Home
GP Rajaratnam Print
Written by MS Rajanikanth   

gp_rajaratnam.jpg"ಜಿ.ಪಿ. ರಾಜರತ್ನಂ" - (೧೯೦೮-೧೯೭೯)

     ಜಿ.ಪಿ.ರಾಜರತ್ನಂ ಅವರು ಜನಿಸಿದ್ದು ೧೯೦೮ರ ಡಿಸೆಂಬರ್ ೫ರಂದು, ರಾಮನಗರದ ಕ್ಲೋಸ್‍ಪೇಟೆಯಲ್ಲಿ.  ತಂದೆ: ಗುಂಡ್ಲು ಪಂಡಿತ ಗೋಪಾಲಕೃಷ್ಣ ಅಯ್ಯಂಗಾರ್. ಮೈಸೂರು ಜಿಲ್ಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಂದೆ ಹೋದ ಊರುಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ೧೯೩೧ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಿಂದ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. ಅಲ್ಲಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿ ೧೯೩೮ರಲ್ಲಿ ದೊರಕಿದ ಕನ್ನಡ ಪಂಡಿತ ಹುದ್ದೆಯಿಂದ ವೃತ್ತಿ ಜೀವನ ಆರಂಭಿಸಿದರು. ಕಾಲೇಜು ಅಧ್ಯಾಪಕರಾಗಿ ಕೆಸಲಮಾಡಿದರು. ಜತೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು, ಎಂ.ಇ.ಎಸ್. ಕಾಲೇಜು ಹಾಗೂ ಸತ್ಯಸಾಯಿ ಕಾಲೇಜುಗಳಲ್ಲೂ ಪಾಠ ಮಾಡಿದರು.

ರಾಜರತ್ನಂ ಅವರ ಸಾಹಿತ್ಯ ಕ್ಷೇತ್ರ ಬಹು ವಿಶಾಲವಾದುದು, ಕಾವ್ಯ, ನಾಟಕ, ಕತೆ, ಕವಿಕಾವ್ಯ ಪರಿಚಯ, ಅನುವಾದ, ಗಾಂಧಿ ಸಾಹಿತ್ಯ, ಭಕ್ತಿ ಸಾಹಿತ್ಯ, ಹೀಗೆ ಅವರು ರಚಿಸಿದ ಕೃತಿಗಳು ನೂರಾರು. ಕಾವ್ಯದಲ್ಲಿ-ರತ್ನನ ಪದಗಳು, ನಾಗನ ಪದಗಳು ಅವರಿಗೆ ಕೀರ್ತಿಯನ್ನು ತಂದಿತ್ತ ಕವನ ಸಂಗ್ರಹಗಳು. ಮಕ್ಕಳ ಕಾವ್ಯದಲ್ಲೂ ಅವರ ಕೊಡುಗೆ ದೊಡ್ಡದು. ಕಂದನ ಕಾವ್ಯ ಮಾಲೆ, ಕಡಲೇಪುರಿ, ಕಲ್ಲುಸಕ್ಕರೆ, ಕೆನೆಹಾಲು, ತಾರೆ, ಚುಟುಕ, ತುತ್ತೂರಿ, ಗಾಂಧೀಜಿ, ರಸಕವಳ ಇತ್ಯಾದಿ.

    ಧಾರ್ಮಿಕ ಸಾಹಿತ್ಯದಲ್ಲಿ, ಶ್ರೀ ಸಾಯಿ ಚಿಂತನ, ಗುರು ಪೂರ್ಣಿಮಾ, ಶ್ರೀ ಸಾಯಿಮಾರ್ಗ, ಧರ್ಮಪದ ಪ್ರವೇಶಿಕಾ, ಧರ್ಮ-ಸಾಹಿತ್ಯ ಸೃಷ್ಟಿ, ಕೆಲವು ಮುಖ್ಯ ಕೃತಿಗಳಾದರೆ, ಸಂಪಾದಿತ ಕೃತಿಗಳಲ್ಲಿ ಶ್ರೀಕೃಷ್ಣಸೂಕ್ತಿ, ಸಂಸಕವಿ ಕೃತಿಗಳಿವೆ.

    ಒಂದು ಹಿಡಿ ಕೈಲಾಸಂ, ಕೆಲವು ಕೈಲಾಸಂ ಕಥೆಗಳು, ಕೈಲಾಸಂ ಅವರ ಏಕಲವ್ಯ, ಕೈಲಾಸ ಕಥನ, ಕೈಲಾಸಂ ನೆನಪು, ಕೈಲಾಸಂ ಜೋಕುಗಳು, ಕೈಲಾಸಂ ಖಂಡಗಳು, ಗುಂಡೂ ಪಂಡಿತನ ಕನಸು- ಕೈಲಾಸಂ ಬಗ್ಗೆ ಜಿ.ಪಿ. ರಾಜರತ್ನಂ ರಚಿಸಿದ ಕೃತಿಗಳು.

    ರಾಜರತ್ನಂ ೧೯೭೮ರಲ್ಲಿ ದೆಹಲಿಯಲ್ಲಿ ನಡೆದ ೫೦ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೭೦ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿತ್ತು. ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟೋರೇಟ್ ಪದವಿಯನ್ನು ನೀಡಿ ಅವರನ್ನು ಗೌರವಿಸಿದೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ದೇವರಾಜ ಬಹುದ್ದೂರ್ ಪ್ರಶಸ್ತಿಗಳೂ ಅವರಿಗೆ ದೊರೆತಿವೆ. ನಿಧನ ಹೊಂದಿದ್ದು ೧೯೭೯ರ ಮಾರ್ಚ್ ೧೩ರಂದು.

ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ


Books by this Author:

Ashokarajana Kathegalu
Aaru Kombina Aane Modalada Bodisathvana Kathegalu
Makkala Gandhi
Nalijanga Modalada Bharathada Upakathegalu
Ajjiya Kariya Modalada Bodisathvana Kathegalu

Comments (0) >>
Write comment

busy
 
Log In | Join Now
Request a book!