Sahitya putagalu
Sahitya Kanmanigalu
Chandrashekhara Shastrigalu | Chandrashekhara Shastrigalu |
|
| Written by MS Rajanikanth | |
|
’ವ್ಯಾಕರಣ ತೀರ್ಥ’ರೆಂದೇ ಪ್ರಸಿದ್ಧರಾಗಿದ್ದ ಚಂದ್ರಶೇಖರ ಶಾಸ್ತ್ರಿಗಳು ಜನಿಸಿದ್ದು ೧೮೯೨ರ ಜನವರಿ ೩ ರಂದು; ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ. ತಂದೆ ಹಿರೇಮಠದ ಪಟ್ಟದಯ್ಯ. ತಾಯಿ ಬಸಮ್ಮ. ಸಂಸ್ಕೃತ ಪಾಠಶಾಲೆಗಳಲ್ಲಿ ಶಿಕ್ಷಣ ಮುಂದುವರೆಸಿ ಕಲ್ಕತ್ತಾದಿಂದ ’ವ್ಯಾಕರಣ ತೀರ್ಥ’ ಪದವಿ ಪಡೆದರು.
೧೯೨೪ರಲ್ಲಿ ಯಾದಗಿರಿಯಲ್ಲಿ ಸಂಸ್ಕೃತ ಕಾಲೇಜು ಆರಂಭವಾಗಲು ಕಾರಣಕರ್ತರಾದರು. ಅದರ ಪ್ರಾಚಾರ್ಯರೂ ಆಗಿ ಸೇವೆ ಸಲ್ಲಿಸಿದರು. ಆನಂತರ ೧೯೩೧ರಲ್ಲಿ ಹುಬ್ಬಳ್ಳಿಗೆ ಬಂದ ಶಾಸ್ತ್ರಿಗಳು ಮೂರು ಸಾವಿರ ಮಠದ ಗಂಗಾಧರ ಸಂಸ್ಕೃತ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. ನಂತರ ಪುನಃ ಯಾದಗಿರಿ ಕಾಲೇಜಿಗೆ ಹೋಗಿ ೧೯೪೮ರ ನಿವೃತ್ತಿಯಾಗುವವರೆಗೂ ಅಲ್ಲಿ ಸೇವೆ ಸಲ್ಲಿಸಿದರು.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ |