ಕನ್ನಡ ಪುಸ್ತಕ ಪ್ರಿಯರಿಗೆ ಮತ್ತು ಸಾಹಿತ್ಯಾಸಕ್ತರಿಗೆಂದೇ ಪ್ರಥಮ ಬಾರಿಗೆ ಯೂಲೊಪ್ ಸಂಸ್ಥೆ books.yulop.com ಅಂತರ್ಜಾಲವನ್ನು ಅಭಿವೃದ್ಧಿಪಡಿಸಿದೆ. ಈ ಅಂತರ್ಜಾಲದಲ್ಲಿ ೨೦೦೦ಕ್ಕೂ ಅಧಿಕ ಕನ್ನಡ ಪುಸ್ತಕಗಳು ಲಭ್ಯ. ಇಲ್ಲಿ ಕಥೆ, ಕಾದಂಬರಿ, ಕವನ, ನಾಟಕ, ಮಕ್ಕಳ ವಿಭಾಗ, ಇತಿಹಾಸ, ಧಾರ್ಮಿಕ, ಆರೋಗ್ಯ, ಪ್ರಮುಖರ ಆತ್ಮ ಚರಿತ್ರೆಗಳು ಹೀಗೆ ಮುಂತಾದ ವರ್ಗ ಮತ್ತು ಉಪ-ವರ್ಗಗಳಲ್ಲಿ ವಿಭಾಗಿಸಲ್ಪಟ್ಟ ಕನ್ನಡ ಪುಸ್ತಕಗಳು ಸಿಗುತ್ತವೆ. ವಿವಿಧ ವೃತ್ತಿಯಲ್ಲಿರುವವರಿಗೂ ಮತ್ತು ಎಲ್ಲಾ ವಯೋಮಾನದವರಿಗೂ ಒಂದಲ್ಲ ಒಂದು ಕಾರಣಕ್ಕೆ ಇಲ್ಲಿನ ಪುಸ್ತಕಗಳು ಉಪಯುಕ್ತ.
ಇದರೊಂದಿಗೆ ಸಾಹಿತ್ಯಾಸಕ್ತರಿಗಂತೂ ಸಾಹಿತ್ಯದ ಬಗ್ಗೆಯ ಎಲ್ಲ ಮಾಹಿತಿಗಳೂ ಇಲ್ಲಿ ಲಭ್ಯ. ಹೊಸ ಕೃತಿಗಳ ಬಿಡುಗಡೆ ಸಮಾರಂಭಗಳ ವಿವರಗಳನ್ನೊಳಗೊಂಡಂತೆ ಸಾಹಿತಿಗಳ ಜೀವನ ಪರಿಚಯವೂ ಇಲ್ಲಿದೆ. ’ಓದುಗರ ವೇದಿಕೆ’ಯ ಮುಖಾಂತರ ಲೇಖಕರೊಂದಿಗೆ ಅವರ ಕೃತಿಗಳ, ಲೇಖನಗಳ ಬಗ್ಗೆ ಚರ್ಚಿಸಲು ಅವಕಾಶ ಇಲ್ಲಿದೆ. ಯೂಲೊಪ್ ಸಂಸ್ಥೆಯು ಕನ್ನಡಿಗರಿಗಾಗಿ ನೀಡಿರುವ ಈ ಕೊಡುಗೆಯನ್ನು ಉಪಯೋಗಿಸುವ ಮೂಲಕ ಬಳಕೆದಾರರು, ಸಂಸ್ಥೆಯ ಶ್ರಮವನ್ನು ಸಾರ್ಥಕಗೊಳಿಸಬೇಕಿದೆ.
|