೆಳ್ಳಾರು, ಅಶ್ವಿನ್ ಸನಿಲ್ ಪಾಲ್ಗೊಳ್ಳುವರು. ವೈ. ಅನಂತ ಪದ್ಮನಾಭ ಭಟ್ ಕಾವ್ಯಗಾಯನ ನಡೆಸಿಕೊಡುವರು.

 


ಸಂಗ್ರಹ: http://www.kannadaprabha.com

Comments (0) >>
Write comment

busy