Log In | Join Now
D.V.Gundappa Print
Written by MS Rajanikanth   

dv_gundappa.jpg"ಡಿ.ವಿ. ಗುಂಡಪ್ಪ" - (೧೮೮೭-೧೯೭೫)
ಡಿ.ವಿ. ಗುಂಡಪ್ಪನವರು ಜನಿಸಿದ್ದು ೧೮೮೭ರ ಮಾರ್ಚ್ ೧೭ರಂದು; ಕೋಲಾರ ಜಿಲ್ಲೆಯ ಮುಳುಬಾಗಿಲಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಅವರು ಮುಳಬಾಗಿಲು ಕೋಲಾರದಲ್ಲಿ ಪಡೆದರು. ಪ್ರೌಢಶಾಲೆಯನ್ನು ಮೈಸೂರಿನಲ್ಲಿ ಓದಿದರು. ೧೯೦೮ರಲ್ಲಿ ನವರತ್ನಕೃಷ್ಣಸ್ವಾಮಿ ಅವರ ಜತೆಗೂಡಿ ’ಭಾರತಿ’ ಪತ್ರಿಕೆಗೆ ಸಹ ಸಂಪಾದಕರಾಗಿ ಆ ಪತ್ರಿಕೆಯನ್ನು ಆರಂಭಿಸಿದರು. ೧೯೧೩ರಲ್ಲಿ ಬೆಂಗಳೂರಿಗೆ ಬಂದು "ಕರ್ನಾಟಕ" ಅರ್ಧವಾರ ಪತ್ರಿಕೆಯನ್ನು ಆರಂಭಿಸಿದರು. ೧೯೨೧ರಲ್ಲಿ ಇಂಡಿಯನ್ ರೆವ್ಯು ಆಫ್ ರೆವ್ಯೂಸ್’ ಎಂಬ ಆಂಗ್ಲ ಮಾಸಪತ್ರಿಕೆಯನ್ನು, ೧೯೨೩ರಲ್ಲಿ "ಕರ್ನಾಟಕ ಜನಜೀವನ ಮತ್ತು ಅರ್ಥಸಾಧಕ" ಪತ್ರಿಕೆಯನ್ನು ಆರಂಭಿಸಿ ನಡೆಸಿದರು.

ಅವರ ಸಾಹಿತ್ಯಿಕ ಸೇವೆಯೂ ಅಗಾಧವಾದದ್ದು. ದಿವಾನ್ ರಂಗಾಚಾರ್ಲು, ಗೋಪಾಲಕೃಷ್ಣ ಗೋಖಲೆ, ವಿದ್ಯಾರಣ್ಯ ವೃತ್ತಾಂತ, ದಾದಾಭಾಯಿ ನವರೋಜಿ - ಜೀವನ ಚರಿತ್ರೆಗಳು. ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಾಹಿತ್ಯಶಕ್ತಿ, ಸಂಸ್ಕೃತಿ, ಕಾವ್ಯ ಸ್ವಾರಸ್ಯ  ಸಾಹಿತ್ಯಿಕ ಕೃತಿಗಳು. ತಿಲೋತ್ತಮೆ, ಕನ್ನಡ ಮ್ಯಾಕ್‍ಬೆತ್, ವಿದ್ಯಾರಣ್ಯ ವಿಜಯ, ಪರಶುರಾಮ ನಾಟಕಗಳು. ಮಂಕುತಿಮ್ಮನ ಕಗ್ಗ (೧೯೪೩). ಉಮರನ ಬಸಗೆ (೧೯೩೦) ಮಹಾತ್ಮಾಗಾಂಧಿ, ಅಂತಃಪುರ ಗೀತೆ, ಶ್ರೀ ರಾಮ ಪರೀಕ್ಷಣಂ, ಶೃಂಗಾರ ಮಂಗಳಂ - ಕೆಲವು ಕಾವ್ಯಗಳು. ಹನ್ನೊಂದು ಸಂಪುಟಗಳಲ್ಲಿ ಡಿ.ವಿ.ಜಿ. ಅವರ ಕೃತಿಗಳು ಲಭ್ಯವಿದೆ.
    ೧೯೨೬-೪೦ರ ವರೆಗೆ ಅವರು ಮೈಸೂರು ನ್ಯಾಯವಿಧಾಯಕ ಸಭೆ ಸದಸ್ಯರಾಗಿದ್ದರು. ೧೯೨೮ರಲ್ಲಿ ಕರ್ನಾಟಕ ವೃತ್ತ ಪತ್ರಿಕಾಕರ್ತರ ಪ್ರಥಮ ಪರಿಷತ್ತಿನ ಅಧ್ಯಕ್ಷರಾದರು. ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೩೫ರಲ್ಲಿ ಬೆಂಗಳೂರಿನಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಆರಂಭಿಸಿದರು. ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ’ಪದ್ಮಭೂಷಣ’ ಪ್ರಶಸ್ತಿಗಳು ಅವರಿಗೆ ಸಂದಿವೆ. ಡಿವಿಜಿ ಸನ್ಮಾನ ಸಮಿತಿ ಅರ್ಪಿಸಿದ ೧ ಲಕ್ಷ ರೂಪಾಯಿ ಗೌರವ ಧನವನ್ನು ಗೋಖಲೆ ಸಂಸ್ಥೆಗೆ ದಾನ ಮಾಡಿದರು.
    ಈ ಮಹಾನ್ ಪತ್ರಕರ್ತ, ಕವಿ, ಸಾಹಿತಿ, ತತ್ವಜ್ಞಾನಿ, ದಾನಿ ನಿಧನ ಹೊಂದಿದ್ದು ೧೯೭೫ರ ಅಕ್ಟೋಬರ್ ೭ರಂದು ಬೆಂಗಳೂರಿನಲ್ಲಿ.

 

ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ 


Books by this Author:

No books found. You can request a book here.
Comments (1) >>
...
written by Shree, October 31, 2007

ಕನ್ನಡ ಸಾಹಿತ್ಯ ಖಜಾನೆಯ ರತ್ನಗಳಲ್ಲೊಬ್ಬರು ಶ್ರೀ ಡಿ.ವಿ. ಗುಂಡಪ್ಪನವರು. ’ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆಯಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮೆರೆದವರು. ಮಹಾನ್ ಪತ್ರಕರ್ತ, ಕವಿ, ಸಾಹಿತಿ, ತತ್ವಜ್ಞಾನಿ ಹಾಗೂ ದಾನಿ. ವಿದ್ಯಾಭ್ಯಾಸ ಮುಗಿದ ನಂತರ ಇವರು ವೃತ್ತಿ ಆರಂಭಿಸಿದ್ದು ಪತ್ರಿಕೆಯ ಸಹ ಸಂಪಾದಕರಾಗಿ. ’ಮಂಕುತಿಮ್ಮನ ಕಗ್ಗ’ ಇವರ ಪ್ರಸಿದ್ಧ ಕೃತಿ. ’ಶ್ರೀಮದ್ ಭಗವದ್ಗೀತಾ ತಾತ್ಪರ್ಯ’- ಈ ಕೃತಿಗೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಇವರಿಗೆ ಲಭಿಸಿದೆ. ಇವರು ರಚಿಸಿರುವ ಕಾದಂಬರಿಗಳು, ಕಾವ್ಯ, ನಾಟಕಗಳು ಇಂದಿಗೂ ಓದುಗರಿಗೆ ’ನಿತ್ಯನೂತನ’. ಇವರ ಕೃತಿಗಳು ರಚಿತಗೊಂಡು ದಶಕಗಳೇ ಕಳೆದರೂ ಮರುಮುದ್ರಣದೊಂದಿಗೆ ಈ ಮಟ್ಟದ ಜನಮನ್ನಣೆಗಳಿಸಿರುವುದ ು ಸಾಮಾನ್ಯ ವಿಷಯವಲ್ಲ. ಕರ್ನಾಟಕದ ಕಿರೀಟಕ್ಕೆ ಇಂತಹ ಗರಿಗಳೂ ನೂರ್ಮಡಿಸಲಿ ಎಂದು ಹಾರೈಸುವ. ಜೈ ಕಸ್ತೂರಿ ಕನ್ನಡ!

Write comment

busy