| Raashi |
|
| Written by MS Rajanikanth | |
|
ರಾಶಿ ಅವರ ಮೊದಲ ಸಂಕಲನ ’ತುಟಿ ಮೀರಿದವರು’ - ೧೯೩೭ರಲ್ಲಿ ಪ್ರಕಟವಾಯಿತು. ಕೊರವಂಜಿ ಪತ್ರಿಕೆಯಲ್ಲಿ ಅವರ ಹಾಸ್ಯ ಲೇಖನಗಳು ಪ್ರಕಟವಾಗುತ್ತಿದ್ದವು. ಮುಂದೆ ಅವು ಸಮಗ್ರ ಸಂಪುಟದ ರೂಪದಲ್ಲಿ ಹೊರಬಂದವು. ಕೊರವಂಜಿ ಕಂಡ ನಗು ಸಮಾಜ, ಕೊರವಂಜಿ ಕಂಡ ನಗು ದರ್ಬಾರಿಗಳು, ಕೊರವಂಜಿ ಕಂಡ ನಗು ವ್ಯಕ್ತಿಗಳು ಇತ್ಯಾದಿಗಳು ಹೊತ್ತಗೆಗಳಲ್ಲಿ ಅವು ಪ್ರಕಟವಾದವು. ಕೆಣಕೋಣು ಬಾರ, ಜಗ್ಗೋಜಿ, ಥಳುಕುಥಣಕ, ಸಾಕ್ಷಿ ಸಂಕಲಿಕೆ, ಇಂದಾನೊಂದು ಕಾಲದಲ್ಲಿ, ನಗೆಗೆರೆ ಚಿತ್ರಗಳು, ನಗು ಬುದ್ದೋಜಿ, ಪಶ್ಯಾಮಿ ಕಥೆಗಳು, ಯೋಚಿಸಿದರೆ, ಪಂಪಾವತಿಯ ಕೃಪೆ, ಕಾರ್ತೀಕ, ನಗು ಸಂಸಾರಿಗರು ಮಧುವನದಲ್ಲಿ ಮೇಳ-ಇತ್ಯಾದಿ ನಗೆ ಸಂಕಲನಗಳನ್ನು ಹೊರತಂದರು. "ಪಂಪಾವತಿಯ ಕೃಪೆ" - ಕಾದಂಬರಿ. ಅವರ ಇತರ ಕೃತಿಗಳು: ಮನೋನಂದನ, ಭಯ-ಸರಳ ವಿಶ್ಲೇಷಣೆ, ಅಲರ್ಜಿ, ಮನುಮಂಥನ, ಮನನ ಇತ್ಯಾದಿ.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ |

"ರಾಶಿ" - (೧೯೦೫-೧೯೮೪)














