Sahitya putagalu
Sahitya Kanmanigalu
KS Narasimhaswamy | KS Narasimhaswamy |
|
| Written by MS Rajanikanth | |
|
ಕನ್ನಡದ ಸುಕುಮಾರ ಕವಿ ಎಂದೇ ಖ್ಯಾತರಾದ ನರಸಿಂಹಸ್ವಾಮಿ ಅವರ ಕಾವ್ಯ ಕೃಷಿ ಬಹುದೊಡ್ಡದು. ಅವರ ಮೊದಲ ಕವನ ಸಂಕಲನ ’ಮೈಸೂರು ಮಲ್ಲಿಗೆ’ ಪ್ರಕಟವಾದದ್ದು ೧೯೪೨ರಲ್ಲಿ. ಆನಂತರ ಅದು ೧೮ಕ್ಕೂ ಹೆಚ್ಚು ಮರು ಮುದ್ರಣಗಳನ್ನು ಕಂಡಿದೆ. ಅವರ ಕವನಗಳು ಜನಮಾನಸವನ್ನು ಹೊಕ್ಕಿ ಜನಪದೀಯವಾಗಿವೆ. ಐರಾವತ, ಉಂಗುರ, ಇರುವಂತಿಗೆ, ದೀಪದ ಮಲ್ಲಿ, ಶಿಲಾಲತೆ, ತೆರೆದ ಬಾಗಿಲು, ನವಪಲ್ಲವ, ಮಲ್ಲಿಗೆಯ ಮಾಲೆ, ದುಂಡು ಮಲ್ಲಿಗೆ, ಸಂಜೆ ಹಾಡು, ದಮಯಂತಿ ಇತ್ಯಾದಿ ಕವನ ಸಂಕಲನಗಳು. ಕೆಲವಾರು ಕೃತಿಗಳನ್ನು ಅವರು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅವುಗಳೆಂದರೆ- ಮೀಡಿಯಾ, ಹಕಲ್ ಬರೀಫಿನ್ ಸಾಹಸಗಳು, ಸುಬ್ರಹ್ಮಣ್ಯ ಭಾರತಿ ಇತ್ಯಾದಿ.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ |