Log In | Join Now
Home arrow Sahitya putagalu arrow Sahitya Kanmanigalu arrow Sam Shi Bhusanuramatha
Sam Shi Bhusanuramatha Print
Written by MS Rajanikanth   
"ಸಂ.ಶಿ. ಭೂಸನೂರಮಠ" - (೧೯೧೦-೧೯೯೧)
ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ ಅವರು ಜನಿಸಿದ್ದು ೧೯೧೦ರ ನವೆಂಬರ್ ೭ರಂದು. ಧಾರವಾಡ ಜಿಲ್ಲೆ ರೋಣ ತಾಲೂಕಿನ ನಿಡಗುಂದ ಅವರ ಹುಟ್ಟಿದೂರು. ತಂದೆ: ಶಿವಮೂರ್ತಯ್ಯ, ತಾಯಿ: ರಾಚಮ್ಮ. ಗದಗ ಹಾಗೂ ಹುಬ್ಬಳ್ಳಿಯಲ್ಲಿ ಶಾಲಾ ವಿದ್ಯಾಭ್ಯಾಸ ಪೂರೈಸಿ ಕೊಲ್ಲಾಪುರದಲ್ಲಿ ಕಾಲೇಜು ವ್ಯಾಸಂಗ ಮಾಡಿದರು. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಬಿ.ಎ. ಆನರ್ಸ್ ನಂತರ ಎಂ.ಎ. ಮಾಡಿದರು.

ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದರು. ಯು.ಜಿ.ಸಿ. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
    ಅವರ ಸಾಹಿತ್ಯ ಕ್ಷೇತ್ರ ವಿಸ್ತಾರವಾದದ್ದು. ಸಂಪಾದನಾ ಕೃತಿಗಳೆಂದರೆ: ಭಕ್ತಿಸುಧಾಸಾರ - ೧೯೪೫. ಗುರುರಾಜ ಚಾರಿತ್ರ - ೧೯೫೦. ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಿ ಅವರ ವಚನಗಳು. ಮಾಲಿಗಯ್ಯನ ಪುರಾಣಲಿಂಗ ಲೀಲಾ ವಿಲಾಸ ಚಾರಿತ್ರ್ಯ. ಪ್ರೌಢರಾಯನ ಕಾವ್ಯ, ಶೂನ್ಯ ಸಂಪಾದನೆ, ವಚನ ಸಾಹಿತ್ಯ ಸಂಗ್ರಹ, ಶೂನ್ಯ ಸಂಪಾದನೆಯ ಪರಾಮರ್ಶೆಯ ಸಂಗ್ರಹ ಇತ್ಯಾದಿ.
    ಸಂಶೋಧನಾ ಗ್ರಂಥಗಳೆಂದರೆ: ಶೂನ್ಯ ಸಂಪಾದನೆ-೧೦ ಸಂಪುಟಗಳು. ಮಹಾಕಾವ್ಯ: ಭವ್ಯ ಮಾನವ ಕೃತಿ. ಇಂಗ್ಲೀಷ್‍ನಲ್ಲಿ Sunyasampadane-9 Volumes ಪ್ರಕಟಗೊಂಡಿವೆ. ಅರವತ್ತಾರು ಜನ ವಚನಕಾರರ ೨, ೧೩೯ ವಚನಗಳನ್ನು-ಬೃಹದ್‍ವಚನ ಸಂಗ್ರಹದಲ್ಲಿ ನೀಡಿದ್ದಾರೆ.
    ೧೯೭೨ರಲ್ಲಿ ಶೂನ್ಯ ಸಂಪಾದನೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ. ೧೯೮೪ರಲ್ಲಿ ಭವ್ಯಮಾನವ- ಮಹಾಕಾವ್ಯಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ೧೯೯೦ರಲ್ಲಿ ಪಂಪ ಪ್ರಶಸ್ತಿ ಅವರಿಗೆ ಸಂದಿದೆ. ಪ್ರಥಮ ಬಸವ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.
    ಭೂಸನೂರಮಠರು ನಿಧನ ಹೊಂದಿದ್ದು ೧೯೯೧ರ ನವೆಂಬರ್ ೬ ರಂದು.

 

ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ 


Books by this Author:

No books found. You can request a book here.
Comments (0) >>
Write comment

busy