Log In | Join Now
Home arrow Sahitya Chintane arrow Authors arrow Pustakodyamada Kriyashilateyalli Granthalayagala Patra
Pustakodyamada Kriyashilateyalli Granthalayagala Patra Print
Written by Dr. Madhav N. Rattihalli   
ಜ್ಞಾನಕ್ಕೆ ಸರಿಸಾಟಿಯಿಲ್ಲ:
 ’ನಹಿ ಜ್ಞಾನೇನ ಸದೃಶಂ’ ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ ಎಂಬುದು ಪ್ರಾಚೀನ ಗೀತಾಮೃತದ ಒಂದು ಅಣಿಮುತ್ತು. ಪ್ರಪಂಚದಲ್ಲಿ ಬೆಳವಣಿಗೆಗೆ ವಿಶೇಷ ಪ್ರಾಶಸ್ತ್ಯವುಂಟು. ಯಾವ ನಾಗರಿಕತೆ ಹಾಗೂ ಸಂಸ್ಕೃತಿ ಸಮೃದ್ಧವಾಗಿರುತ್ತದೆಯೋ ಅದು ಸರ್ವತೋಮುಖ ಬೆಳವಣಿಗೆಯನ್ನು ಹೊಂದಿ ಇತಿಹಾಸ ನಿರ್ಮಾಣ ಮಾಡಿರುವುದಕ್ಕೆ ಹಲವಾರು ದೃಷ್ಟಾಂತಗಳು ಪ್ರಪಂಚದಾದ್ಯಂತ ಕಾಣ ದೊರೆಯುತ್ತವೆ.
 ಜ್ಞಾನ ಬಹುಮುಖಿಯಾದುದು. ಅದು ಹಲವಾರು ದಿಕ್ಕುಗಳಲ್ಲಿ ಚಲನಶೀಲತೆಯನ್ನು ಪಡೆದು ಕೊಂಡಿರುತ್ತದೆ. ಜ್ಞಾನದ ಬೊಕ್ಕಸ ತುಂಬಿದಂತೆಲ್ಲ ಇನ್ನೂ ಆಳಕ್ಕೆ  ಇಳಿಯುತ್ತಾ ಹೋಗುತ್ತದೆ. ಕುತೂಹಲ ಗರಿ ಕೆದರುವಂತೆ ಮಾಡುತ್ತದೆ.

ಜಿಜ್ಞಾಸೆ ತಣಿದಂತೆಲ್ಲಾ ಹೊಸ ಹೊಸ ಆಲೋಚನೆಗಳು ದಿಕ್ಕುಗಳು ಜನ್ಮ ತಳೆಯುತ್ತಾ ಹೋಗುತ್ತವೆ. ಸೃಷ್ಟಿಯಲ್ಲೆಲ್ಲಾ ಕಿರೀಟಪ್ರಾಯವೆಂದೆನಿಸಿಕೊಂಡಿರುವ ಮನುಷ್ಯ ಜೀವಿ ಜ್ಞಾನದ ನೆಲೆಗಟ್ಟಿನಿಂದಾಗಿ ಬೇರೆಲ್ಲಾ ಜೀವಿಗಳಿಗಿಂತ ಮಿಗಿಲಾಗಿ ಸಾರ್ವಭೌಮವೆನಿಸಿಕೊಂಡಿದ್ದಾನೆ. ಕಾಲಕಾಲಕ್ಕೆ ತನ್ನ ಅಪರಿಮಿತ ಜಿಜ್ಞಾಸು ಭಾವದಿಂದಾಗಿ ಅರಿವಿನ ಗಳಿಕೆ ಹಾಗೂ ಸಂಚಯನಕ್ಕಾಗಿ ಮನುಷ್ಯಕುಲ ನಿರಂತರವಾಗಿ ದುಡಿಯುತ್ತಾ ಬಂದಿದೆ. ಹಿರಿಮೆ ಗರಿಮೆ ಸಾಧಿಸಿ ಹೆಮ್ಮರವಾಗಿ ಬೆಳೆದು ನಿಂತಿದೆ.
ಬೌದ್ಧಿಕ ನೆಲೆಯಲ್ಲಿ ಮಾನವ:
 ಮನುಷ್ಯ ಸಹಜವಾಗಿ ನಿತ್ಯ ಕುತೂಹಲಿ. ತಾನು ಕಂಡುಂಡ ಅನುಭವಗಳನ್ನು ಇತರರೊಡನೆ ಹಂಚಿಕೊಂಡು ಸಂತಸಪಡುವ ಭಾವಜೀವಿ. ಆದಿ ಕಾಲದಿಂದ ಆತ ಎದುರುಗೊಂಡ ಬಗೆ ಬಗೆಉಅ ಪ್ರಕೃತಿಯ ವಿಸ್ಮಯಗಳನ್ನು ಬದುಕಿನ ರಿಟಿ - ನೀತಿಗಳನ್ನು ಸಾಮಾಜಿಕ ನೆಲೆಯಲ್ಲಿ ಗಟ್ಟಿಯಾಗಿಸಿಕೊಂಡು ದಾಖಲಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡ. ಹಾಗೆ ನೋಡಿದರೆ ವಿಕಾಸವಾದ ಹಿನ್ನೆಲೆಯಲ್ಲಿ ಅಣುಜೀವಿಗಳಿಂದ, ಪ್ರಾಗ್ಜೀವಿಗಳಿಂದ ಮೊದಲುಗೊಂಡು ವಾನರಕುಲ, ಮನುಷ್ಯಕುಲ ಬೆಳವಣಿಗೆಯಾದ ಅನಂತರ ಸಹಸ್ರಾರು ವರುಷಗಳ ಕಾಲ ಮಾನವ ಕಗ್ಗತ್ತಲು ಪ್ರಪಂಚದಲ್ಲಿಯೇ ಇದ್ದುಕೊಂಡು ಹಂತ ಹಂತವಾಗಿ ಬೌದ್ಧಿಕ ನೆಲೆಯಲ್ಲಿ ಮೇಲೇರಿದವನು. ಕೇವಲ ಸಂಜ್ಞೆಗಳಿಂದ ಮೊದಲಾದ ಅವನ ಅಭಿವ್ಯಕ್ತಿ ಶಕ್ತಿ ಭಾಷೆಯ ಹಾಗೂ ಬರವಣಿಗೆಯ ಸ್ವರೂಪವನ್ನು ಪಡೆದದ್ದು ಕೂಡ ಸಹಸ್ರಾರು ವರುಷಗಳ ಆನಂತರ ತನ್ನ ಜ್ಞಾನಾಪರಧಿಯನ್ನು ವಿಸ್ತರಿಸುತ್ತಾ ಹೋದಂತೆಲ್ಲಾ ಮಾನವನಿಗೆ ಅಂತಹ ತಿಳುವಳಿಕೆಯನ್ನು ಸಮಾಜಗತಗೊಳಿಸುವ ಹಾಗೂ ಮುಂಬರುವ ತಲೆಮಾರುಗಳಿಗೆ ಅದನ್ನು ಕಾಪಾಡುವ ಮತ್ತು ಸಂಪೋಷಿಸುವ ಜವಾಬ್ದಾರಿ ಮೂಡಿಬಂದದ್ದು ಸಹಜವೇ. ಆ ನಿಟ್ಟಿನಲ್ಲಿ ತಲೆ ತಲೆಮಾರುಗಳ ಮೂಲಕ ಮೌಖಿಕವಾಗಿ ಸ್ವಲ್ಪವೂ ಮುಕ್ಕಾಗದೇ ಹರಿದುಬಂದ ನಮ್ಮ ಪರಂಪರಾಗತ ವೇದಗಳನ್ನು ಮತ್ತು ವೈದಿಕ ಸಾಹಿತ್ಯ ಮೊದಲಾದವನ್ನು ಇಲ್ಲಿ ಉಲ್ಲೇಖಿಸಬಹುದು.
 ಮಾತು ಮೊದಲು ಬರವಣಿಗೆ ಆನಂತರ -  ಇದು ಭಾಷೆಯ ಬೆಳವಣಿಗೆಯಲ್ಲಿ ಪ್ರಚಲಿತವಾಗಿ ಕಂಡುಬರುವ ವಿದ್ಯಮಾನ. ಯಾವುದೇ ಭಾಷೆಯಲ್ಲಿ ಆಡುಮಾತಿಗೂ ಬರವಣಿಗೆಗೂ ಶತಮಾನಗಳ, ಕೆಲವು ವೇಳೆ ಸಹಸ್ರಮಾನಗಳ ಅಂತರ ಕಂಡುಬರುತ್ತದೆ. ಬರವಣಿಗೆಗೆ ಅಗತ್ಯವಾದ ಬೌದ್ಧಿಕ ಪರಿಕರಗಳು ಮತ್ತು ಸಾಧನ ಸಾಮಗ್ರಿಗಳು ಲಭ್ಯವಾದದ್ದು ಮಾನವಕುಲಕ್ಕೆ ಒಂದು ಮಹಾವರಪ್ರಸಾದವೇ ಆಯಿತು. ತಲೆತಲಾಂತರಗಳಿಂದ ಹರಿದುಬಂದ ಜ್ಞಾನರಾಶಿಯನ್ನು ಸೂಕ್ತವಾಗಿ ದಾಖಲಿಸಿ ಎಲ್ಲಾ ಕಾಲಕ್ಕೂ ಲಭ್ಯವಾಗಿ ಉಳಿಯುವಂತೆ ಮಾಡುವ ಸಾಧನೆ ಮಹತ್ವಪೂರ್ಣವೆನಿಸಿಕೊಂಡಿತು.

ಬದುಕು ಮತ್ತು ಸಂಸ್ಕೃತಿಯ ತಳಹದಿಯಾಗಿ ಗ್ರಂಥಗಳು:
ಗ್ರಂಥಗಳು ಇಡೀ ಮಾನವ ಕುಲಕ್ಕೆ ಮಾಹಿತಿಯನ್ನು ಶತಮಾನಗಳುದ್ದಕ್ಕೂ ನೀಡುತ್ತ ಬಂದಿವೆ. "ಗ್ರಂಥಗಳಿಲ್ಲದಿದ್ದಲ್ಲಿ ವಿಜ್ಞಾನ ದೇವತೆ ವಿಶ್ರಾಂತಿ ಪಡೆಯುತ್ತಾಳೆ,. ತತ್ವಜ್ಞಾನ ಕುಂಟುತ್ತದೆ. ಉಳಿದೆಲ್ಲವೂ ಅಂಧಕಾರದಲ್ಲಿ ಮುಳುಗಿಬಿಡುತ್ತದೆ". ಗ್ರಂಥಗಳು ನಮ್ಮ ನಾಗರೀಕತೆಯ ತಳಹದಿ. ನಮ್ಮ ಸಂಸ್ಕೃತಿಯ ಪ್ರತಿನಿಧಿ. ಗ್ರಂಥಗಲ ಸಾಮರ್ಥ್ಯ, ಘನತೆ ಆಗಾಧವಾಗಿದೆ. ಗ್ರಂಥಗಳು ವಿಚಾರ ಕ್ರಾಂತಿಯನೆ ಮಾಡಬಲ್ಲವು.

 ಅರಿವು ಮತ್ತು ಆಲೋಚನೆಗಳು ವ್ಯವಸ್ಥಿತ ರೂಪದಲ್ಲಿ, ಬರವಣಿಗೆಗೆ ಇಳಿದು ಗ್ರಂಥಗಳು ನಿರ್ಮಾಣವಾಗತೊಡಗಿದವು. ಮುದ್ರಣ ಕಲೆ ಆರಂಭವಾದ ಮೇಲೆ ಇಂದಿನವರೆಗೆ ಅನೇಕ ಲಕ್ಷ ಪುಸ್ತಕಗಳು ಪ್ರಕಟಣೆಗೊಂಡಿವೆ. ಇದ್ದಿಲು ಮಸಿ ತಾಳೆಗರಿ ಭೂರ್ಜಪತ್ರ ಮುಖೇನ ಬಗೆಬಗೆಯ ಸಾಧನಗಳಿಂದ ಸಂಪನ್ನಗೊಂಡು ಬೆಳೆದ ಗ್ರಂಥ ನಿರ್ಮಾಣ ಕಲೆ ಕ್ರಮೇಣ ವಿಸ್ತಾರವಾದ ಆಯಾಮಗಳನ್ನು ಪಡೆಯುತ್ತಾ ಅಭಿವೃದ್ಧಿ ಹೊಂದತೊಡಗಿತು. ಕಾಗಗದ ಆವಿಷ್ಕಾರ, ಮುದ್ರಣ ಕಲೆ, ಆವಿರ್ಭವಿಸಿದ ನಂತರ ಅಚ್ಚುಕಟ್ಟಾದ ಪುಸ್ತಕಗಳು ಹೊರಬಂದು ಪುಸ್ತಕೋದ್ಯಮಕ್ಕೆ ಹದಿ ತೆರೆದವು. ಭಾರಿ ಭಾರಿ ಆಕಾರ, ಪ್ರಕಾರಗಳ ಬಗೆಬಗೆಯ ಜಿಜ್ಞಾಸೆಗಳ ಆಶಯ ತಣೆಸುವ ಅಪರಿಮಿತ ಕಲೆ, ಸಾಹಿತ್ಯ, ಶಾಸ್ತ್ರವಿಜ್ಞಾನಗಳಿಗೆ ಸಂಬಂಧಪಟ್ಟ ಗ್ರಂಥಗಳ ಸಿದ್ಧತೆಯಿಂದ ನಡೆದುಬಂದ ಈ ಪ್ರಕ್ರಿಯೆಯೇ ಜ್ಞಾನ ಸಂಚಯನ ಮತ್ತು ಜ್ಞಾನ ಪ್ರಸಾರದ ಮೂಲಕ ಮಾನವನ ಬದುಕಿಗೆ ಮತ್ತು ಸಾಂಸ್ಕೃತಿಗೆ ಬೆಳವಣೆಗೆಗೆ ಅಸ್ತಿಭಾರವನ್ನು ಹಾಕಿ ಚೇತೋಹಾರಿಯಾದ ನಿತ್ಯ ನವೀನವಾದ ಜಿಜ್ಞಾಸೆಗೆ ಒತ್ತಾಸೆ ನೀಡುತ್ತಿರುವ ಪುಸ್ತಕೋದ್ಯಮವಾಗಿ ಬೆಳೆದು ಬಂದಿದೆ.

ಗ್ರಂಥಗಳ ದೇಗುಲ ಗ್ರಂಥಾಲಯ :
 ಮನುಷ್ಯನ ಬೌದ್ಧಿಕ ಜೀವನದಲ್ಲಿ ಪುಸ್ತಕಗಳ ಪಾತ್ರ ದೊಡ್ಡದು. ಶತಶತಮಾನಗಳಿಂದ ಮನುಷ್ಯ ತಾನು ಅನುಭವದಿಂದ, ಆಲೋಚನೆಯಿಂದ, ವಿವೇಚನೆಯಿಂದ , ಆರ್ಜನೆ ಮಾಡಿದ ತಿಳುವಲಿಕೆಯನ್ನು ಬರವಣೆಗೆಯ ಮೂಲಕ ಸಂಗ್ರಹಿಸಿಡುತ್ತಾ ಬಂದದ್ದು. ಮನುಕುಲದ ಮುನ್ನಡೆಯ ದೃಷ್ಟಿಯಿಂದ ಅಸಾಧಾರಣ ವಿಷಯ, ತಲೆಮಾರುಗಳಿಂದ ತಲೆಮಾರುಗಳಿಗೆ ಸಗಿ ಬಂದ ಜ್ಞಾನರಾಶಿ ಬಗೆಬಗೆಯ ಪುಸ್ತಕಗಳ ರೂಪದಲ್ಲಿ ಮೈವೆತ್ತಿನಿಂದು ನಮ್ಮ ಬದುಕಿನ ಹಾದಿಯಲ್ಲಿ ದಾರಿದೀಪಗಳಾಗಿವೆ. ಗ್ರಂಥಾಲಯಗಳು ಸರ್ವತೋಮುಖವಾಗಿ ಬೆಳೆಯುತ್ತಿರುವ ಜಗತ್ತಿನ ಜ್ಞಾನಕೋಶಗಳು ಜೀವನಾಡಿಗಳು ಒಳ್ಳೆಯ ವಾಚನಾಭಿರುಚಿ ವ್ಯಕ್ತಿತ್ವ ವಿಕಾಸಕ್ಕೆ ರಾಜಮಾರ್ಗ. ಶಿಕ್ಷಣವೇ - ವಿಕಾಸಕ್ಕೆ ಜೀವಾಳ. ನಿರಂತರ ಅಧ್ಯಯನ ನಡೆಸುವ ನಾಗರಿಕರ ನಿರ್ಮಾಣವೇ ಗ್ರಂಥಾಲಯಗಳ ಮುಖ್ಯ ಗುರಿ. ಗ್ರಂಥಗಳು ಯಾವುದೇ ನಾಡಿನ ಆಸ್ತಿ. ಅವುಗಳನ್ನು ಸಂರಕ್ಷಿಸಿಕೊಂಡು ನಿರಂತರವಾಗಿ ಬಳಕೆ ಮಾಡುವುದು ಜನಗಳ ಕರ್ತವ್ಯ ಗ್ರಂಥಗಳನ್ನು ಕಾಪಾಡುವ ಪೋಷಿಸುವ ಹಾಗೂ ಬೆಳೆಸುವ ಕೆಲಸವನ್ನು ಗ್ರಂಥಾಲಯಗಳು ಮಾಡುತ್ತವೆ.

ಬಗೆಬಗೆಯ ಗ್ರಂಥಾಲಯಗಳು:
 ಈ ಗ್ರಂಥಾಲಯಗಳನ್ನು ಸಾಮಾನ್ಯವಾಗಿ ಈ ಕೆಳಕಂಡಂತೆ ಅವುಗಳ ಕಾರ್ಯವ್ಯಾಪ್ತಿಯ ಮೇಲೆ ಸಾರ್ವಜನಿಕ ಗ್ರಂಥಾಲಯಗಳು, ಶೈಕ್ಷಣಿಕ ಗ್ರಂಥಾಲಯಗಳು ಹಾಗೂ ವಿಶಿಷ್ಟ ಗ್ರಂಥಾಲಯಗಳು ಎಂದು ವಿಂಗಡಿಸಲಾಗುತ್ತದೆ. ಪುಸ್ತಕೋದ್ಯಮದ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಕಾರಣವಾಗುವಂತಹ ಗ್ರಂಥಾಲಯಗಳು ಸಾರ್ವಜನಿಕ ಗ್ರಂಥಾಲಯಗಳು- ಜನಪ್ರಿಯ ಸಾಹಿತ್ಯದ ವಿವಿಧ ಮುಖಗಳನ್ನು ನೋಡಿದರೆ ಗ್ರಂಥೋದ್ಯಮದ ಜೀವಾಳ ಅದು ಎಂಬ ಭಾವನೆ ಸಹಜವಾಗಿಯೇ ಬರುತ್ತದೆ. ಇದು ಕೆಲವು ಮಟ್ಟಿಗೆ ನಿಜ. ಶುದ್ಧ ಸಾಹಿತ್ಯ ಪ್ರಕಾರಗಳಲ್ಲಿ, ಸಾಮಾನ್ಯ ಓದುಗರನ್ನು, ಸೂಜಿಗಲ್ಲಿನಂತೆ ತನ್ನ ತೆಕ್ಕೆಗೆ ಎಳೆದುಕೊಳ್ಳುವ ಸಾಮರ್ಥ್ಯವಿರುವುದು ಕೇವಲ ಜನಪ್ರಿಯ ಸಾಹಿತ್ಯಕ್ಕೆ ಮಾತ್ರ, ಒಂದು ವಿಧದಲ್ಲಿ ಮಾರುಕಟ್ಟೆಯನ್ನು ನಿಯಂತ್ರಿಸುವುದು ಇದೇ, ಓದುಗ ವರ್ಗವನ್ನು ಸೃಷ್ಠಿ ಮಾಡುವುದು ಇದೇ. ಇಂತಹ ಸಾಹಿತ್ಯ ಹೊಂದಿರುವ ಸಾರವಜನಿಕ ಗ್ರಂಥಾಲಯಗಳು ಮತ್ತು ಸರ್ಕ್ಯುಲೇಟಿಂಗ್ ಗ್ರಂಥಾಲಯಗಳು ಜನಸಂದಣೆಯಿಂದ ಕೂಡಿರುವುದಕ್ಕೆ ಕಾರಣವೂ ಇದೇ.
ಓದುಗ ಮತ್ತು ಲೇಖಕ:
 ಪುಸ್ತಕೋದ್ಯಮದ ಪ್ರಮುಖ ಬಳಕೆದಾರ ಓದುಗ. ಯಾವುದೇ ಒಂದು ಉತ್ಪನ್ನವನ್ನು ತಯಾರಿಸಬೇಕಾದರೆ ಅದರ ತುದಿ ಬಂದು ವಿನಲ್ಲಿರುವ್ ಬಳಕೆದಾರ ಯಾರು ಎಂಬ ವಿಚಾರವಾಗಿ ವಿವೇಚಿಸಲಾಗುತ್ತದೆ. ಕವಿ, ಲೇಖಕ ತಾನು ಬರೆಯಲು ಎಷ್ಟು ಸ್ವತಂತ್ರನೋ, ಓದುಗ ಕೂಡಾ ತಾನು ಓದಲು ಅಷ್ಟೇ ಸ್ವತಂತ್ರ. ಓದುಗರಲ್ಲಿ ಹಲವು ವಿಧ ಕೆಲವರು ಜ್ಞಾನಾರ್ಜನೆಗಾಗಿ ಓದಿದರೆ, ಕೆಲವರು ಮನೋರಂಜನೆಗಾಗಿ ಓದುತ್ತಾರೆ. ಎಸ್. ವಿ. ರಂಗಣ್ಣನವರ ಮಾತನ್ನು ಗಮನಿಸಿದರೆ ’ಮಂದಿ ಸಾವಿರ ಮೊತ್ತದಲ್ಲಿ ಓದುವಂತಾಕಾಂಕ್ಷೆಯುಳ್ಳವರು ಪ್ರಾಯಃ ಇಪ್ಪತ್ತು, ದಿಟವಾದ ಓದುಗರು ಹತ್ತು, ಗಂಭೀರ ಗ್ರಂಥಗಳ ವರಿಸಿ ಸುಖಿಸುವ ಒಂದು ಅಥವಾ ಎರಡು ಊಟ  ತಿಂಡಿಯ ಕುರಿತು ಮನುಷ್ಯ ಚಪಲ ಯಾವ ಬಗೆಯೋ ಪಾಠಕರ ವಾಚ್ಚೋತ್ಸಹ ಅದೇ ಬಗ್ಗೆ ನಾಲಿಗೆಯ ಅಭಿರುಚಿ ಮುಖ್ಯ ಹೊಟ್ಟೆಯ ಹಿತದ ಮಾತೇಕೆ ರಂಗರ ತಜ್ಞ." ಹೀಗಾಗಿ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಲೇಖಕ ಬರೆಯಬೇಕಾಗುತ್ತದೆ. ಓದುಗನ ಅಭಿರುಚಿಯನ್ನು ಅಂದಾಜು ಮಾಡಿ ಪುಸ್ತಕ ವ್ಯಾಪಾರಿ ಡಿಮ್ಯಾಂಡ್ ಇರುವಂತಹ  ಪುಸ್ತಕಗಳನ್ನು ಮಾರಾಟ ಮಾಡಬೇಕಾಗುತ್ತದೆ. ಉದ್ಯಮದ ಎಲ್ಲರ ದೃಷ್ಟಿಯು ಹೀಗೆ ಓದುಗನತ್ತ ಕೇಂದ್ರೀಕೃತವಾಗಿರುತ್ತದೆ. ಓದುಗ ಗ್ರಂಥೋದ್ಯಮದ ಸರಣೆಯಲ್ಲಿ ಬಳಕೆದಾರ ಅಥವಾ ಫಲಾನುಭವಿ ಓದುವ ವರ್ಗದಲ್ಲಿ ವಿದ್ವಾಂಸರು ಮತ್ತು ಶ್ರ್‍ಈಸಾಮಾನ್ಯರು, ಕಾರ್ಮಿಕರು, ಮಹಿಳೆಯರು, ಅಕ್ಷರ ಕಲಿತ ವಯಸ್ಕ ಓದುಗರು, ಸಂಶೋಧಕರು, ವಿದ್ಯಾರ್ಥಿಗಳು, ಮಕ್ಕಳು ಎಲ್ಲಾ ಸೇರುತ್ತಾರೆ.

ಹೀಗೆ ಓದುಗರನ್ನು ಸೃಷ್ಟಿ ಮಾಡಿ ತನ್ನಡೆಗೆ ಬರಮಾಡಿಕೊಳ್ಳುವ ಗ್ರಂಥಾಲಯ, ಓದುಗರ ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳನ್ನು ತಯಾರು ಮಾಡುವ ಗ್ರಂಥೋದ್ಯಮ ಒಂದಕ್ಕೊಂದು ಮಾರಕ ಮತ್ತು ಪೋಷಕ.

ಪುಸ್ತಕದಿಂದ ಪುಸ್ತಕೋದ್ಯಮ ಹಾಗೂ ಪುಸ್ತಕೋದ್ಯಮದಿಂದ ಓದುಗರ ಸಮೂಹ:
 ಸಂಸ್ಕೃತದಲ್ಲಿ ’ಗ್ರಥ್’ ಎಂದರೆ ಕಟ್ಟುವುದು ಅಥವಾ  ಗಂಟು ಹಾಕುವುದು ಎಂದು ಅರ್ಥ. ಅದರಿಂದ ಗ್ರಂಥ ಪದ ಬಳಕೆಯಲ್ಲಿ ಬಂದಿದೆ. ತಾಳೆಯ ಗರಿಗಳಂಥ ಸಾಮಗ್ರಿಯ ಮೇಲೆ ಬರೆದು ಅವುಗಳನ್ನು ಪೋಣಿಸಿ ಇಲ್ಲವೆ ಗಂಟು ಹಾಕಿ ಇಡುತ್ತಿದ್ದರಿಂದ ಅವುಗಳಿಗೆ ’ಗ್ರಂಥ’ ಎಂಬ ಹೆಸರಾಯಿತು. ಗ್ರಂಥ ಎಂಬ ಪದಕ್ಕೆ ಪುಸ್ತಕ, ಹೊತ್ತಿಗೆ ಎಂಬ ಪರ್ಯಾಯಾ ಪದಗಳು ಬಳಕೆಯಲ್ಲಿವೆ. ಸಾಮಾನ್ಯವಾದ ಬಳಕೆಯಲ್ಲಿ ದೊಡ್ಡ ಆಕಾರದ ಪ್ರಕಟಣೆಗಳನ್ನು ಗ್ರಂಥ ಎಂದೂ, ಸಣ್ಣ ಆಕಾರದ ಪ್ರಕಟಣೆಗಳನ್ನು ಪುಸ್ತಕ ಎಂದೂ ಕರೆಯುವುದು ರೂಢಿಯಲ್ಲಿದೆ.

 ಇಂಗ್ಲೀಷಿನ "publishing Industry"   ಎಂಬುದಕ್ಕೆ ಪ್ರಕಾಶನೋದ್ಯಮ ಎಂದೂ. "Book Industry"   ಅಥವಾ "Book Trade" ಎಂಬುದಕ್ಕೆ ಗ್ರಂಥೋಧ್ಯಮ ಇಲ್ಲವೆ ಪುಸ್ತಕೋದ್ಯಮ ಎಂದು ಕರೆಯಬಹುದು. ಪುಸ್ತಕೋದ್ಯಮದ ಪ್ರಮುಖ ಬಳಕೆದಾರ ಓದುಗ ಕವಿ ಅಥವಾ ಲೇಖಕ ತಾನು  ಬರೆಯಲು ಎಷ್ಟು ಸ್ವತಂತ್ರನೋ ಓದುಗ ಕೂಡಾ ತಾನು ಓದಲು ಅಷ್ಟೇ ಸ್ವತಂತ್ರ, ಓದುಗನ ಅಪೇಕ್ಷೆಗಳು ಭಿನ್ನ ಸ್ವರೂಪದವು. ಓದುಗರನ್ನು  ದೃಷ್ಟಿಯಲ್ಲಿಟ್ಟುಕೊಂಡು ಲೇಖಕ ಬರೆಯಬೇಕಾಗುತ್ತದೆ. ಪ್ರಕಾಶಕ ಹಣ ಹೂಡಿ ಪುಸ್ತಕ ಹೊರತರಬೇಕಾಗುತ್ತದೆ.

ಪುಸ್ತಕವು ಲೇಖಕನ ವೈಯಕ್ತಿಕ ಸ್ಥಿತಿಯಿಂದ ಹರಿದು ಸಾಮಾಜಿಕ  ಆಯಾಮವನ್ನು ಪಡೆದುಕೊಳ್ಳುವುದು:
 ಪುಸ್ತಕವು ಲೇಖಕನ ವೈಯಕ್ತಿಕ ಸೆಲೆಯಿಂದ ಹರಿದು ಸಾಮಾಜಿಕ ಆಯಾಮವನ್ನು ಪಡೆದು ಕೊಳ್ಳುವುದು. ಸಾಹಿತ್ಯ ಸೃಷ್ಟಿಗೆ ಪ್ರತಿಭೆ ಅದರಲ್ಲೂ ಕಾರಯತ್ರೀ ವ್ಯಕ್ತಿತ್ವದಲ್ಲಿ ಕಿಡಿ ಸೂಸಿ ಭಾವಾಭಿವ್ಯಕ್ತಿಗೆ ಕಾರಕ ವಾಗುತ್ತದೆ.

ಒಬ್ಬ ಲೇಖಕ ತನ್ನ ಸುತ್ತಲ ಜಗತ್ತನ್ನು ಪ್ರಕೃತಿಯನ್ನು ಹುಟ್ಟಿನಿಂದ ನೋಡುತ್ತಿರುತ್ತಾನೆ. ನಿಸರ್ಗದ ವಿವಿಧ ವ್ಯವಹಾರಗಳಲ್ಲಿ ಭಾಗವಹಿಸುತ್ತಲೆ, ಅವನು ಅದರ ಸುಖದುಃಖಗಳ ಏರಿಳಿತಗಳ ಅನುಭವವನ್ನು ಪಡೆಯಿತ್ತಿರುತ್ತಾನೆ. ಒಂದು ಕೃತಿ ನಿರ್ಮಾಣ ಮಾಡಬೇಕೆಂಬ ಸಂಕಲ್ಪ ಅವನ ಮನಸ್ಸಿನಲ್ಲಿ ಮಡುಗಟ್ಟಿದಾಗ  ಅರಿವಿದ್ದೋ ಅರಿವಿಲ್ಲದೆಯೋ ಒಂದು ಬಗೆಯ ರಸಾವೇಶ ಸ್ಥಿತಿಗೆ ಅವನು ಬಂದು ಮುಟ್ಟುತ್ತಾನೆ. ಇಂತಹ ಗುಂಗಿನಲ್ಲಿ ಅವನು ತನ್ನ ವಸುವಿನ ವಿಸ್ತಾರ ಹಾಗೂ ಅಂತರಾಳದಲ್ಲಿ ತಳ್ಳೀನತೆಯ ಅನುಭವವನ್ನು ಗಳಿಸಿಕೊಳ್ಳುತ್ತಾನೆ. ತನ್ನ ಪ್ರತಿಭೆ ಕೊಡಮಾಡುವ ಅರ್ಥಗಳಲ್ಲಿ ಕೃತಿಕಾರ ಅರ್ಥಗಳನ್ನು ಬೆಳೆಸುತ್ತ ಹೋಗಿ ಅದರ ಒಟ್ಟಂದದ ಹರುವು ನಿಲವುಗಳನ್ನು ಕಂಡುಕೊಳ್ಳುತ್ತಾನೆ. ಅವನ ಭಾವಸಮುದ್ರದಲ್ಲಿ ಮಥನವಾಗಿ ಘನೀಕೃತವಾಗಿ ಹೊರಬೀಳುವ ಉಪಲಬ್ದತೆಯೇ ಕವನ, ಕಾದಂಬರಿ, ನಾಟಕ ಇತ್ಯಾದಿ ರೂಪದಲ್ಲಿ ಮೈದೆಳೆಯುತ್ತವೆ. ಹೀಗೆ ಪುಸ್ತಕದ ಉಗಮ ಕಂಡುಬಂದು ಪುಸ್ತಕೋದ್ಯಮಕ್ಕೆ ನಾಂದಿ ಹಾಡುತ್ತದೆ.

 ಎಲ್ಲರಿಗೂ ಎಲ್ಲ್ ಪುಸ್ತಕಗಳನ್ನು ಕೊಳ್ಳಲು ಮತ್ತು ಸಂಗ್ರಹಿಸಿಅಲು ಅಸಾಧ್ಯವಾದುದರಿಂದ ಗ್ರಂಥಾಲಯಗಳು ಹುಟ್ಟಿಕೊಂಡವು. ಸಮಾಜದಲ್ಲಿ ಮಾನವನ ಬದುಕು ತುಂಬಾ ಸಂಕೀರ್ಣವಾದದು. ನಾಗರೀಕತೆ ಬೆಳೆಯುತ್ತ ಹೋದಂತೆಲ್ಲಾ ದೈನಂದಿನ ಬದುಕಿನ ಬೇಕು ಬೇಡಗಳು ತೀವ್ರವಾಗಿ ಬದಲಾಗುತ್ತಾ ಸಾಗಿವೆ. ಮಾನವನ ಅವಶ್ಯಒಅತೆಗಳೌ ಹೆಚ್ಚುತ್ತಾ ಹೋಗುತ್ತಿವೆ. ಹೀಗಾಗಿ ಗ್ರಂಥಾಲಯಗಳು ಜನ ಸಾಮಾನ್ಯರು ಶಿಕ್ಷಣ, ಮಾಹಿತಿ ಪ್ರಸಾರ, ಸಾಂಸ್ಕೃತಿಕ ಜ್ಞಾನ ಹಾಗೂ ಮನರಂಜನೆಯನ್ನು ಒದಗಿಸುವ ತಾಣಗಳಾಗಿ ಹೊರಹೊಮ್ಮಿವೆ.

 ಗ್ರಂಥಾಲಯಗಳು ಆಯಾದೇಶದ ಸಂಸ್ಕೃತಿಯ ಪ್ರತೀಕವಾಗಿದೆ ಗ್ರಂಥಾಲಯಗಳ ಪ್ರಾಧಾನ್ಯ ಮತ್ತು ಪ್ರಯೋಜನ ಎಲ್ಲ ಕಾಲಕ್ಕೂ ಅನಿವಾರ್ಯವಾಗುತ್ತದೆ.

 ಗ್ರಂಥಪಾಲಕರು ಓದುಗರ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವುದು ಇಂದಿನ ಅವಶ್ಯಕತೆ ಯಾಗಿದೆ. ಬರುವ ಎಲ್ಲ ಓದುಗರಿಗೆ ಬೇಕಾಗುವ ಸಾಹಿತ್ಯ ಮಾಹಿತಿ ಒದಗಿಸಿ ಅವರ ಜ್ಞಾನ ಬೆಳವಣಿಗೆ ಅನುವು ಮಾಡಿಕೊಡುವುದರ ಮೂಲಕ ಓದುಗರ ಜ್ಞಾನ ಸಂಪಾದನೆಯ ಕಾರ್ಯಕ್ಕೆ ನೆರವು ನೀಡಿ ಓದುಗರ ಮಾರ್ಗದರ್ಶಿಯಾಗಬೇಕಿದೆ.

ಸಾಮಾನ್ಯವಾಗಿ ಓದುಗ ಒಳ್ಳೆಯ ಬರವಣಿಗೆಯನ್ನು ಅಪೇಕ್ಷಿಸುತ್ತಾನೆ. ತನಗೆ ಬೇಕಾದ ಮಾಹಿತಿಯನ್ನು ಪುಸ್ತಕಗಳಲ್ಲಿ ಆಧಾರ ಸಹಿತವಾಗಿ ಕಂಡುಕೊಳ್ಳುವುದು ಅವನ ಬಯಕೆ. ಗ್ರಂಥಾಲಯ ಶಾಸ್ತ್ರ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಮಾತಿನಲ್ಲಿ ಹೇಳುವುದಾದರೆ "ಪ್ರತಿಯೊಬ್ಬ ಓದುಗನಿಗೂ ಒಂದು ಪುಸ್ತಕವಿರುತ್ತದೆ ಹಾಗೂ ಪ್ರತಿಯೊಂದು ಪುಸ್ತಕಕ್ಕೂ ಒಬ್ಬ ಓದುಗನಿರುತ್ತಾನೆ."

ಕ್ರಿಯಾಶೀಲ ಸಮಾಜ ಮತ್ತು ಜ್ಞಾನ ಸ್ಫೋಟದಲ್ಲಿ ಪುಸ್ತಕಗಳ ಮತ್ತು ಗ್ರಂಥಾಲಯಗಳ ಪಾತ್ರ:
 ಒಂದು ರಾಷ್ಟ್ರದ ಮಾನವಸಂಪನ್ಮೂಲದ ಹಾದಿಯಲ್ಲಿ ಪುಸ್ತಕಗಳು ಒದಗಿಸುವ ನೆರವು ತನ್ಮೂಲಕ ಗ್ರಂಥಾಲಯಗಳು ಒದಗಿಸುವ ಸೇವೆ ಮಹತ್ತರವಾದುದು. ನಾಡನ್ನು ಸುಭದ್ರವಾದ ನೆಲಗಟ್ಟಿನ ಮೇಲೆ ನಿಲ್ಲಿಸುವಲ್ಲಿ ಶಿಕ್ಷಿತರಾದ ಜನರ ಹೊಣೆಗಾರಿಕೆ ಗಂಭೀರವಾದುದು. ಅವರು ನಿಜವಾದ ಅರ್ಥದಲ್ಲಿ ನಾಡನ್ನು ಕಟ್ಟಬಲ್ಲರು. ಜ್ಞಾನ ದೀವಿಗೆ ಜನಮನದಲ್ಲಿ ಮನೆ ಮಾಡಿರುವ ಅಂಧಕಾರವನ್ನು ದೂರ ಮಾಡಿ ಸಾಮಾಜಿಕ ಸಮುದಾಯವನ್ನು ಸಮರ್ಥವಾಗಿ ಮುನ್ನಡೆಸಬಲ್ಲುದು. ಜನ ಶಿಕ್ಷಣ ಹಾಗೂ ಜ್ಞಾನ ಪ್ರಸಾರಗಳ ಹಾದಿಯಲ್ಲಿ ಪುಸ್ತಕಗಳು ಹಾಗೂ ಗ್ರಂಥಾಲಯಗಳ ಪಾತ್ರ ಗಣನೀಯವಾದುದು.

 ಗ್ರಂಥಗಳು ವ/ಸ ಎಲೆಕ್ಟ್ರಾನಿಕ್ ಸಾಧನಗಳು:
 ಪುಸ್ತಕಗಳು ಈಗಿನ ರೂಪದಲ್ಲಿ ನಮಗೆ ತುಂಬಾ ಪ್ರಿಯವಾಗುತ್ತವೆ. ನಿಧಾನವಾಗಿ, ಬೇಕಾದಾಗ ಓದಿ ಮತ್ತೆ ಮತ್ತೆ ಖುಷಿಯಾದಾಗ ತಿರುವಿ ಹಾಕಿ ಸಂತೋಷ ಪಡುವ ವಸ್ತುಗಳು. ಪುಸ್ತಕಗಳು ನಮ್ಮ ಆಪ್ತ ಸಂಗಾತಿ, ಕಾಂತಾ ಸಮ್ಮತವನ್ನು ನೀಡಬಲ್ಲ ಆಕರಗಳು. ಅವುಗಳನ್ನು ಬೇರಾವ ಮಾಧ್ಯಮಗಳು- ರೇಡಿಯೋ, ಟಿಲಿವಿಷನ್, ವಿಡಿಯೋ, ಕಂಪ್ಯೂಟರ್ ಇತ್ಯಾದಿ -  ಎಷ್ಟೇ ಸುಲಭಗಮ್ಯವಾದರೂ, ಕ್ಷಿಪ್ರಗಾಮಿಗಳು ಪುಸ್ತಕಕ್ಕೆ ಅದರದೇ ಬೆಲೆ ಉಂಟು- ಪ್ರಕಾಶನೋದ್ಯಮದಲ್ಲಿ ಕೆಲವು ವೇಳೆ ಸ್ವರೂಪ, ರೀತಿ - ನೀತಿಗಳು, ಧೋರಣೆಗಳು ಇವುಗಳಲ್ಲಿ ಮಾರ್ಪಾಟು ಕಂಡು ಬಂದರೂ ಮೂಲಭೂತವಾದ ಹೂರಣದಲ್ಲಿ ವ್ಯತ್ಯಾಸ ಕಂಡುಬರಲಾರದು. ಹಾಗಾಗಿ ಕನ್ನಡ ಪ್ರಕಾಶನೋದ್ಯಮವನ್ನು ವ್ಯವಸ್ಥಿತವಾಗಿ, ಧೃಢವಾಗ, ಅಚ್ಚುಕಟ್ಟಾಗಿ, ಮೌಲ್ಯಾಧಾರಿತವಾಗಿ, ಸಮಾಜಕ್ಕೆ ಉಪಯೋಗಿಯಾಗಿ ಬೆಳೆಸುವ ಹೊಣೆ ಲೇಖಕರ, ಪ್ರಕಾಶಕರ, ಅಚ್ಚುಕೂಟದವರ, ಮಾರಾಟಾಗಾರರ, ಗ್ರಂಥಪಾಲಕರ ಹಾಗೂ ಓದುಗರ ಮೇಲೆ ಗುರುತರವಾಗಿದೆ. ಕನ್ನಡ ಪ್ರಕಾಶನೋದ್ಯಮದ ಭವಿಷ್ಯ ಇವರೆಲ್ಲರ ಸೂಕ್ತವಾದ, ಸಮಂಜಸವಾದ, ದೃಢವಾದ ಶ್ರದ್ಧೆ ಕಾರ್ಯತತ್ಪರತೆ ಮತ್ತು ಉನ್ನತ ಧ್ಯೇಯೋದ್ದೇಶಗಳನ್ನು ಅವಲಂಭಿಸಿದೆ.

ಉಪಸಂಹಾರ:
 ಯಾವುದೇ ಒಂದು ಸಮಾಜದ ಮುನ್ನಡೆಯ್ಲ್ಲಿ ಜ್ಞಾನದ ಹಿರಿಮೆ ಗರಿಮೆಗಳು ಅತ್ಯಂತ ಹೆಚ್ಚಿನ ಪಾತ್ರ ವಹಿಸುತ್ತವೆ ಹಾಗೂ ಪ್ರಾಶಸ್ತ್ಯ ಪಡೆಯುತ್ತವೆ. ಪ್ರಜ್ಞಾವಂತವಾದ ಹಾಗೂ ಕ್ರಿಯಾಶೀಲವಾದ ಸಮಾಜದ ನಿರ್ಮಾಣದಲ್ಲಿ ಆ ಮೂಲಕ ಗ್ರಂಥಾಲಯಗಳ ಪಾತ್ರ ಮಹತ್ತರವಾದುದು. ಒಂದು ನಾಡಿನ ಉಳಿದೆಲ್ಲ ಸಾಧನ  ಸಾಮಗ್ರಿಗಳಿಗಿಂತ ಕುತೂಹಲವನ್ನು ಕೆರಳಿಸುವ ಹಾಗೂ ಅರಿವಿನ ತೃಷೆಯನ್ನು ತಣೀಸುವ ಜ್ಞಾನಪ್ರದಾಯಕ ಸಾಮಗ್ರಿಗಳನ್ನು ಮಂಚೂಣಿಯಲ್ಲಿರುಸುತ್ತೇವೆ. ತಲೆ ತಲಾಂತ್ರಗಳಿಂದ ಕೈ ಒಕ್ಕ ನಿಧಿಯಾಗಿ ಲಭಿಸಿರುವ ಜ್ಞಾನರಾಶಿಯನ್ನು ಸಂರಕ್ಷಿಸಿ, ಬಳಸಿ, ಬೆಳೆಸುವ ಹೊಣೆಗಾರಿಕೆಯನ್ನು ಬಹುಮಟ್ಟಿಗೆ ಗ್ರಂಥಾಲಯಗಳು ನಿರ್ವಹಿಸುತ್ತವೆ. ನಿರಂತರ ಬೆಳವಣಿಗೆ ಹೊಂದುವ ಒಂದು ಪ್ರಬುದ್ಧ ಶಕ್ತಿಯಾಗಿ ನಮ್ಮ ಗ್ರಂಥಾಲಯಗಳು ಸಮಾಜದ ಕ್ರಿಯಾಶೀಲತೆಗೆ ಪ್ರೇರಕ ಶಕ್ತಿಯಾಗಿ ಕಾರಕ ಶಕ್ತಿಯಾಗಿ ನೆರವಾಗಬಲ್ಲವು.

 

ಪ್ರಕಟಿಸಿದ ಪುಸ್ತಕಗಳೂ ಮಾತ್ರ ಅಲ್ಲಿ ಲಭ್ಯವಿದ್ದು, ಅವನ್ನು ಓದುಗ ಗಮನಿಸಿದಾಗ ಅವನಿಗೆ ಬೇಕಾದ ಸಾಹಿತಿಯ ಅಥವಾ ಸಾಹಿತ್ಯ ಸಿಗದಿದ್ದ ಪಕ್ಷದಲ್ಲಿ ಅವನು ಗ್ರಂಥಾಲಯದ ಬಗೆಜಗ ವಿಶ್ವಾಸವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಉಂಟಾಗಬಹುದು. ಓದುಗ ಒಂದು ಬಾರಿ ಎಲ್ಲಿಯಾದರೂ ಪುಸ್ತಕವನ್ನು ನೋಡಿದ್ದರೆ ಅದನ್ನು ಇನ್ನೆಲ್ಲಿಯಾದರೂ ಖರೀದಿಸಬಹುದು. ಒಟ್ಟಿನಲ್ಲಿ ಪುಸ್ತಕ ಓದುವ ಗೀಳನ್ನು ಹುರಿದುಂಬಿಸುವುದು ಪ್ರಕಾಶಕರ ಪಾತ್ರವಾಗಬೇಕು. ಅದನ್ನು ಬಿಟ್ಟೂ ಕೇವಲ ಗ್ರಂಥಾಲಯಗಳನ್ನು ಅವಲಂಬಿಸಿರುವ ಪ್ರಕಾಶಕರು ಪ್ರಕಾಶಕರೇ ಅಲ್ಲ. ತಮಿಳು, ಮಲೆಯಾಳಂ ಹಾಗೂ ಇನ್ನಿತರ ಭಾಷೆಗಳಲ್ಲಿ ಪ್ರಕಟವಾದ ಪುಸ್ತಕಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಓದುಗರು ಖರೀದಿಸುತ್ತಾರೆ. ಹಾಗೆಯೇ ಕನ್ನಡದಲ್ಲಿಯೂ ಆಗಬೇಕು. ಪ್ರಕಾಶಕರು ಓದುಗರಿಗೆ ಬೇಕಾದ ಪುಸ್ತಕಗಳನ್ನು ಈಗಿನ ಮಾರುಕಟ್ಟೆಯನ್ನು ಅರಿತು ಸಾಹಿತಿಗಳ ಮೂಲಕ ಅವುಗಳನ್ನು ಸಿದ್ದಪಡಿಸಿ ಪ್ರಕಟಿಸಬೇಕಾಗುತ್ತದೆ. ಇದರಿಂದ ಓದುಗರ ಸಂಖ್ಯೆ ಹೆಚ್ಚುವುದರಲ್ಲಿ ಸಂಶಯವಿಲ್ಲ.

ಸರ್ಕಾರದಿಂದ ಸವಲತ್ತು:
 ಪ್ರಕಟಿಸಿದ ಪ್ರತಿ ಪುಸ್ತಕವೂ ಓದುಗರ ಕೈ ಸೇರಬೇಕಾದರೆ ಇಲ್ಲಿ ಸರ್ಕಾರದ ಪಾತ್ರ ಅತಿಮುಖ್ಯ. ಕಾರಣ ಪ್ರಕಾಶಕರಿಗೆ ಕಡಿಮೆ ಬೆಲೆಯಲ್ಲಿ ಮುದ್ರಣ ಕಾಗದವನ್ನು ನೀಡುವುದು ಮತ್ತು ಪ್ರಕಟಿಸಿದಂತಹ ಪುಸ್ತಕಗಳಲ್ಲಿ ಇಂತಿಷ್ಟು ಪ್ರಮಾಣದ ಪ್ರತಿಗಳನ್ನು ನೇರವಾಗಿ ಪ್ರಕಾಶಕರಿಂದ ಖರೀದಿಸಿ ಗ್ರಂಥಾಲಯಗಳಿಗೆ ನೀಡುವುದು. ಇದರಿಂದ ಆಯಾ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳು ಸುಲಭವಾಗಿ ಓದುಗರಿಗೆ ದೊರೆಯುವಂತಾಗುತ್ತದೆ. ಇದರಿಂದ ಪ್ರಕಾಶಕರಿಗೆ ಅಷ್ಟು ಪ್ರಮಾಣದ ಹೊರೆ ಕಡಿಮೆಯಾಗುತ್ತದೆ. ಹಾಗಾಗಿ ಇನ್ನಷ್ಟು ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲು ಸಹಾಯಕವಾಗುತ್ತದೆ. ಇದರ ಜೊತೆಗೆ ಸರ್ಕಾರದ ಅಂಗಸಂಸ್ಥೆಯಾದ ಪುಸ್ತಕ ಪ್ರಾಧಿಕಾರದ ವತಿಯಿಂದ ಎಲ್ಲಾ ತಾಲೂಕು ಮಟ್ಟಗಳಲ್ಲಿ ಪುಸ್ತಕದಂಗಡಿ ತೆರೆಯಲು ಸಹಾಯಕವಾಗುವುದು. ಹೀಗೆ ಪ್ರಕಾಶಕರು ಪ್ರಕಟಿಸಿದಂತಹ ಪುಸ್ತಕಗಳಿಗೆ ಯಾವುದೇ ರೀತಿಯಿಂದಲೂ ಹೊರೆಯಾಗದಂತೆ ನೋಡಿಕೊಂಡಲ್ಲಿ ಇನ್ನಷ್ಟು ಉತ್ತಮ ಪುಸ್ತಕಗಳೂ ಓದುಗರಿಗೆ ದೊರೆಯುವುದರಲ್ಲಿ ಸಂಶಯವಿಲ್ಲ. ಪ್ರಕಟಿಸಿದ ಪುಸ್ತಕಗಳೂ ಮಾತ್ರ ಅಲ್ಲಿ ಲಭ್ಯವಿದ್ದು, ಅವನ್ನು ಓದುಗ ಗಮನಿಸಿದಾಗ ಅವನಿಗೆ ಬೇಕಾದ ಸಾಹಿತಿಯ ಅಥವಾ ಸಾಹಿತ್ಯ ಸಿಗದಿದ್ದ ಪಕ್ಷದಲ್ಲಿ ಅವನು ಗ್ರಂಥಾಲಯದ ಬಗೆಜಗ ವಿಶ್ವಾಸವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಉಂಟಾಗಬಹುದು. ಓದುಗ ಒಂದು ಬಾರಿ ಎಲ್ಲಿಯಾದರೂ ಪುಸ್ತಕವನ್ನು ನೋಡಿದ್ದರೆ ಅದನ್ನು ಇನ್ನೆಲ್ಲಿಯಾದರೂ ಖರೀದಿಸಬಹುದು. ಒಟ್ಟಿನಲ್ಲಿ ಪುಸ್ತಕ ಓದುವ ಗೀಳನ್ನು ಹುರಿದುಂಬಿಸುವುದು ಪ್ರಕಾಶಕರ ಪಾತ್ರವಾಗಬೇಕು. ಅದನ್ನು ಬಿಟ್ಟೂ ಕೇವಲ ಗ್ರಂಥಾಲಯಗಳನ್ನು ಅವಲಂಬಿಸಿರುವ ಪ್ರಕಾಶಕರು ಪ್ರಕಾಶಕರೇ ಅಲ್ಲ. ತಮಿಳು, ಮಲೆಯಾಳಂ ಹಾಗೂ ಇನ್ನಿತರ ಭಾಷೆಗಳಲ್ಲಿ ಪ್ರಕಟವಾದ ಪುಸ್ತಕಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಓದುಗರು ಖರೀದಿಸುತ್ತಾರೆ. ಹಾಗೆಯೇ ಕನ್ನಡದಲ್ಲಿಯೂ ಆಗಬೇಕು. ಪ್ರಕಾಶಕರು ಓದುಗರಿಗೆ ಬೇಕಾದ ಪುಸ್ತಕಗಳನ್ನು ಈಗಿನ ಮಾರುಕಟ್ಟೆಯನ್ನು ಅರಿತು ಸಾಹಿತಿಗಳ ಮೂಲಕ ಅವುಗಳನ್ನು ಸಿದ್ದಪಡಿಸಿ ಪ್ರಕಟಿಸಬೇಕಾಗುತ್ತದೆ. ಇದರಿಂದ ಓದುಗರ ಸಂಖ್ಯೆ ಹೆಚ್ಚುವುದರಲ್ಲಿ ಸಂಶಯವಿಲ್ಲ.

ಸರ್ಕಾರದಿಂದ ಸವಲತ್ತು:
 ಪ್ರಕಟಿಸಿದ ಪ್ರತಿ ಪುಸ್ತಕವೂ ಓದುಗರ ಕೈ ಸೇರಬೇಕಾದರೆ ಇಲ್ಲಿ ಸರ್ಕಾರದ ಪಾತ್ರ ಅತಿಮುಖ್ಯ. ಕಾರಣ ಪ್ರಕಾಶಕರಿಗೆ ಕಡಿಮೆ ಬೆಲೆಯಲ್ಲಿ ಮುದ್ರಣ ಕಾಗದವನ್ನು ನೀಡುವುದು ಮತ್ತು ಪ್ರಕಟಿಸಿದಂತಹ ಪುಸ್ತಕಗಳಲ್ಲಿ ಇಂತಿಷ್ಟು ಪ್ರಮಾಣದ ಪ್ರತಿಗಳನ್ನು ನೇರವಾಗಿ ಪ್ರಕಾಶಕರಿಂದ ಖರೀದಿಸಿ ಗ್ರಂಥಾಲಯಗಳಿಗೆ ನೀಡುವುದು. ಇದರಿಂದ ಆಯಾ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳು ಸುಲಭವಾಗಿ ಓದುಗರಿಗೆ ದೊರೆಯುವಂತಾಗುತ್ತದೆ. ಇದರಿಂದ ಪ್ರಕಾಶಕರಿಗೆ ಅಷ್ಟು ಪ್ರಮಾಣದ ಹೊರೆ ಕಡಿಮೆಯಾಗುತ್ತದೆ. ಹಾಗಾಗಿ ಇನ್ನಷ್ಟು ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲು ಸಹಾಯಕವಾಗುತ್ತದೆ. ಇದರ ಜೊತೆಗೆ ಸರ್ಕಾರದ ಅಂಗಸಂಸ್ಥೆಯಾದ ಪುಸ್ತಕ ಪ್ರಾಧಿಕಾರದ ವತಿಯಿಂದ ಎಲ್ಲಾ ತಾಲೂಕು ಮಟ್ಟಗಳಲ್ಲಿ ಪುಸ್ತಕದಂಗಡಿ ತೆರೆಯಲು ಸಹಾಯಕವಾಗುವುದು. ಹೀಗೆ ಪ್ರಕಾಶಕರು ಪ್ರಕಟಿಸಿದಂತಹ ಪುಸ್ತಕಗಳಿಗೆ ಯಾವುದೇ ರೀತಿಯಿಂದಲೂ ಹೊರೆಯಾಗದಂತೆ ನೋಡಿಕೊಂಡಲ್ಲಿ ಇನ್ನಷ್ಟು ಉತ್ತಮ ಪುಸ್ತಕಗಳೂ ಓದುಗರಿಗೆ ದೊರೆಯುವುದರಲ್ಲಿ ಸಂಶಯವಿಲ್ಲ.

 

ಸಂಗ್ರಹ: "ಪುಸ್ತಕ" ಸ್ಮರಣೆ, ಕರ್ನಾಟಕ ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘ (ರಿ), ಬೆಂಗಳೂರು.

Comments (0) >>
Write comment

busy