Sahitya Chintane
Authors
Pustaka Marata : Sudharane Hege | Pustaka Marata : Sudharane Hege |
|
| Written by Sri Vishnu Nayak | |
|
’ನಮ್ಮೊಂದಿಗೆ ಪುಸ್ತಕಗಳಿದ್ದರೆ ನಾವೆಂದಿಗೂ ಒಬ್ಬಂಟಿಗರಾಗಿರುವುದಿಲ್ಲ ಎನ್ನುತ್ತಾರೆ - ಈ ದೇಶದ ಶ್ರೇಷ್ಠ ಶಿಕ್ಷಕರಲ್ಲಿ ಒಬ್ಬರಾದ ಡಾ. ಸರ್ವಪಲ್ಲಿ ರಾಧಕೃಷ್ಣನ್. ’ಒಂದು ಉತ್ತಮ ಗ್ರಂಥವನ್ನು ನಾಶಪಡಿಸುವುದೆಂದರೆ ಒಬ್ಬ ಸಜ್ಜನ ಮನುಷ್ಯನನ್ನೇ ಕೊಂದಂತೆ’ ಎನ್ನುತ್ತಾರೆ ಜಾನ್ ವಿಲ್ಟನ್.
ಕನ್ನಡದ ಗ್ರಂಥ ಪ್ರಕಾಶನ್ ವ್ಯವಸ್ಥೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದಾಗುದೆ.
ಲೇಖಕನೇ ಪ್ರಕಾಶಕನಾಗಿ ಹೊರತರುತ್ತಿರುವ ಪುಸ್ತಕಗಳದು ಒಂದು ಭಾಗ. ಸಾಹಿತ್ಯಕ -
ಸಾಂಸ್ಕೃತಿಕ ಕಳಕಳಿಯಿಂದ ಗ್ರಂಥ ಪ್ರಕಟಣೆಗೆ ಇಳಿದ ಹವ್ಯಾಸಿ ಪ್ರಕಾಶನಗಳೆಂಬ ಇನ್ನೊಂದು
ವರ್ಗ. ಪುಸ್ತಕ ಪ್ರಕಟಣೆಯನ್ನು ಬೃಹತ್ ಉದ್ಯಮವಾಗಿ ಪರಿಗಣಿಸಿ ಅಪ್ಪಟ ವ್ಯಾಪಾರೀ
ಮನೋಭಾವದೊಂದಿಗೆ ನಡಿಸಿಕೊಂಡು ಬಂದಿರುವ - ಬಹುಕೋಟಿ ಹಣ ತೊಡಗಿಸಿದ ಪ್ರಕಾಶನೋದ್ಯಮಿಗಳ
ಮತ್ತೊಂದು ವರ್ಗ. ನಾಲ್ಕನೆಯದು ಸರಕಾರದ ಅನುದಾನದಿಂದ ನಡೆಯುವ ಅಥವಾ ಸರಕಾರದ್ದೇ
ಅಂಗಸಂಸ್ಥೆಗಳಂತೆ ಕೆಲಸ ಮಾಡುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ
ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾನಿಲಯಗಳ ಪ್ರಸಾರಾಂಗಗಳು,
ವಿವಿಧ ಅಕಾಡೆಮಿಗಳು ಇತ್ಯಾದಿ. ಗ್ರಂಥೋದ್ಯಮದ ಅಭಿವೃದ್ಧಿಯ ವಿಚಾರದಲ್ಲಿ ಇಡೀ ದೇಶಕ್ಕೆ ಮಾರ್ಗದರ್ಶನ ನೀಡಬಲ್ಲಂಥ ಗ್ರಂಥಾಲಯ ತಜ್ಞರು ಕರ್ನಾಟಕದಲ್ಲೇ ಇದ್ದರು, ಇದ್ದಾರೆ ಕೂಡ. ಸರ್ಕಾರಕ್ಕೆ ಇದು ಗೊತ್ತಿಲ್ಲವೆ ಅಥವಾ ಗೊತ್ತಿದ್ದೂ ಜಾಣಕುರುಡನ್ನು ಪ್ರದರ್ಶಿಸುತ್ತಿದೆಯೆ ಎಂದು ಕೇಳಬೇಕಾಗುತ್ತದೆ. ಇತ್ತೀಚೆಗೆ ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳು ಗ್ರಂಥ ಪ್ರಕಟನೆಗೆ ಸಂಬಂಧಪಟ್ಟಂತೆ, ಒಂದಲ್ಲಾ ಒಂದು ಅರ್ಥದಲ್ಲಿ ವಿಶೇಷ ಅನುಭವವನ್ನು ಪಡೆದಿಕೊಂಡಿರತಕ್ಕಂಥ ಆಯ್ದ ಲೇಖಕ - ಪ್ರಕಾಶಕರ ಸಭೆಯೊಂದನ್ನು ವಿಧಾನಸೌಧದ ಸಭಾಂಗಣದಲ್ಲಿ ಕರೆದಿದ್ದರು. ಅದಕ್ಕೆ ಪೂರ್ವದಲ್ಲಿ ಗ್ರಂಥಾಲಯ ಇಲಾಖೆಗೆ ಸಂಬಂಧಪಟ್ಟ ಹಿರಿಯ ಐ.ಎ.ಎಸ್. ಅಧಿಕಾರಿ ವಿಜಯಭಾಸ್ಕರ ಅವರು, ’ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಪರಿಣಿತರ ಸಭೆಯೊಂದನ್ನು ಕರೆದು, ಪ್ರಸ್ತುರ ನಾಡಿನ ಲೇಖಕ ಪ್ರಕಾಶಕರು ಎದುರಿಸುತ್ತಿರುವ ಬಿಕ್ಕಟ್ಟುಗಳ ಬಗ್ಗೆ ಮುಕ್ತ ಚರ್ಚೆಗೆ ಆಹ್ವಾನಿಸಿದ್ದರು. ವಿಧಾನ ಪರಿಷತ್ ಸಭಾಪತಿಯವರು ಕರೆದದ್ದು ಗ್ರಂಥಾಲಯ ಸದನ ಸಮಿತಿ ಸಭೆಯ ಒಂದು ಮುಂದುವರಿದ ಭಾಗವಾಗಿತ್ತು. ಆ ಸಮಿತಿಯಲ್ಲಿದ್ದ ಕೆಲವು ಶಾಸಕರು ಅಂದಿನ ಸಭೆಗೆ ಬಂದಿದ್ದರು. ಹಿರಿಯ ವಿದ್ವಾಂಸರಾದ ಶಾಸಕ ಡಾ. ಕಂಬಾರ ಅವರೂ ಕೂಡ ಉಪಸ್ಥಿತರಿದ್ದರು. ಈ ಎರಡೂ ಸಭೆಗಳಲ್ಲಿ ಮೂಡಿ ಬಂದ ಅಭಿಪ್ರಾಯವನ್ನು ಈಗಲಾದರೂ ಸರ್ಕಾರ ಗಂಭೀರವಾಗಿ ಪರಿಗಣೆಸಿದಲ್ಲಿ ನಮ್ಮ ನಡುವೆ ಇರುವ ಪುಸ್ತಕ ಮಾರಾಟದ ಬಹಳಷ್ಟು ಸಮಸ್ಯೆಗಳು ಕರಗವಹುದಾಗಿದೆ. ಸರ್ಕಾರೀ ಮಟ್ಟದ ಗ್ರಂಥ ಖ್ರೀದಿ ವ್ಯವಸ್ಥೆಯಲ್ಲಿ ಏಕಗವಾಕ್ಷಿ ಪದ್ಧತಿಯನ್ನು - ಬಹುಪ್ರಸಿದ್ಧಿಯಿಂದ ರಾಜಧಾನಿ ಮೂಲದ ಒಬ್ಬ ಪ್ರಕಾಶಕರು ಬಿಟ್ಟರೆ - ಉಳಿದ ಎಲ್ಲರೂ ಒಪ್ಪಿಕೊಂಡಿರುವುದು ಬಹು ಅರ್ಥಪೂರ್ಣವಾದ ಬೆಳವಣಿಗೆಯೆಂದೇ ನಾನು ಭಾವಿಸಿದ್ದೇನೆ. ಪ್ರಾಯಶಃ ಸರ್ಕಾರಕ್ಕೂ ಕೂಡ ಈ ಸಲಹೆಯಲ್ಲಿ ಅರ್ಥವಿದೆ ಎಂಬುದು ಮನವರಿಕೆಯಾದಂತೆ ತೋರುತ್ತದೆ.
ರಾಜ್ಯದ ಎಲ್ಲ ಮೂಲೆಗಳಲ್ಲಿರುವ ಲೇಖಕ - ಪ್ರಕಾಶಕರು ಪುಸ್ತಕಗಳನ್ನು ಖರೀದಿಸಿ ರಜ್ಯ
ಕೇಂದ್ರಾಲಯವಾಗಲಿ, ನಿರ್ದೇಶಕರ ಕಾರ್ಯಾಲಯವಾಗಲಿ ಇಟ್ಟುಕೊಳ್ಳುವುದಾದರೂ ಎಲ್ಲಿ
ಸಾಮಾನ್ಯ ಪ್ರಶ್ನೆ ಇದ್ದಂತೆ ತೋರುತ್ತದೆ. ಅದರ ಅಗತ್ಯ ಇಲ್ಲದೆಯೂ ’ಏಕಗವಾಕ್ಷಿ’
ಪದ್ಧತಿಯನ್ನು ನಿರಂತರವಾಗಿ ಚಾಲ್ತಿಯಲ್ಲಿಡಬಹುದಾಗಿದೆ. ಇದೇನೂ ಸರ್ಕಾರಕ್ಕೆ ಹೊಸ
ಅನುಭವವಲ್ಲ. ಸುಮಾರು ಎರಡು ದಶಕದಷ್ಟು ಹಿಂದೆ ಈ ಪದ್ಧತಿಯನ್ನೇ ನಮ್ಮ ಗ್ರಂಥಾಲಯ ಇಲಾಖೆ
ಅನುಸರಿಸಿತ್ತು. ಆಯ್ಕೆಯಾದ ಗ್ರಂಥಕ್ಕೆ ಖರೀದಿ ಆದೇಶವನ್ನು ತಾನೇ ಕಳಿಸಿ ಅದರೊಂದಿಗೆ
ಜಿಲ್ಲಾ ಮತ್ತು ನಗರ ಗ್ರಂಥಾಲಯಗಳ ವಿಳಾಸಪಟ್ಟಿಯನ್ನೂ- ಪುಸ್ತಕಗಳ ಪುರವಟೆ
ಮಾಡುವುದಕ್ಕಾಗಿ ಇಟ್ಟಿತ್ತು. ಸುಮಾರು ಮೂರು ವರ್ಷ ಕಾಲ ಅಬಾಧಿತವಾಗಿ ನಡೆದ ಈ
ವ್ಯವಸ್ಥೆಯನ್ನು ಬದಲಿಸಿ ವಿಕೇಂದ್ರೀಕರಣದ ಹೆಸರಿನಲ್ಲಿ ಚಿಕ್ಕ ಪ್ರಕಾಶಕರನ್ನು
ಸಂಪೂರ್ಣ ನಾಶ ಮಾಡಹೊರಟದ್ದರ ಹಿಂದಿನ ಹುನ್ನಾರು ಯಾವುದು?...
ಕೊನೆಯದಾಗೆ ಇನ್ನೊಂದು ಮಾತು. ಈ ಮಾತು ಸರಕಾರದ ಕೆ.ಎಸ್.ಟಿ. ನಿಯಮಕ್ಕೆ ಸಂಬಂಧಿಸಿದ್ದು, ಈ ನಿಯಮವನ್ನು ಪುಸ್ತಕ ಪ್ರಕಟಿಸಿ ಮಾರಾಟದಂಗಡಿ ತೆರೆದು ನಿತ್ಯವ್ಯವಹಾರ ಕುದುರಿಸುವ ಗ್ರಂಥೋದ್ಯಮಗಳಿಗೆ ಅನ್ವಯವಾಗಲಿ, ಬೇಡ ಅನ್ನುವುದಿಲ್ಲ. ಗ್ರಾಮೀಣ ಭಾಗಗಳಲ್ಲಿ ಅಪ್ಪಟ ಸಾಂಸ್ಕೃತಿಕ ಕಾಳಜಿಯಿಂದ, ತಮ್ಮ ಪರಿಸರದ ಲೇಖಕರು ಕಳೆದು ಹೋಗದಂತೆ ನೋಡಿಕೊಳ್ಳುವ ಉದ್ದೇಶದಿಂದ - ವರ್ಷಕ್ಕೆ ಎರಡೋ - ನಾಲ್ಕೋ ಪುಸ್ತಕಗಳನ್ನು ಕಷ್ಟಪಟ್ಟು ಹೊರತಂದು ಅಲ್ಲಿ ಇಲ್ಲಿ ಇಟ್ಟು (ಅಂದರೆ ಸ್ವಂತ ಮಾರಾಟ ಮಳಿಗೆಯನ್ನೇ ತೆರೆಯದೆ ಮತ್ತು ಯಾವುದೇ ನಿಯಮಿತ ಮಾರಾಟ ವ್ಯವಸ್ಥೆ ಒಳಪಡದೇ ಇರುವ) ಒಂದು ಸಾವಿರ ಪ್ರತಿಗಳನ್ನು ಐದಾರು ವರ್ಷಗಳ ಕಾಲಾವಧಿಯಲ್ಲಿ ಮಾರಾಟ ಮಾಡುವ ಬಡಪಾಯಿ ಪ್ರಕಾಶಕರಿಗೂ ಈ ನಿಯಮ ಅಳವಡಿಸುವುದು ಎಷ್ಟು ಸರಿ? ... ಇದೊಂದು ಸರಕಾರಿ ಪ್ರಾಯೋಜಿತ ಸಾಂಸ್ಕೃತಿಕ ಅಪರಾಧವಲ್ಲವೆ? ಈ ರಾಜ್ಯದ ಅನೇಕ ಸಣ್ಣ ಪ್ರಕಾಶನ ಸಂಸ್ಥೆಗಳು ಕೇವಲ ಪುಸ್ತಕಗಳನ್ನಷ್ಟೇ ಪ್ರಕಟಿಸದೇ ಸಾಹಿತ್ಯ ಕಮ್ಮಟ, ಕವಿಗೋಷ್ಠಿ, ಬೀದಿನಾಟಕ, ಸ್ಪರ್ಧೆ - ಸಮಾರಂಭಗಳಂಥ ಅನೇಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಜೊತೆಜೊತೆಗೆ ನಡೆಸಿಕೊಂಡು ಬಂದಿವೆ. ಶಾಶ್ವತ ಮಾರಾಟ ಮಳಿಗೆ ಇಟ್ಟುಕೊಳ್ಳದೆ ಸಾಂಸ್ಕೃತಿಕ ಕಾಳಜಿಯಿಂದ ಈ ಕ್ಷೇತ್ರದಲ್ಲಿ ಅಷ್ಟೊ ಇಷ್ಟೊ ಪ್ರಕಟ ಮಾಡುತ್ತಿರುವವರಿಗೆ ಈ ನಿಯಮ ಅನ್ವಯಿಸುವುದು - ಇಲಾಖೆಯ ಮೂಲಕ ಎತ್ತಿದೆ ಬೆತ್ತದಂತಿದೆ.
ಸಂಗ್ರಹ: "ಪುಸ್ತಕ" ಸ್ಮರಣ ಸಂಚಿಕೆ, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ), ಬೆಂಗಳೂರು |